ನವದೆಹಲಿ: ತ್ವರಿತ ಸಂದೇಶ ರವಾನೆಗಾಗಿ ಬಳಸಲಾಗುವ ಮೊಬೈಲ್ ಆಪ್ ಗಳಲ್ಲಿ WhaatApp ಒಂದು ಜನಪ್ರೀಯ ಆಪ್ ಆಗಿದೆ. ವಿಶ್ವಾದ್ಯಂತ ಸುಮಾರು 2 ಬಿಲಿಯನ್ ಗೂ ಅಧಿಕ ಜನರು ಈ ವೇದಿಕೆಯನ್ನು ಬಳಸುತ್ತಾರೆ. ಗ್ರೂಪ್ ಕಾಲಿಂಗ್, ಲೈಟ್ ಸೀನ್, ಡಿಲೀಟ್ ಫಾರ್ ಎವೆರಿ ಒನ್ ಮುಂತಾದ ವೈಶಿಷ್ಟ್ಯಗಳು ಇದರಲ್ಲಿ ಇವೆ. ಆದರೆ, ಜಿಮೇಲ್ ಅಥವಾ ಇತರ ಯಾವುದೇ ಮೆಸೇಜಿಂಗ್ ಸೇವೆ ಒದಗಿಸುವ ಆಪ್ ಗಳಲ್ಲಿ ಇರುವ ಶೆಡ್ಯೋಲ್ ಮೆಸೇಜ್ ವಿಕಲ್ಪ ನೀಡಲಾಗಿಲ್ಲ. ಒಂದು ವೇಳೆ ನೀವು ನಿಮ್ಮ ವಾಟ್ಸ್ ಆಪ್ ನಲ್ಲಿ ಈ ಸೌಲಭ್ಯ ಬಯಸುತ್ತಿದ್ದರೆ. ಈ ಕೆಳಗೆ ಸೂಚಿಸಲಾಗಿರುವ ಟ್ರಿಕ್ ಅನುಸರಿಸಿ ನಿಮ್ಮ ಮೆಸೇಜ್ ಗಳನ್ನು ನೀವು ಶೆಡ್ಯೂಲ್ ಕೂಡ ಮಾಡಬಹುದಾಗಿದೆ. ಇದನ್ನು ನೀವು ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ಕೂಡ ಮಾಡಬಹುದಾಗಿದೆ.


COMMERCIAL BREAK
SCROLL TO CONTINUE READING

ಅಂಡ್ರಾಯಿಡ್ ಡಿವೈಸ್ ಗಳ ಮೇಲೆ ನಿಮ್ಮ ಸಂದೇಶಗಳನ್ನು ಹೀಗೆ ಶೆಡ್ಯೂಲ್ ಮಾಡಿ
ಒಂದು ವೇಳೆ ನೀವು ವಾಟ್ಸ್ ಆಪ್ ನಲ್ಲಿ ಶೆಡ್ಯೂಲ್ ಮೆಸೇಜ್ ವೈಶಿಷ್ಟ್ಯವನ್ನು ಬಯಸುತ್ತಿದ್ದರೆ, ಇದಕ್ಕಾಗಿ ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಸಹಾಯ ಪಡೆಯಬೇಕು. ಜೊತೆಗೆ ನಿಮ್ಮ ವಾಟ್ಸ್ ಆಪ್ ಖಾತೆ ಪ್ರವೇಶಿಸಲು ಅನುಮತಿ ಕೂಡ ನೀಡಬೇಕು. ಆದರೆ, ಇಲ್ಲಿ ಗೌಪ್ಯತೆಗೆ ಸಂಬಂಧಿಸಿದಂತೆ ನೀವು ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಿರಬೇಕು. ಇಲ್ಲದೆ ಹೋದಲ್ಲಿ, ವಾಟ್ಸ್ ಆಪ್ ಈ ವೈಶಿಷ್ಟ್ಯವನ್ನು ಅಧಿಕೃತವಾಗಿ ಬಿಡುಗಡೆ ಮಾಡುವವರೆಗೆ ನೀವು ಕಾಯಬೇಕು.


ವಾಟ್ಸ್ ಆಪ್ ನಲ್ಲಿ ನೀವು ನಿಮ್ಮ ಸಂದೇಶಗಳನ್ನು ಶೆಡ್ಯೂಲ್ ಮಾಡಲು ಬಯಸುತ್ತಿದ್ದರೆ, ಮೊದಲು ನೀವು ಗೂಗಲ್ ಪ್ಲೇ ಸ್ಟೋರ್ ನಿಂದ SKEDit ಅಪ್ಪ್ಲಿಕೆಶನ್ ಅನ್ನು ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಬೇಕು. ಸೈನ್ ಇನ್ ಪ್ರಕ್ರಿಯೆ ಮುಗಿದ ಬಳಿಕ, ಪ್ರಕಟಗೊಳ್ಳುವ ಲಿಸ್ಟ್ ನಿಂದ WhatsApp ಆಯ್ಕೆ ಮಾಡಬೇಕು. ಈಗ ವಾಟ್ಸ್ ಆಪ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ. ಇಲ್ಲಿ ನೀವು ಫೋನ್ ಸೇವೆ ಪ್ರವೇಶಕ್ಕೆ ಅನುಮತಿ ನೀಡಬೇಕು. ಇದಾದ ಬಳಿಕ ಮತ್ತೆ ಅಪ್ಲಿಕೇಶನ್ ಗೆ ಬಂದು ರೆಸಿಪಿಯಂಟ್ ಗಳ ಹೆಸರನ್ನು ಸೇರಿಸಬೇಕು. ಈಗ ನೀವು ಶೆಡ್ಯೂಲ್ ಮಾಡಬಯಸುವ ಸಂದೇಶಕ್ಕೆ ಡೇಟ್ ಹಾಗೂ ಟೈಮ್ ನಿಗದಿಪಡಿಸಬೇಕು. ಇದರಲ್ಲಿ ನಿಮಗೆ 'ಆಸ್ಕ್ ಮಿ ಬಿಫೋರ್ ಸೆಂಡಿಂಗ್' ಹೆಸರಿನ ಟಾಗಲ್ ಆಯ್ಕೆ ಕೂಡ ನಿಮಗೆ ಸಿಗಲಿದೆ. ಒಂದು ವೇಳೆ ನೀವು ಈ ವೈಶಿಷ್ಟ್ಯವನ್ನು ಬಳಸಿದರೆ, ಸಂದೇಶ ಕಳುಹಿಸುವ ಮುನ್ನ ಇದು ನಿಮಗೆ ಸೋಟಿಫಿಕೇಶನ್ ಕಳುಹಿಸಲಿದೆ. ಒಂದು ವೇಳೆ ನೀವು ಟಾಗಲ್ ಆಫ್ ಮಾಡಿಟ್ಟರೆ, ಸ್ವಯಂಚಾಲಿತವಾಗಿ ನಿಮ್ಮ ಸಂದೇಶ ನಿಗದಿತ ಸಮಯಕ್ಕೆ ರವಾನೆಯಾಗಲಿದೆ.


ಐಓಎಸ್ ಗಳ ಮೇಲೆ ವಾಟ್ಸ್ ಆಪ್ ಸಂದೇಶಗಳನ್ನು ಹೀಗೆ ಶೆಡ್ಯೂಲ್ ಮಾಡಿ 
ಐಫೋನ್‌ನಲ್ಲಿ ವಾಟ್ಸಾಪ್ ಸಂದೇಶಗಳನ್ನು ಶೆಡ್ಯೂಲ್ ಮಾಡಲು ಯಾವುದೇ ಮೂರನೇ ಪಾರ್ಟಿ ಅಪ್ಲಿಕೇಶನ್ ಅಗತ್ಯವಿಲ್ಲ. ಇಲ್ಲಿ ನೀವು ಸಿರಿ ಶಾರ್ಟ್‌ಕಟ್‌ಗಳನ್ನು ಬಳಸಬಹುದು. ಇದಕ್ಕಾಗಿ ನೀವು ಮೊದಲು ಆಪಲ್‌ನ ಆಪ್ ಸ್ಟೋರ್‌ನಿಂದ ಶಾರ್ಟ್‌ಕಟ್ಸ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು. ಅಪ್ಲಿಕೇಶನ್‌ನಲ್ಲಿ, ನೀವು ಆಟೊಮೇಷನ್ ಆಯ್ಕೆಯನ್ನು ಆಯ್ದುಕೊಳ್ಳಬೇಕು. ಅದನ್ನು ನೀವು ಸೆಟ್ಟಿಂಗ್ಸ್ ನ ಕೆಳಭಾಗದಲ್ಲಿ ಕಾಣಬಹುದು. ಬಳಿಕ ಮೇಲ್ಭಾಗದ ಬಲ ಮೂಲೆಯಲ್ಲಿರುವ ಪ್ಲಸ್ ಚಿಹ್ನೆ ಕ್ಲಿಕ್ಕಿಸಿ, 'ವೈಯಕ್ತಿಕ ಆಟೊಮೇಷನ್ ರಚಿಸಿ". ಈಗ ನೀವು ಸಮಯ ಮತ್ತು ದಿನಾಂಕವನ್ನು ಆಯ್ಕೆ ಮಾಡಬಹುದು. ನಂತರ ನೆಕ್ಸ್ಟ್ ಟ್ಯಾಪ್ ಮಾಡಿದ ನಂತರ 'ಕ್ರಿಯೆಯನ್ನು ಸೇರಿಸಿ' ಕ್ಲಿಕ್ಕಿಸಿ.