ನವದೆಹಲಿ: ಫೈಝಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದ ನಂತರ ಈಗ  ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಇಡೀ ಜಿಲ್ಲೆಯಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಕ್ಕೆ ಮುಂದಾಗಿದೆ.ಜಿಲ್ಲೆಯಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸುವ ಬೇಡಿಕೆ ಸ್ಥಳೀಯರಿಂದ ಬಂದಿರುವ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.


COMMERCIAL BREAK
SCROLL TO CONTINUE READING

ಈಗ ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರಪ್ರದೇಶ ಸರ್ಕಾರದ ವಕ್ತಾರ ಶ್ರೀಕಾಂತ್ ಶರ್ಮಾ" ಅಯೋಧ್ಯೆಯಲ್ಲಿ ಸ್ಥಳೀಯರು ಮಾಡಿರುವ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ" ಎಂದು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಈಗ ಕಾನೂನಿನ ಚೌಕಟ್ಟಿನಲ್ಲಿ ಮದ್ಯ ಮತ್ತು ಮಾಂಸದ ಮಾರಾಟಕ್ಕೆ ನಿಷೇಧಿಸುವ ಕ್ರಮಕ್ಕೆ ಮುಂದಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.


ಈಗ ಸರ್ಕಾರದ ನಡೆ ಧ್ವನಿಗೂಡಿಸಿರುವ ಆಚಾರ್ಯ ಸತ್ಯೇಂದ್ರ ದಾಸ್ "ಅಯೋಧ್ಯೆ ಪವಿತ್ರ ಸ್ಥಳವಾಗಿದೆ ಮತ್ತು ಮಾಂಸ ಮತ್ತು ಮದ್ಯವನ್ನು ನಗರದಲ್ಲಿ ಎಂದಿಗೂ ಮಾರಾಟ ಮಾಡುತ್ತಿರಲಿಲ್ಲ ಈಗ ಸರ್ಕಾರ ಪ್ರಸ್ತಾಪಿಸಿರುವ ನಿಷೇಧವು ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗಿದೆ" ಎಂದು ಅವರು ತಿಳಿಸಿದ್ದಾರೆ.


"ಅಯೋಧ್ಯಾ ಹಲವಾರು ಶತಮಾನಗಳಿಂದ ಪವಿತ್ರ ಸ್ಥಳವಾಗಿದೆ ಮಾಂಸ ಮತ್ತು ಮದ್ಯವನ್ನು ಇಲ್ಲಿ ಎಂದಿಗೂ ಮಾರಾಟ ಮಾಡಿರಲಿಲ್ಲ.ಈಗ ಫೈಜಾಬಾದ್ ಅನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಗಿದೆ, ನಿಷೇಧವು ಇಡೀ ಜಿಲ್ಲೆಯಲ್ಲೂ ಅನ್ವಯವಾಗಬೇಕು.ಈ ನಿಷೇಧವು ಅಶುದ್ಧತೆ ಮತ್ತು ಮಾಲಿನ್ಯವನ್ನು ಕೊನೆಗೊಳಿಸುತ್ತದೆ, ಈ ನಿಷೇಧವು ಜನರಿಗೆ ಆರೋಗ್ಯಕರವಾಗಲು ಸಹಾಯ ಮಾಡುತ್ತದೆ "ಎಂದು ದಾಸ್ ಹೇಳಿದ್ದಾರೆ.


ಆದರೆ ಈಗ ಮಾಂಸ ಮತ್ತು ಮದ್ಯ ಮಾರಾಟಕ್ಕೆ ನಿಷೇಧ ಹಾಕುತ್ತಿರುವ ಸರ್ಕಾರದ ನಿರ್ಧಾರಕ್ಕೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಹಲವರು ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇಡೀ ಅಯೋಧ್ಯಾ ಜಿಲ್ಲೆಯಲ್ಲಿ ಮಾಂಸ ಮತ್ತು ಆಲ್ಕೊಹಾಲ್ ಅನ್ನು ನಿಷೇಧಿಸುವ ಪ್ರಸ್ತಾವನೆಯಿಂದಾಗಿ ಇದು  ನೇರವಾಗಿ ಮಾಂಸ ಮತ್ತು ಮದ್ಯದ ಅಂಗಡಿಗಳ ಮಾಲೀಕರ ಮೇಲೆ ಪ್ರಭಾವ ಬೀರುತ್ತದೆ ಎಂದು ತಿಳಿದುಬಂದಿದೆ. 


ಮಾಂಸ ಅಂಗಡಿ ಹೊಂದಿರುವ ಮೊಹಮ್ಮದ್ ಷಾಝಾದ್ ಸರ್ಕಾರದ ನಿರ್ಧಾರವನ್ನು ಮತ್ತು ನ್ಯಾಯಸಮ್ಮತವಲ್ಲ ಇದು ನನ್ನ ಏಕೈಕ ಆದಾಯವಾಗಿದೆ ಮತ್ತು ಮಾಂಸ ಮತ್ತು ಮೊಟ್ಟೆಗಳ ಮಾರಾಟದ ಮೇಲೆ ನಿಷೇಧ ಹೇರಿದರೆ ನಾವು ಹೇಗೆ ಜೀವನ ಸಾಗಿಸಬೇಕು ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.