ಮುಂಬೈ: ಸೋಮವಾರದಂದು ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿರುವ ಅಕೊಲಾದಲ್ಲಿ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ದ ಶೆತ್ಕಾರಿ ಜಾಗರ್ ಮಂಚ್ ಸಂಘಟನೆಯು ಹಮ್ಮಿಕೊಂಡಿದ್ದ  ಹೋರಾಟದಲ್ಲಿ ಭಾಗಿಯಾಗಿದ್ದ ಯಶವಂತ್ ಸಿನ್ಹಾರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಬಂಧನಕ್ಕೂ ಮೊದಲು ಕಾಪುಸ್ ಸೋಯಾಬಿನ್ ಧಾನ್ ಪರಿಷದ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಸಿನ್ಹಾ ಮಾತನಾಡುತ್ತಾ  ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಶೇಕಡಾ 50 ರಷ್ಟು ಬೆಂಬಲ ಬೆಲೆಯನ್ನು ಘೋಷಿಸಿತ್ತು, ಆದರೆ ಅದು ಅಧಿಕಾರಕ್ಕೆ ಬಂದ ನಂತರ ಅದೆಲ್ಲವನ್ನು ಮರೆತಿದೆ ಎಂದರು. ಈಗ ನೀವು ರೈತರ ಅಕ್ರೋಶವನ್ನು ನೋಡುತ್ತಿದ್ದಿರಿ ಮುಂದೆ ಸಂಭವಿಸುವ ಯಾವುದೇ ಘಟನೆಗಳಿಗೆ ರೈತರು ಕಾರಣವಲ್ಲ ಎಂದು ತಿಳಿಸಿದರು. ಇನ್ನು ಮುಂದುವರೆದು  ಭಾರತಿಯ ಸೈನಿಕರು ಗಡಿಯಲ್ಲಿ ಸರ್ಜಿಕಲ್ ದಾಳಿಯನ್ನು ಹಮ್ಮಿಕೊಂಡಂತೆ  ರೈತರು ಸರ್ಕಾರದ ವಿರುದ್ದವೇ ಅಂತಹ ಸರ್ಜಿಕಲ್ ದಾಳಿಯನ್ನು ಕೈಗೊಳ್ಳಲಿದ್ದಾರೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.


ಶೆತ್ಕಾರಿ ಜಾಗರ್ ಮಂಚ್ ಸಂಘಟನೆಯು ಕನಿಷ್ಠ 50.000 ರೂಪಾಯಿಗಳ ಬೆಂಬಲ ಬೆಲೆಯನ್ನು ರೋಗದಿಂದ ನಾಶವಾದ ಹತ್ತಿ ಬೆಳೆಗೆ ನೀಡಬೇಕೆಂದು ಅದು ನಿರಂತರವಾಗಿ ಸರ್ಕಾರವನ್ನು ಒತ್ತಾಯಿಸುತ್ತಿದೆ 


ಅಕೋಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಯಲ್ಲಿ  ಭಾಗಿಯಾಗಿದ್ದ ಯಶವಂತ ಸಿನ್ಹಾ ಸಹಿತ ಸುಮಾರು 250 ರೈತರನ್ನು  ಬಾಂಬೆ ಪೋಲಿಸ್ ಕಾಯ್ದೆ ಸೆಕ್ಷನ್ 68ರ ಅಡಿಯಲ್ಲಿ  ಇವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ ಎಂದು  ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಕೇಶ್ ಕಲಾಸಾಗರ ತಿಳಿಸಿದ್ದಾರೆ.