ನವದೆಹಲಿ:  ಗುರುವಾರದಂದು ಸುಪ್ರಿಂಕೋರ್ಟ್ ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ಚಾಟಿ ಬಿಸಿದೆ. ನಗರದಲ್ಲಿ ಕಸದ ಸಮಸ್ಯೆ ನಿರ್ವಹಣೆಯ ವೈಫಲ್ಯ ವಿಚಾರವಾಗಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. 


COMMERCIAL BREAK
SCROLL TO CONTINUE READING

ಈ ಕುರಿತಾಗಿ ವಿಚಾರಣೆವೇಳೆ ಅಭಿಪ್ರಾಯ ಪಟ್ಟಿರುವ ಕೋರ್ಟ್ "ನೀವು( ಲೆಫ್ಟಿನೆಂಟ್ ಗವರ್ನೆರ್) ನಮ್ಮ ಹತ್ತಿರ ಅಧಿಕಾರವಿದೆ ಎಂದು ಹೇಳುತ್ತಿರೀ, ಸೂಪರ್ ಮ್ಯಾನ್ ಎನ್ನುತೀರಿ.,ಆದರೆ ನೀವೇನು ಮಾಡುತ್ತಿಲ್ಲವೇ? ಎಂದು ಅಭಿಪ್ರಾಯಪಟ್ಟಿದೆ. ಇದೆ ಸಂದರ್ಭದಲ್ಲಿ ಎಲ್.ಜಿ ಯು ಮಹಾನಗರ ಪಾಲಿಕೆಗಳ ಮೇಲೆ ಅಧಿಕಾರವನ್ನು ಹೊಂದಿದ್ದರು ಕೂಡ ಕಸವನ್ನು ನಿರ್ವಹಿಸಿಸಲು ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.  


ಕೋರ್ಟ್ ಇನ್ನು ಮುಂದುವರೆದು" ನೀವು ಈ ವಿಚಾರದಲ್ಲಿ ಮುಖ್ಯಮಂತ್ರಿಯವರನ್ನು ಎಳೆದು ತರುವ ಹಾಗಿಲ್ಲ ಏಕೆಂದರೆ ಎಲ್.ಜಿ ಅವರು ತಾವು ಅಧಿಕಾರವನ್ನು ಹೊಂದಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. 


ಕಸದ ನಿರ್ವಹಣೆ ವಿಚಾರದಲ್ಲಿ ಅದು ದೆಹಲಿ ಸರ್ಕಾರವೋ ಅಥವಾ ಕೇಂದ್ರ ಸರ್ಕಾರವೋ ಅಧಿಕಾರ ಹೊಂದಿರುವು ವಿಚಾರವನ್ನು ಕೋರ್ಟ್ ಪ್ರಶ್ನಿಸಿದೆ. ಏಕೆಂದರೆ ಈಗ ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ಜಟಾಪಟಿ ಏರ್ಪಟ್ಟ ಹಿನ್ನಲೆಯಲ್ಲಿ ಈಗ ಕೋರ್ಟ್ ಇದನ್ನು ಪ್ರಶ್ನಿಸಿದೆ.