ನವದೆಹಲಿ: ಮಾಜಿ ಹಣಕಾಸು ಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ಬುಧವಾರ ಮೋದಿ ಸರ್ಕಾರದ ಆರ್ಥಿಕತೆಯು ನಿಧಾನಗತಿಯಲ್ಲಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಅವರ ಜಯಂತ್ ಸಿನ್ಹಾ ಹೊಸ ಆರ್ಥಿಕತೆಗೆ ಲಕ್ಷಾಂತರ ಉದ್ಯೋಗಗಳು ದೊರೆಯುತ್ತವೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಹೊಸ ಆರ್ಥಿಕತೆಗೆ ಎಂದಿಗಿಂತಲೂ ಹೆಚ್ಚು ಪಾರದರ್ಶಕವಾಗಿರುತ್ತದೆ ಮತ್ತು ಲಕ್ಷಾಂತರ ಜನರಿಗೆ ಉದ್ಯೋಗಾವಕಾಶ ನೀಡುತ್ತದೆ. GST, ನೋಟು ಅಮಾನೀಕರಣ ಮತ್ತು ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ನಿರ್ಧಾರ ತಪ್ಪಲ್ಲ ಎಂದು ಸಿನ್ಹಾ ಟೈಮ್ಸ್ ಆಫ್ ಇಂಡಿಯಾ ಲೇಖನದಲ್ಲಿ ಬರೆದಿದ್ದಾರೆ. ಹೊಸ ಆರ್ಥಿಕತೆಯು ನವ ಭಾರತಕ್ಕೆ ಅನುಕೂಲವಾಗಲಿದೆ, ದೀರ್ಘಕಾಲದಲ್ಲಿ ಈ ಬದಲಾವಣೆಗಳು ನಮಗೆ ಅನುಕೂಲವಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿದುಬರುತ್ತದೆ ಎಂದು ಜಯಂತ್ ಸಿನ್ಹಾ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.