ನವ ದೆಹಲಿ: ಭಾರತದ ಆರ್ಥಿಕತೆಯು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿದೆ ಎಂದು ಮೋದಿ ಸರ್ಕಾರ ಹೇಳುತ್ತಿದ್ದರು, ಹಿರಿಯ ಬಿಜೆಪಿ ನಾಯಕ ಯಶ್ವಂತ್ ಸಿನ್ಹಾ ಅವರು ಪ್ರಸಕ್ತ ಆಡಳಿತವು ಹೇಳಿಕೆಗೆ ಬದ್ದವಾಗಿಲ್ಲ ಎಂದು ಹೇಳಿದರು. ಸಂಪಾದಕೀಯದ ಬಗ್ಗೆ ಮಾತನಾಡಿದ ಅವರು, ಇಂದು ಭಾರತವು ಆರ್ಥಿಕ ಸ್ಥಿತಿಯಲ್ಲಿದೆ ಎಂದು, ಹಿಂದಿನ ಸರ್ಕಾರವನ್ನು ದೂಷಿಸುವುದಿಲ್ಲ ಎಂದು ಹೇಳಿದರು.


COMMERCIAL BREAK
SCROLL TO CONTINUE READING

"ಹಿಂದಿನ ಸರ್ಕಾರಗಳನ್ನು ನಾವು ದೂಷಿಸುವುದಿಲ್ಲ. ಈ ಅವಧಿಯಲ್ಲಿ ನಮಗೆ ಪೂರ್ಣ ಅವಕಾಶ ದೊರೆತಿದೆ... ಜನರು ಉದ್ಯೋಗ ಪಡೆಯಬೇಕೆಂದು ಬಯಸುತ್ತಾರೆ, ಆದರೆ ಕೆಲಸವಿಲ್ಲ ಎಂದು ದೂಷಿಸುತ್ತಿದ್ದಾರೆ" ಎಂದು ಅವರು ವಿಷಾದ ವ್ಯಕ್ತಪಡಿಸಿದರು.


GSTಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಒಪ್ಪಿಕೊಂಡ ಯಶ್ವಂತ್ ಸಿನ್ಹಾ, "GSTಗೆ ನನ್ನ ಸಂಪೂರ್ಣ ಬೆಂಬಲವಿದೆ, ಆದರೆ ಅದರ ಅನುಷ್ಠಾನ ಸಮಸ್ಯೆಯಿಂದ ಕೂಡಿತ್ತು. ನೋಟು ಅಮಾನೀಕರಣದ ಬೆನ್ನಲ್ಲೇ GST ಜಾರಿಗೆ ತಂದಿರುವುದು ಒಂದರ ಹಿಂದೆ ಮತ್ತೊಂದು ಆಘಾತ ನೀಡಿದಂತೆ" ಎಂದು ಹೇಳಿದರು.


ನೋಟು ಅಮಾನಿಕರನಕ್ಕಾಗಿ ಸರ್ಕಾರವನ್ನು ಟೀಕಿಸಿದ ಯಶ್ವಂತ್ ಸಿನ್ಹಾ, ಆರ್ಥಿಕ ಪರಿಸ್ಥಿತಿಯು ಉತ್ತಮ ಸ್ಥಿತಿಯಲ್ಲಿಲ್ಲದ ಸಮಯದಲ್ಲಿ ಈ ನಿರ್ಧಾರ ತೆಗೆದು ಕೊಂಡಿರುವುದು ತಪ್ಪಾಗಿದೆ. ಮುಂದಿನ ದಿನಗಳಲ್ಲಿ ಸ್ಥಿತಿ ಉತ್ತಮವಾಗಬಹುದು, ಆದರೆ ಪರಿಸ್ಥಿತಿ ಈಗ ಉತ್ತಮವಾಗಿಲ್ಲ. ದೀರ್ಘಾವಧಿಯಲ್ಲಿ ಅದರ ಲಾಭ ದೊರೆಯುವವರೆಗೆ ನಾವು ಕಾಲವಾಗಿರುತ್ತೇವೆ ಎಂದು ತಿಳಿಸಿದರು.


ಮತ್ತೊಬ್ಬ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ, "ಯಶ್ವಂತ್ ಸಿನ್ಹಾರ ಹೇಳಿಕೆ  ಭಾರತದ ಅರ್ಥಿಕ ಸ್ಥಿತಿಯ ಮೇಲೆ ಕನ್ನಡಿ ಹಿಡಿದಂತಿದೆ" ಎಂದು ಹೇಳಿದ್ದಾರೆ.