ನವದೆಹಲಿ: ರಾಷ್ಟ್ರವ್ಯಾಪಿ COVID-19 ಹಿನ್ನೆಲೆಯಲ್ಲಿ ಲಾಕ್‌ಡೌನ್ ಇರುವ ಕಾರಣ ತೈಲ ಬೇಡಿಕೆಯಲ್ಲಿ ದೊಡ್ಡ ಕುಸಿತ ಕಂಡುಬಂದಿದ್ದು ಒಂದು ತಿಂಗಳ ಬಳಿಕವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನಿಮ್ಮ ನಗರದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎಂಬುದನ್ನು ನೀವು ಕೇವಲ ಒಂದು SMS ಮೂಲಕ ತಿಳಿಯಬಹುದು ಎಂದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ಐಒಸಿಎಲ್ ವೆಬ್‌ಸೈಟ್ ಪ್ರಕಾರ ನಿಮ್ಮ ನಗರದಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕೇವಲ ಒಂದು ಎಸ್‌ಎಂಎಸ್ ಮೂಲಕ ತಿಳಿಯಬಹುದು. ನೀವು ದೆಹಲಿಯಲ್ಲಿಯೇ ಇರಿ ಅಥವಾ ಕರ್ನಾಟಕ, ಚೆನ್ನೈ, ಆಂಧ್ರದ ಯಾವುದೇ ಭಾಗದಲ್ಲಿ ಇರಿ. ಎಲ್ಲಾ ನಗರಗಳ ಇತ್ತೀಚಿನ ಬೆಲೆಗಳನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ಎಲ್ಲಾ ನಗರಗಳ ಕೋಡ್ ಅನ್ನು ಐಒಸಿಎಲ್ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಅದನ್ನು ಬಳಸಿ ಸಂದೇಶ ಕಳುಹಿಸುವ ಮೂಲಕ ನಿಮ್ಮ ನಗರದ ದರಗಳನ್ನು ನೀವು ಸುಲಭವಾಗಿ ತಿಳಿಯಬಹುದು.


ಈ ರೀತಿಯಾಗಿ ಮನೆಯಲ್ಲಿ ಕುಳಿತುಕೊಳ್ಳುವ ಪೆಟ್ರೋಲ್ ಮತ್ತು ಡೀಸೆಲ್ ದರ ತಿಳಿಯಿರಿ:
ತೈಲ ಮಾರುಕಟ್ಟೆ ಕಂಪನಿಗಳು ಬೆಳಿಗ್ಗೆ 06 ಗಂಟೆಗೆ ದರವನ್ನು ಪರಿಶೀಲಿಸುತ್ತವೆ. ಪ್ರತಿದಿನ ಬೆಳಿಗ್ಗೆ 6 ಗಂಟೆಯ ನಂತರ ಪೆಟ್ರೋಲ್-ಡೀಸೆಲ್ ದರವನ್ನು ಪರಿಶೀಲಿಸಲು ನೀವು 92249 92249 ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ಬೆಲೆಯನ್ನು ತಿಳಿಯಬಹುದು. ಇದಕ್ಕಾಗಿ ನೀವು RSP <ಸ್ಪೇಸ್> ಪೆಟ್ರೋಲ್ ಪಂಪ್ ಡೀಲರ್ನ ಕೋಡ್ ಅನ್ನು ಬರೆಯಬೇಕು ಮತ್ತು ಅದನ್ನು 92249 92249 ಗೆ ಕಳುಹಿಸಬೇಕು. ಬಳಿಕ ತಕ್ಷಣವೇ ನಿಮಗೆ ನಿಮ್ಮ ನಗರ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟಿದೆ ಎಂಬುದು ಸಂದೇಶದ ಮೂಲಕ ತಿಳಿಯಲಿದೆ.