Jawa ನಂತರ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ Yezdi, ವೈಶಿಷ್ಟ್ಯವೇನು?
ಭಾರತೀಯ ಮಾರುಕಟ್ಟೆಯಲ್ಲಿ ಜಾವಾ (Jawa) ಯ ಮೂರು ದ್ವಿಚಕ್ರ ವಾಹನಗಳನ್ನು ಪ್ರದರ್ಶಿಸಿದ ನಂತರ, ಯೆಜ್ಡಿ (Yezdi) ಕೂಡಾ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. 80 ರ ಮತ್ತು 90 ರ ದಶಕಗಳಲ್ಲಿ ನೆಚ್ಚಿನ ಬೈಕುಗಳಾಗಿದ್ದ ಬಿಎಎಸ್ಎ ಮತ್ತು Yezdi ಕೂಡಾ ಭಾರತೀಯ ಮಾರುಕಟ್ಟೆಯಲ್ಲಿ ಪ್ರಾರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ನವದೆಹಲಿ: ಭಾರತೀಯ ಮಾರುಕಟ್ಟೆಯಲ್ಲಿ ಜಾವಾ (Jawa) ಯ ಮೂರು ದ್ವಿಚಕ್ರ ವಾಹನಗಳನ್ನು ಪ್ರದರ್ಶಿಸಿದ ನಂತರ, ಯೆಜ್ಡಿ (Yezdi) ಕೂಡಾ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. 80 ರ ಮತ್ತು 90 ರ ದಶಕಗಳಲ್ಲಿ ನೆಚ್ಚಿನ ಬೈಕುಗಳಾಗಿದ್ದ ಬಿಎಎಸ್ಎ ಮತ್ತು Yezdi ಕೂಡಾ ಭಾರತೀಯ ಮಾರುಕಟ್ಟೆಯಲ್ಲಿ ಪ್ರಾರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಜಾವಾವನ್ನು ಪ್ರಾರಂಭಿಸಿದ ಕ್ಲಾಸಿಕ್ ಲೆಜೆಂಡ್ಸ್ ಬಿಎಸ್ಎ ಮತ್ತು Yezdiಗಳನ್ನು ತರಲು ಯೋಜಿಸುತ್ತಿದೆ. Yezdi 2019 ರ ಕೊನೆಯಲ್ಲಿ ಅಥವಾ 2020 ರ ಆರಂಭದಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಹೊಸ Yezdi ಜಾವಾ ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ ಮತ್ತು ಅದರ ವ್ಯಾಪ್ತಿಯು ವಿಭಿನ್ನವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಆರಂಭದಲ್ಲಿ ಬೈಕ್ ಅನ್ನು ರಫ್ತು ಮಾಡಲಾಗುತ್ತದೆ:
Yezdi ಮೊದಲು ಬಿಎಸ್ಎ ಬ್ರ್ಯಾಂಡ್ ದೇಶದಲ್ಲಿ ಬಿಡುಗಡೆ ಮಾಡಬಹುದು. ಆಟೋ ವೆಬ್ಸೈಟ್ ರಶ್ಲೀನ್ ಪ್ರಕಟಿಸಿದ ಸುದ್ದಿ ಪ್ರಕಾರ, ಈ ಬೈಕು 500cc ಅಥವಾ 700cc ಪ್ರಬಲ ಎಂಜಿನ್ ನೊಂದಿಗೆ ಬರುತ್ತದೆ. ಈ ಬೈಕ್ ಅನ್ನು ಆರಂಭದಲ್ಲಿ ರಫ್ತು ಮಾಡಲಾಗುವುದು. ಪ್ರಸ್ತುತ, ಇದು ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಮಾರಾಟವಾಗುವುದಿಲ್ಲ. Yezdi ಹೊಸ ಮತ್ತು ಕಡಿಮೆ ವಿನ್ಯಾಸ ಎಂಜಿನ್ ಹೊಂದಿರುತ್ತದೆ. ಹೊಸ Yezdi ತೂಕವನ್ನು ಕಡಿಮೆ ಇಡಲಾಗುತ್ತದೆ, ಇದರಿಂದ ಅದು ಉತ್ತಮ ಮೈಲೇಜ್ ಅನ್ನು ನೀಡುತ್ತದೆ ಎಂದು ಮೂಲಗಳು ತಿಳಿಸಿವೆ.
ಹಳೆಯ Yezdi ವಿಶೇಷತೆ:
ಹಳೆಯ Yezdi ಮೋಟಾರ್ಸೈಕಲ್ನಲ್ಲಿ, 250cc, 2-ಸ್ಟ್ರೋಕ್, ಏರ್-ಕೂಲರ್ ಎಂಜಿನ್ ನೀಡಲಾಗಿತ್ತು, ಇದು 13 bhp ಮತ್ತು 20.5 Nm ಟಾರ್ಕ್ನ ಶಕ್ತಿಯನ್ನು ಉತ್ಪಾದಿಸುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಜಾವಾ ಬೈಕ್ನಲ್ಲಿ ನೀಡಲಾದ 293cc ಇಂಜಿನ್ ಅನ್ನು ಹೊಸ Yezdi ಯಲ್ಲಿ ನೀಡಲಾಗುವುದು ಎಂದು ನಂಬಲಾಗಿದೆ. ಮಹೀಂದ್ರಾ ಟು-ವೀಲರ್ ಬಿಎಸ್ಎನ ತಯಾರಿಕೆ ಮತ್ತು ಮಾರಾಟದ ಹಕ್ಕುಗಳನ್ನು ಖರೀದಿಸಿದೆ.
ಇದರ ಜೊತೆಯಲ್ಲಿ, ಕಂಪೆನಿಯು ಜಾವಾ ಮೋಟಾರ್ಸೈಕೇಶನ್ನೊಂದಿಗೆ ಭಾರತ ಮತ್ತು ದಕ್ಷಿಣ ಪೂರ್ವ ಏಷ್ಯಾದ ಮಾರುಕಟ್ಟೆಯಲ್ಲಿ ಬೈಕುಗಳನ್ನು ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಆರಂಭಿಸಲು ಮುಂದಾಗಿದೆ. ಬಿಎಸ್ಎ ಮತ್ತು ಜಾವಾ ದ್ವಿಚಕ್ರ ಉತ್ಪಾದನೆಯು ಮಧ್ಯಪ್ರದೇಶದ ಮಹೀಂದ್ರಾದ ಪಿಥಂಪುರ್ ಘಟಕದಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇಲ್ಲಿ ಜಾವಾ, ಜಾವಾ 42 ಮತ್ತು ಜಾವಾ ಪೆರಾಕ್ಗಳನ್ನು ಉತ್ಪಾದಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.