ನವದೆಹಲಿ: ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿ ಅಮೆರಿಕಾದಲ್ಲಿದ್ದಾರೆಯೇ ಹೊರತು ಚುನಾವಣೆಯ ಸ್ಟಾರ್ ಪ್ರಚಾರಕರಾಗಿ ಅಲ್ಲ ಎಂದು ಕಾಂಗ್ರೆಸ್ ರಾಜ್ಯಸಭಾ ಸಂಸದ ಆನಂದ್ ಶರ್ಮಾ ಹೇಳಿದಾರೆ.


COMMERCIAL BREAK
SCROLL TO CONTINUE READING

ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ದಾಳಿ ನಡೆಸಿರುವ ಅವರು, "ನೀವು ಯುಎಸ್ಎಯಲ್ಲಿ ನಮ್ಮ ಪ್ರಧಾನ ಮಂತ್ರಿಯಾಗಿದ್ದೀರಿ. ಆದರೆ ಯುಎಸ್ ಚುನಾವಣೆಗಳಲ್ಲಿ ಸ್ಟಾರ್ ಪ್ರಚಾರಕರಲ್ಲ ಎಂಬುದನ್ನು ನಿಮಗೆ ನೆನಪಿಸುತ್ತೇನೆ" ಎಂದು ಶರ್ಮಾ ಭಾನುವಾರ ತಡರಾತ್ರಿ ಟ್ವೀಟ್ ಮಾಡಿದ್ದಾರೆ.


ಮತ್ತೊಂದು ಟ್ವೀಟ್‌ನಲ್ಲಿ ಶರ್ಮಾ, ಪ್ರಧಾನಿ ಮೋದಿ ಅವರು ಮತ್ತೊಂದು ದೇಶದ ದೇಶೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಭಾರತೀಯ ವಿದೇಶಾಂಗ ನೀತಿಯ ತತ್ವವನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ.


"ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದೊಂದಿಗಿನ ನಮ್ಮ ಸಂಬಂಧ ಉಭಯಪಕ್ಷೀಯ, ರಿಪಬ್ಲಿಕನ್ ಮತ್ತು ಡೆಮೋಕ್ರಾಟ್ಗಳಿಗೆ ಸಂಬಂಧಿಸಿದೆ. ಟ್ರಂಪ್‌ಗಾಗಿ ನೀವು ಸಕ್ರಿಯವಾಗಿ ಪ್ರಚಾರ ಮಾಡುವುದು ಭಾರತ ಮತ್ತು ಅಮೆರಿಕ ಎರಡಕ್ಕೂ ಸಾರ್ವಭೌಮ ರಾಷ್ಟ್ರಗಳು ಮತ್ತು ಪ್ರಜಾಪ್ರಭುತ್ವಗಳ ಉಲ್ಲಂಘನೆಯಾಗಿದೆ" ಎಂದಿದ್ದಾರೆ.