ನವದೆಹಲಿ: ಮಾಜಿ ಕೇಂದ್ರ ಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಯಶವಂತ್ ಸಿನ್ಹಾ ಇಂದು ಬಿಜೆಪಿಗೆ ವಿದಾಯ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಪಾಟ್ನಾದಲ್ಲಿ ಮಾತನಾಡಿದ ಅವರು " ಇಂದು ನಾನು  ಬಿಜೆಪಿ ಜೊತೆ ಎಲ್ಲ ರೀತಿಯ ಜವಾಬ್ದಾರಿಗಳಿಂದ ತೊರೆಯುತ್ತಿದ್ದೇನೆ,ಮತ್ತು ಚುನಾವಣಾ ರಾಜಕಾರಣಕ್ಕೂ ವಿದಾಯ ಹೇಳುತ್ತಿದ್ದೇನೆ" ಎಂದು ರಾಷ್ಟ್ರ ಮಂಚ್ ನ ಸಭೆಗೆ ಮುನ್ನ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ರಾಷ್ಟ್ರ ಮಂಚ್ ನ ಸಭೆಯಲ್ಲಿ ರಾಷ್ಟ್ರೀಯ ಜನತಾದಳದ ನಾಯಕರು ಮತ್ತು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರು ಭಾಗವಹಿಸಿದ್ದಾರೆ. 


ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ, ಈ ಹಿಂದೆ ಹಣಕಾಸು ಮತ್ತು ವಿದೇಶಾಂಗ ಖಾತೆಯನ್ನು ವಾಜಪೇಯಿ ರವರು ಪ್ರಧಾನಿಯಾಗಿದ್ದ ವೇಳೆ ಕಾರ್ಯ ನಿರ್ವಹಿಸಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲುವು ಸಾಧಿಸಿದ ನಂತರ ಅವರನ್ನು ಹಿರಿಯ ನಾಯಕ ಅಡ್ವಾಣಿಯವರ ಜೊತೆ ಇವರನ್ನು ಕೂಡ ಮೂಲೆಗುಂಪು ಮಾಡಲಾಗಿತ್ತು.