ಕೇರಳಕ್ಕೆ ಹೆಚ್ಚಿನ ನೆರವು ನೀಡುವ ಭರವಸೆ ನೀಡಿದ ಯೋಗಿ ಆದಿತ್ಯನಾಥ್
ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇರಳದ ಪ್ರವಾಹ ಪೀಡಿತ ಜನರಿಗೆ ಹೆಚ್ಚಿನ ನೆರವು ನೀಡುವ ಭರವಸೆ ನೀಡಿದ್ದಾರೆ.
ಲಕ್ನೋದಲ್ಲಿನ ಸಮಾರಂಭವೊಂದರಲ್ಲಿ ಮಾತನಾಡಿದ ಯೋಗಿ,"ಈ ಕ್ಷಣದಲ್ಲಿ ಇಡೀ ದೇಶವು ಕೇರಳ ರಾಜ್ಯದೊಂದಿಗೆ ನಿಂತಿದೆ ನಾವು ತಿನ್ನುವ ಮತ್ತು ಕುಡಿಯುವ ನೀರನ್ನು ಒಳಗೊಂಡಂತೆ 7 ಮಿಲಿಯನ್ ಟನ್ ವಸ್ತುಗಳನ್ನೊಳಗೊಂಡ 25 ಟ್ರಕ್ಗಳನ್ನು ಕಳುಹಿಸುತ್ತೇವೆ ಅವು ವಾಯುಪಡೆಯಿಂದ ತಿರುವನಂತಪುರಕ್ಕೆ ತಲುಪಿಸಲಾಗುತ್ತದೆ."ಎಂದು ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರವಾಹದ ವಿಚಾರವಾಗಿ ತುರ್ತುಕ್ರಮ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಬಗ್ಗೆ ಯೋಗಿ ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಧಾನಿ ಮೋದಿ ಕೇರಳದ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ 500 ಕೋಟಿ ರೂ. ತುರ್ತು ಪರಿಹಾರವನ್ನು ಘೋಷಿಸಿದ್ದಾರೆ.
ಶನಿವಾರದಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರೂ.ಕೇರಳಕ್ಕೆ 15 ಕೋಟಿ ರೂ ನೆರವನ್ನು ಘೋಷಿಸಿದ್ದರು. ಈ ಮಾನ್ಸೂನ್ ಋತುವಿನಲ್ಲಿ ಕೇರಳ ಶತಮಾನದಲ್ಲಿಯೇ ಭೀಕರ ಪ್ರವಾಹವನ್ನು ಅನುಭವಿಸಿತು.ಈ ಪ್ರವಾಹದಿಂದಾಗಿ 357 ಜನರು ಸಾವನ್ನಪ್ಪಿದ್ದು, ಸುಮಾರು ರೂ. 19,512 ಕೋಟಿ ಮೊತ್ತದ ಆಸ್ತಿ ಪಾಸ್ತಿ ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ.