ನವದೆಹಲಿ: ಉತ್ತರ ಪ್ರದೇಶ ಸಂಸ್ಕೃತಿಯ ನಿರ್ದೇಶನಾಲಯವು ಆಗ್ರಾ ಜಿಲ್ಲಾ ಆಡಳಿತಕ್ಕೆ ಸಂವಿಧಾನ ಶಿಲ್ಪಿ  ಡಾ ಬಿ.ಆರ್.ಅಂಬೇಡ್ಕರ್ ಅವರ ಸ್ಥಳದಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಮೂರ್ತಿ ಪ್ರತಿಷ್ಠಾಪಿಸಲು ನಿರ್ದೇಶನ ನೀಡಿದೆ.


COMMERCIAL BREAK
SCROLL TO CONTINUE READING

ಆಗ್ರ ಮುನಿಸಿಪಲ್ ಕಾರ್ಪೋರೇಶನ್ ಆವರಣದಲ್ಲಿರುವ ಎರಡು ಅಂಬೇಡ್ಕರ್ ಎರಡು ಮೂರ್ತಿಗಳಲ್ಲಿ ಒಂದನ್ನು ತೆರವುಗೊಳಿಸಲು ಸರ್ಕಾರ  ಮುಂದಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಶಾಸಕರಾಗಿರುವ ಜಗನ್ ಪ್ರಸಾದ್ ಗಾರ್ಗ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪತ್ರವೊಂದನ್ನು ಬರೆದಿದ್ದಾರೆ. ಅಲ್ಲದೆ ಈ ಜಾಗದಲ್ಲಿ ಅಂಬೇಡ್ಕರ್ ಮೂರ್ತಿ ಬದಲಾಗಿ ಜನಸಂಘ ನಾಯಕ ದೀನ ದಯಾಳ್ ಉಪಾಧ್ಯಾಯರ ಮೂರ್ತಿ ಸ್ಥಾಪಿಸಲು ಮುಖ್ಯಮಂತ್ರಿಯನ್ನು ವಿನಂತಿಸಿದ್ದಾರೆ.


ಈ ನಿಟ್ಟಿನಲ್ಲಿ  ಏಪ್ರಿಲ್ 25 ರಿಂದ ಆದೇಶವನ್ನು ಕೈಗೊಳ್ಳಲಾಗಿದೆ ಅದಕ್ಕೆ ಪೂರಕ ಎಂಬಂತೆ ಉಪ ನಿರ್ದೇಶಕ ಅಜಯ್ ಕುಮಾರ್ ಅಗರ್ವಾಲ್  ಆಗ್ರಾ ಜಿಲ್ಲಾ ಅಧಿಕಾರಿ ಮತ್ತು  ಹಿರಿಯ ಪೊಲೀಸ್ ಅಧೀಕ್ಷಕ ಮೂರ್ತಿ ತೆರವುಗೊಳಿಸುವ ಸಂದರ್ಭದಲ್ಲಿ ಕಾನೂನು ವ್ಯವಸ್ಥೆಯನ್ನು ಕಾಪಾಡಲು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. 


ಈ ವಿಷಯದ ಕುರಿತಾಗಿ ಝೀ ನ್ಯೂಸ್ ಗೆ ಫೋನ್ ಮೂಲಕ ಮಾತನಾಡಿದ ಶಾಸಕ ಜಗನ್ ಪ್ರಸಾದ್ ಗಾರ್ಗ್  ಅವರು "ಈ ಕ್ರಮವು ದಲಿತರ ಭಾವನೆಗಳನ್ನು ಅವಮಾನಿಸುವುದಲ್ಲ ಬದಲಾಗಿ ಅವರನ್ನು ಪ್ರೇರೇಪಿಸುವುದು. ಪ್ರಮುಖವಾಗಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ದಲಿತ ಹಕ್ಕುಗಳ ಚಾಂಪಿಯನ್ ಆಗಿದ್ದಂತವರು ಅಂತವರ ಪ್ರತಿಮೆಯು ದಲಿತ ಸಮುದಾಯದಲ್ಲಿ ನಿಜಕ್ಕೂ  ಹೆಮ್ಮೆ ತರಿಸುತ್ತದೆ ಎಂದು" ತಿಳಿಸಿದ್ದಾರೆ. ಆದರೆ ಸರ್ಕಾರದ ಈ ನಿರ್ಧಾರವು ಈಗ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.