ನೀವು ನಿಮ್ಮ ಮೊಬೈಲ್ ಕಂಪನಿಗಳನ್ನು ನಂಬರ್ ಪೋರ್ಟ್ ಮೂಲಕ ಬದಲಾಯಿಸುವ ರೀತಿಯಲ್ಲಿ ನೀವು ನಿಮ್ಮ ಗ್ಯಾಸ್ ಸಿಲಿಂಡರ್ ಕಂಪನಿಗಳನ್ನು ಸಹ ಬದಲಾಯಿಸಬಹುದಾಗಿದೆ. ಅಂದರೆ ಅದೇ ರೀತಿಯಲ್ಲಿ ನಿಮ್ಮ ಇಂಡೇನ್ ಗ್ಯಾಸ್ (ಇಂಡಿಯನ್ ಆಯಿಲ್), ಭಾರತ್ ಪೆಟ್ರೋಲಿಯಂ ಕಂಪನಿ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿ (ಎಚ್‌ಪಿಸಿಎಲ್) ಅನಿಲ ವಿತರಕರನ್ನು ಬದಲಾಯಿಸಬಹುದಾಗಿದೆ. ಸೇವೆ ಸರಿಯಾಗಿ ಇಲ್ಲದೆ ಇರಬಹುದು ಅಥವಾ ಇತರ ಯಾವುದೇ ಕಾರಣ ಇದ್ದರೂ ನೀವು ನಿಮ್ಮ ಸಿಲಿಂಡರ್ ವಿತರಣೆ ಮಾಡುವ ಕಂಪನಿಯನ್ನೂ ಸಹ ಬದಲಾವಣೆ ಮಾಡಬಹುದು. ಇದಕ್ಕಾಗಿ ಓರ್ವ ಗ್ರಾಹಕರಾಗಿ ನಿಮಗೆ ಈ ಸೌಲಭ್ಯ ಕಲ್ಪಿಸಲಾಗಿದೆ. ಇದನ್ನು ಮಾಡಲು ಮೊದಲು ನೀವು ಪೋರ್ಟೆಬಿಲಿಟಿಗಾಗಿ ನಿಮ್ಮ ಹೆಸರು ರಿಜಿಸ್ಟರ್ ಮಾಡಬೇಕು. ಇದನ್ನೂ ನೀವು ಆನ್ಲೈನ್ ನಲ್ಲಿಯೂ ಸಹ ಮಾಡಬಹುದು.


COMMERCIAL BREAK
SCROLL TO CONTINUE READING

ಮೊದಲನೆಯದಾಗಿ, ನೀವು www.mylpg.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಮತ್ತು ಅದೇ ಸಮಯದಲ್ಲಿ ನೀವು ಗ್ರಾಹಕರಾಗಿರುವ ನಿಮ್ಮ ಕಂಪನಿಯನ್ನು ಆಯ್ಕೆ ಮಾಡಿ. ನೀವು ಈಗಾಗಲೇ ಇಲ್ಲಿ ನೋಂದಾಯಿಸದಿದ್ದರೆ, ನೀವೇ ಇಲ್ಲಿ ನೋಂದಾಯಿಸಿಕೊಳ್ಳಿ.


ಇಲ್ಲಿ ಕ್ಲಸ್ಟರ್‌ನಲ್ಲಿ ಲಭ್ಯವಿರುವ ವಿತರಕರನ್ನು ನೋಡಿ ಮತ್ತು ರೀಫಿಲ್ ವಿತರಣಾ ಕಾರ್ಯಕ್ಷಮತೆಯ ದೃಷ್ಟಿಯಿಂದ ಅದರ ಸ್ಟಾರ್ ರೇಟಿಂಗ್ ನೋಡಿ. ಈ ರೇಟಿಂಗ್ ಅನ್ನು 5 ಸ್ಟಾರ್- ಎಕ್ಸಲೆಂಟ್, 4 ಸ್ಟಾರ್- ಗುಡ್, 3 ಸ್ಟಾರ್- ಸರಾಸರಿ, 2 ಸ್ಟಾರ್- ಸರಾಸರಿಗಿಂತ ಕಡಿಮೆ ಮತ್ತು 1 ಸ್ಟಾರ್ - ಕಳಪೆ ಎಂದು ನೀಡಲಾಗಿದೆ.


ಈಗ ಇಲ್ಲಿ ಕ್ಲಸ್ಟರ್‌ನಿಂದ ನಿಮ್ಮ ಆಯ್ಕೆಯ ವಿತರಕರನ್ನು ಆಯ್ಕೆಮಾಡಿ. ಇದರ ನಂತರ, ನೋಂದಣಿ ಮತ್ತು ಪ್ರಕ್ರಿಯೆಗಾಗಿ ಗ್ರಾಹಕರಿಗೆ ಕನ್ಫರ್ಮೇಶನ್ ಇಮೇಲ್ ಬರಲಿದೆ.


ಒಂದೇ ಕಂಪನಿಯಲ್ಲಿ ಉಳಿದು ಒಂದು ವೇಳೆ ನೀವು ವರ್ಗಾವಣೆ ಬಯಸುತ್ತಿದ್ದರೆ, ನೀವು ಕೇವಲ ನಿಮ್ಮ ಹೊಸ ವಿತರಕರ ಬಳಿ ಹೋಗಿ ಕನ್ಫರ್ಮೇಶನ್ ಇಮೇಲ್ ನ ನಕಲು ಪ್ರತಿ ಜೊತೆ ಅರ್ಜಿ ಸಲ್ಲಿಸಬೇಕು.


ಒಂದು ವೇಳೆ ನೀವು ಬೇರೆ ಕಂಪನಿಯ ವಿತರಕರಿಗಾಗಿ ಮನವಿ ಸಲ್ಲಿಸುತ್ತಿದ್ದಾರೆ, ನೀವು ಸಿಲಿಂಡರ್, ಪ್ರೆಶರ್ ರೆಗ್ಯುಲೆಟರ್, ರಿಫಂಡ ಹಣ ಅಥವಾ ಟ್ರಾನ್ಸ್ಫರ್ ದಾಖಲೆಗಳನ್ನು ಸಲ್ಲಿಸಬೇಕು ಹಾಗೂ ಅದಕ್ಕೆ ಸಮನಾದ ಡಿಪಾಸಿಟ್ ಹಣ ನೀಡಿ ಹೊಸ ಕನೆಕ್ಷನ್ ಗಾಗಿ ಅರ್ಜಿ ಸಲ್ಲಿಸಬೇಕು.


ನೆನಪಿನಲ್ಲಿಡಿ, ಪೋರ್ಟಬಿಲಿಟಿ ಯೋಜನೆಯಡಿಯಲ್ಲಿ ನಿಮಗೆ ಯಾವುದೇ ವರ್ಗಾವಣೆ ಶುಲ್ಕ ಅಥವಾ ಹೆಚ್ಚುವರಿ ಭದ್ರತಾ ಠೇವಣಿ ವಿಧಿಸಲಾಗುವುದಿಲ್ಲ. ಸಂಪರ್ಕ ವರ್ಗಾವಣೆಯನ್ನು ವಿದ್ಯುನ್ಮಾನವಾಗಿ ಟ್ರ್ಯಾಕ್ ಮಾಡಲಾಗುತ್ತದೆ.