ನವದೆಹಲಿ :  ಒರಿಸ್ಸಾ, ಗುಜರಾತ್, ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ತೌಕ್ತೆ ಚಂಡಮಾರುತ ಅಬ್ಬರ ಜೋರಾಗಿತ್ತು.


COMMERCIAL BREAK
SCROLL TO CONTINUE READING

ಇದೀಗ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾದಲ್ಲಿ ಯಾಸ್ ಚಂಡಮಾರುತ (Yaas Cyclone) ಅಪ್ಪಳಿಸಲು ಸಜ್ಜಾಗಿದೆ. ನಿನ್ನೆ ಸಂಜೆ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ಭಾರೀ ಬಿರುಗಾಳಿ ಬಿಸಿದ್ದು, ನಾಳೆಗೆ (ಮೇ 26) ಯಾಸ್ ಚಂಡಮಾರುತ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ' ಹೈ ಅಲರ್ಟ್' ಘೋಷಣೆ ಮಾಡಲಾಗಿದೆ.


ಇದನ್ನೂ ಓದಿ : Cyclone Yaas : 90 ರೈಲುಗಳನ್ನು ರದ್ದು ಮಾಡಿದ Indian Railway, ವಿಮಾನ ಸೇವೆಯ ಮೇಲೆಯೂ ಪ್ರಭಾವ


ಈ ಎರಡೂ ರಾಜ್ಯಗಳಲ್ಲಿ ನಿನ್ನೆ ಸಂಜೆಯಿಂದ ಭಾರೀ ಮಳೆ(Extremely Heavy Rain) ಆಗಿದ್ದು, ಕರಾವಳಿ ಪ್ರದೇಶ ಮತ್ತು ನದಿ ದಂಡೆಯ ಮೇಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಈಗಾಗಲೇ 149 NDRF​ ​ ತಂಡಗಳು ಕಾರ್ಯಾಚರಣೆಗೆ ಸಿದ್ಧವಾಗಿವೆ. ಈಗಾಗಲೇ 100ಕ್ಕೂ ಹೆಚ್ಚು NDRF​ ಸಿಬ್ಬಂದಿಯನ್ನು ಪಶ್ಚಿಮ ಬಂಗಾಳ ಮತ್ತು ಒರಿಸ್ಸಾಗೆ ಕಳುಹಿಸಲಾಗಿದೆ, 26 ಹೆಲಿಕಾಪ್ಟರ್​ಗಳನ್ನು ಯಾವುದೇ ಕ್ಷಣದಲ್ಲಿ ಜನರ ರಕ್ಷಣೆಗೆ ಬರಲು ಸಿದ್ಧವಾಗಿವೆ. 


ಇದನ್ನೂ ಓದಿ : SBI ಡೆಬಿಟ್ ಕಾರ್ಡ್ ನಲ್ಲೂ ಸಿಗಲಿದೆ EMI ಸೌಲಭ್ಯ, ಲಾಭ ಪಡೆಯಲು ಏನು ಮಾಡಬೇಕು ತಿಳಿದಿರಲಿ


ಮೇ 26ರಂದು ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ(Paschim Bengal)ದಲ್ಲಿ ಅಪ್ಪಳಿಸಲಿರುವ ಈ ಚಂಡಮಾರುತ ಗಂಟೆಗೆ 155 ಕಿ.ಮೀ.ಯಿಂದ 165 ಕಿ.ಮೀ. ವೇಗದಲ್ಲಿ ಚಲಿಸಲಿದೆ.


ಇದನ್ನೂ ಓದಿ : Cyclone Yaas Latest Update : ವಿನಾಶಕಾರಿಯಾಗಿರಲಿದೆ ಯಾಸ್ ಚಂಡಮಾರುತ; ಈ ರಾಜ್ಯಗಳಿಗೆ ಹೆಚ್ಚಿನ ಅಪಾಯ


ನಾಳೆ ಯಾಸ್ ಚಂಡಮಾರುತ(Yaas Cyclone) ಬಿಸುವುದರಿಂದ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಹಾಗೂ ಭೂಕುಸಿತವಾಗುವ ಸಾಧ್ಯತೆಯಿದೆ. ಯಾಸ್ ಚಂಡಮಾರುತದಿಂದ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಪಶ್ಚಿಮ ಬಂಗಾಳದಲ್ಲಿ 10 ಲಕ್ಷ ಜನರನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ಈ ಎರಡೂ ರಾಜ್ಯಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಕೇಂದ್ರ ಸರ್ಕಾರದೊಂದಿಗೆ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಮಾತುಕತೆ ನಡೆಸಿ, ಅಗತ್ಯ ಸೌಲಭ್ಯವನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.