POST OFFICE ನ ಈ ಸ್ಕೀಮ್ ಮೇಲೆ ಸಿಗುತ್ತೆ ಭಾರಿ ಲಾಭ
ಇಂದು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಹಲವು ಆಯ್ಕೆಗಳಿವೆ, ಆದರೆ ಪೋಸ್ಟ್ ಆಫೀಸ್ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಲಾಭವನ್ನು ಗಳಿಸಬಹುದು.
ನವದೆಹಲಿ:ಇಂದು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಹಲವು ಆಯ್ಕೆಗಳಿವೆ, ಆದರೆ ಪೋಸ್ಟ್ ಆಫೀಸ್ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಲಾಭವನ್ನು ಗಳಿಸಬಹುದು. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (ಎಂಐಎಸ್) ನಲ್ಲಿ ಹೂಡಿಕೆದಾರರು ಉತ್ತಮ ಬಡ್ಡಿ ಪಡೆಯುತ್ತಾರೆ. ಈ ಯೋಜನೆಯಲ್ಲಿ ನೀವು ಒಮ್ಮೆ ಹಣವನ್ನು ಹೂಡಿಕೆ ಮಾಡಬೇಕು, ಅದರ ನಂತರ ನೀವು ಪ್ರತಿ ತಿಂಗಳು ಬಡ್ಡಿ ರೂಪದಲ್ಲಿ ಆದಾಯವನ್ನು ಪಡೆಯಬಹುದು. ಈ ಯೋಜನೆಯ ಮುಕ್ತಾಯ ಅವಧಿ ಐದು ವರ್ಷಗಳಾಗಿದ್ದು, ಬಳಿಕ ಹೂಡಿಕೆದಾರರು ತಮ್ಮ ಎಲ್ಲಾ ಹಣವನ್ನು ಬಡ್ಡಿ ಸಮೇತ ಹಿಂಪಡೆಯಬಹುದು.
ಈ ಯೋಜನೆಯಡಿ ನೀವು ಪ್ರತಿ ತಿಂಗಳು ಆದಾಯ ಪಡೆಯಬಹುದು
ಈ ಯೋಜನೆಯಲ್ಲಿ, ಖಾತೆದಾರರು ಠೇವಣಿ ಮಾಡಿದ ಒಟ್ಟು ಮೊತ್ತಕ್ಕೆ ಪ್ರತಿ ತಿಂಗಳು ಬಡ್ಡಿ ಪಡೆಯುತ್ತಾರೆ. ಇಂಡಿಯಾ ಪೋಸ್ಟ್ ಪ್ರಕಾರ, 1 ಜುಲೈ 2019 ರಿಂದ ಪ್ರತಿ ಹೂಡಿಕೆದಾರರು ಈ ಯೋಜನೆಯಡಿ ಶೇ.7.6 ರಷ್ಟು ಬಡ್ಡಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಬಡ್ಡಿ ಮೊತ್ತವನ್ನು ಪ್ರತಿ ತಿಂಗಳು ನಿಮಗೆ ಪಾವತಿಸಲಾಗುತ್ತದೆ.
ಎರಡು ವಿಧದಲ್ಲಿ ನೀವು ಈ ಖಾತೆ ತೆರೆಯಬಹುದು
ಈ ಯೋಜನೆಯಡಿಯಲ್ಲಿ ಖಾತೆದಾರರು ಸಿಂಗಲ್ ಮತ್ತು ಜಂಟಿ ಖಾತೆಗಳನ್ನು ತೆರೆಯಬಹುದು. ಸಿಂಗಲ್ ಖಾತೆ ತೆರೆಯುವಾಗ, ನೀವು ಈ ಯೋಜನೆಯಲ್ಲಿ ಕನಿಷ್ಠ 1500 ರೂಪಾಯಿ ಮತ್ತು ಗರಿಷ್ಠ 4.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ಇದೇ ವೇಳೆ ಒಂದು ವೇಳೆ ನೀವು ಜಂಟಿ ಖಾತೆಯನ್ನು ತೆರೆಯಲು ಬಯಸಿದರೆ, ನೀವು ಗರಿಷ್ಠ 9 ಲಕ್ಷ ರೂಪಾಯಿಗಳ ಹೂಡಿಕೆ ಮಾಡಬಹುದು. ಹಿರಿಯ ಮತ್ತು ನಿವೃತ್ತ ಉದ್ಯೋಗಿಗಳಿಗೆ ಈ ಯೋಜನೆ ತುಂಬಾ ಪ್ರಯೋಜನಕಾರಿಯಾಗಿದೆ.
ಯಾವಾಗ ಬೇಕಾದರೂ ನೀವು ಖಾತೆ ಪರಿವರ್ತನೆ ಮಾಡಬಹುದು
ಇಬ್ಬರು ಅಥವಾ ಮೂವರು ಸೇರಿ ಜಂಟಿಯಾಗಿ ಈ ಖಾತೆಯನ್ನು ತೆರೆಯಬಹುದು. ಇದು ಈ ಖಾತೆಯ ವಿಶೇಷತೆ ಕೂಡ ಹೌದು. ಮೂರು ಜನರು ಒಟ್ಟಿಗೆ ಈ ಖಾತೆಯನ್ನು ತೆರೆದರೆ, ನೀವು ಪ್ರತಿ ತಿಂಗಳು ಪಡೆಯುವ ಆದಾಯವನ್ನು ಮೂರು ಜನರಲ್ಲಿ ಸಮಾನವಾಗಿ ವಿಂಗಡಿಸಲಾಗುತ್ತದೆ. ಇದರೊಂದಿಗೆ, ನೀವು ಬಯಸಿದಾಗಲೆಲ್ಲಾ ಅದನ್ನು ಏಕ ಅಥವಾ ಜಂಟಿ ಖಾತೆಯಾಗಿ ಪರಿವರ್ತಿಸಬಹುದು.
ಅವಧಿಗೂ ಮುನ್ನ ಕೂಡ ನೀವು ಹಣ ಹಿಂಪಡೆಯಬಹುದು
ಈ ಯೋಜನೆಯಲ್ಲಿ ನೀವು ನಿಮ್ಮ ಅವಧಿ ಮುಕ್ತಾಯಕ್ಕೂ ಮುನ್ನವೂ ಸಹ ನಿಮ್ಮ ಹಣವನ್ನು ಹಿಂಪಡೆಯಬಹುದು, ಆದರೆ ನೀವು ಹೀಗೆ ಮಾಡಿದರೆ ನಿಮ್ಮ ಖಾತೆಯಿಂದ ಸ್ವಲ್ಪ ಹಣ ಕಡಿತಗೊಳಿಸಲಾಗುತ್ತದೆ. ಖಾತೆಯನ್ನು ತೆರೆದ ನಂತರ, ನೀವು ಒಂದು ವರ್ಷ ಈ ಯೋಜನೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಇದಲ್ಲದೆ, ನೀವು ಒಂದರಿಂದ ಮೂರು ವರ್ಷಗಳ ನಡುವೆ ಹಣವನ್ನು ಹಿಂತೆಗೆದುಕೊಂಡರೆ, ಶೇಕಡಾ 2 ರಷ್ಟು ಕಡಿತಗೊಳಿಸಲಾಗುತ್ತದೆ. ಒಂದು ವೇಳೆ ನೀವು ಖಾತೆಯನ್ನು ತೆರೆದ 3 ವರ್ಷಗಳ ನಂತರ ಹಣವನ್ನು ಹಿಂತೆಗೆದುಕೊಂಡರೆ, ನಿಮ್ಮ ಠೇವಣಿಯಿಂದ ಶೇ.1 ಕಡಿತಗೊಳಿಸಿ ಉಳಿದ ಹಣವನ್ನು ನಿಮಗೆ ನೀಡಲಾಗುತ್ತದೆ.
ಈ ಯೋಜನೆಯಲ್ಲಿ ನೀವು ನಿಮ್ಮ ಖಾತೆಯನ್ನು ಸಹ ವರ್ಗಾಯಿಸಬಹುದು
ಈ ಯೋಜನೆಯಡಿಯಲ್ಲಿ ನೀವು ನಿಮ್ಮ ಖಾತೆಯನ್ನು ಒಂದು ಅಂಚೆ ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ವರ್ಗಾಯಿಸಬಹುದು. ಈ ಹೂಡಿಕೆಯ ಹಣದ ಅವಧಿ ಐದು ವರ್ಷಗಳು ಪೂರ್ಣಗೊಂಡಾಗ, ನೀವು ಅದನ್ನು ಮತ್ತೆ ಹೂಡಿಕೆ ಮಾಡಬಹುದು. ಖಾತೆದಾರರು ಇದರಲ್ಲಿ ನಾಮಿನಿಯನ್ನು ಸಹ ನೇಮಿಸಬಹುದು. ಯಾವುದೇ ಅಹಿತಕರ ಸಂದರ್ಭದಲ್ಲಿ ಅಥವಾ ಖಾತೆದಾರನ ಮರಣದ ನಂತರ, ನಾಮಿನಿ ಈ ಠೇವಣಿ ಪಡೆಯಲು ಅರ್ಹನಾಗಿರುತ್ತಾನೆ. ಈ ಯೋಜನೆಯಲ್ಲಿ ಒಂದು ವಿಶೇಷತೆ ಎಂದರೆ ಈ ಖಾತೆಯಲ್ಲಿನ ಠೇವಣಿ TDSಗೆ ಒಳಪಡುವುದಿಲ್ಲ, ಆದರೆ ಈ ಹೂಡಿಕೆಯಿಂದ ನೀವು ಪಡೆದ ಬಡ್ಡಿಗೆ ನೀವು ತೆರಿಗೆ ಪಾವತಿಸಲೇಬೇಕು.