ನವದೆಹಲಿ:  ಮೋದಿ ಸರ್ಕಾರದಲ್ಲಿ ರಫೇಲ್ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರರದ ಬಗ್ಗೆ ಮಾಜಿ ಬಿಜೆಪಿ ನಾಯಕ ಯಶವಂತ ಸಿನ್ಹಾ ಪ್ರಧಾನಿ ಮೋದಿ ಸರಕಾರಕ್ಕೆ 6 ಪ್ರಶ್ನೆಗಳನ್ನು ಕೇಳಿದ್ದಾರೆ. 


COMMERCIAL BREAK
SCROLL TO CONTINUE READING

1. ಪ್ಯಾರಿಸ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ 36 ಯುದ್ದ ವಿಮಾನಗಳನ್ನು ಮಾತ್ರ  ಖರೀದಿ ಮಾಡಲು ಈ ರಕ್ಷಣಾ ಇಲಾಖೆಯ ಪ್ರಕ್ರಿಯೆಯನ್ನು ಅಪಹಾಸ್ಯ ಮಾಡಿದ್ದು ಏಕೆ ? 


2. 126 ರಿಂದ 36 ರವರೆಗೆ  ಯುದ್ದ ವಿಮಾನದ ಸಂಖ್ಯೆಯನ್ನು ಕಡಿತಗೊಳಿಸುವುದರ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಅವರು ಅಪಾಯಕ್ಕೆ ಒಳಪಡಿಸಲಿಲ್ಲವೇ?


3. ಒಪ್ಪಂದದಿಂದ ಸಂಪೂರ್ಣವಾಗಿ ಎಚ್ಎಎಲ್ ಅನ್ನು ನಾಕ್ಔಟ್ ಮಾಡುವುದರ ಮೂಲಕ, "ಮೇಕ್ ಇನ್ ಇಂಡಿಯಾ" ಎಂಬ ತಮ್ಮ ಕಾರ್ಯಕ್ರಮಕ್ಕೆ ಅವರು ಅಪಹಾಸ್ಯ ಮಾಡಲಿಲ್ಲವೇ?


4. ಒಂದು ಅನನುಭವಿ ಖಾಸಗಿ ಕಂಪನಿಯನ್ನು ಪ್ರಮುಖ ಒಪ್ಪಂದದ ಪಾಲುದಾರರನ್ನಾಗಿ ಮಾಡಿದ್ದು ಅಲ್ಲದೆ ಸ್ವತಃ ಪ್ರಧಾನಮಂತ್ರಿಯ ಶಿಫಾರಸು ಮಾಡಿದ್ದು ಈ ಒಪ್ಪಂದದ ಸಮಗ್ರತೆ ಬಗ್ಗೆ ಗಂಭೀರ ಸಂಶಯಗಳನ್ನು ಹೆಚ್ಚಿಸುವುದಿಲ್ಲವೇ?


5.ಈ ಒಪ್ಪಂದದಲ್ಲಿ ಯಾವುದೇ ಅನುಮಾನವಿಲ್ಲದಿದ್ದರೆ ಸರ್ಕಾರ ಯಾಕೆ ಈ ಸತ್ಯವನ್ನು ಬಹಿರಂಗಪಡಿಸಲು ನಿರಾಕರಿಸುತ್ತಿದೆ?


 6. ಒಂದು ವೇಳೆ ಅವರ ಕೈ ಶುಚಿಯಾಗಿದ್ದರೆ ಒಪ್ಪಂದದ ಕುರಿತು ವಿಚಾರಣೆ ನಡೆಸುವುದಕ್ಕೆ  ಸರಕಾರ ಏಕೆ ಹಿಂಜರಿಯುತ್ತಿದೆ? ಈಗಾಗಲೇ ಸಾರ್ವಜನಿಕ ಡೊಮೇನ್ನಲ್ಲಿರುವ ಸತ್ಯಗಳ ಬಗ್ಗೆ ಸಹ ಪಾರದರ್ಶಕ ಮತ್ತು ರಹಸ್ಯವಾಗಿಯೇ ಇಡುತ್ತಿರುವುದು ಏಕೆ? ಮತ್ತು ಯಾಕೆ  ಅರ್ಧ ಸತ್ಯಗಳು, ಸುಳ್ಳುಸುದ್ದಿಗಳನ್ನು ಅದು ತನ್ನ ರಕ್ಷಣೆಗಾಗಿ ಬಳಸಿಕೊಳ್ಳುತ್ತಿದೆ.