ನವದೆಹಲಿ: ಭಾರತೀಯ ರೈಲು ಇಲಾಖೆ ತನ್ನ ಯಾತ್ರಿಗಳ ಯಾತ್ರೆಯನ್ನು ಸುಖಕರಗೊಳಿಸಲು ನಿರಂತರ ಪ್ರಯತ್ನ ನಡೆಸುತ್ತಲೇ ಇದೆ. ಸದ್ಯ ಇಲಾಖೆ ಕಂಟೆಂಟ್ ಸ್ಟ್ರೀಮಿಂಗ್ ಆಪ್ ವೊಂದನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದ್ದು, ಪ್ರಯಾಣಿಕರ ಪಾಲಿಗೆ ಇದು ಎಕ್ಸಕ್ಲೂಸಿವ್ ಆಪ್ ಆಗಿರಲಿದೆ ಎನ್ನಲಾಗಿದೆ. ಈ ಆಪ್ ಅನ್ನು ಪ್ರಯಾಣಿಕರು ತಮ್ಮ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಹಾಗೂ ಟ್ಯಾಬ್ಲೆಟ್ ಗಳಲ್ಲಿ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಆಪ್ ಮೂಲಕ ಪ್ರೀಲೋಡೆಡ್ ಬಹುಭಾಷಾ ಕಂಟೆಂಟ್ ಅನ್ನು ಯಾತ್ರಿಗಳಿಗೆ ನೀಡಲು ಪ್ರಯತ್ನಿಸಲಾಗುತ್ತಿದೆ. ಕೇಂದ್ರ ರೈಲು ಇಲಾಖೆ ಅಡಿ RAILTEL ಮೇಲೆ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ನೀಡಲಾಗಿದ್ದು, ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎನ್ನಲಾಗಿದೆ. ಮುಂದಿನ 45 ದಿನಗಳಲ್ಲಿ 4 ಆಯ್ದ ರೈಲುಗಳ ಯಾತ್ರಿಗಳಿಗೆ ಈ ಆಪ್ ಅನ್ನು ಬಳಕೆಗೆ ನೀಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಯಾವುದೇ ಬಫರಿಂಗ್ ಇಲ್ಲದೆ ಹೈ ಸ್ಪೀಡ್ ಕಂಟೆಂಟ್ ಸೌಕರ್ಯ
ಇದಕ್ಕಾಗಿ ವಿವಿಧ ಟ್ರೈನ್ ಕೋಚ್ ಗಳಲ್ಲಿ ಕಂಟೆಂಟ್ ಸರ್ವರ್ ಗಳ ಜೊತೆಗೆ ಹೈ ಸ್ಪೀಡ್ ವೈ-ಫೈ ಆಕ್ಸಸ್ ಪಾಯಿಂಟ್ ಗಳನ್ನು ಅಳವಡಿಸಲಾಗುತ್ತಿದೆ. RAILTELನ ಡೇಟಾ ಸೆಂಟರ್ ಗಳಲ್ಲಿ ಅಳವಡಿಸಲಾಗಿರುವ ಸೆಂಟ್ರಲ್ ಸರ್ವರ್ ಮೂಲಕ ಕಂಟೆಂಟ್ ಸರ್ವರ್ ಗಳನ್ನು ನಿರ್ವಹಿಸಲಾಗುವುದು ಎನ್ನಲಾಗಿದೆ. RAILTEL ಈ ಡೇಟಾ ಸೆಂಟರ್ ಗಳು ಗುರುಗ್ರಾಮ್ ಹಾಗೂ ಸಿಕಂದರಾಬಾದ್ ಗಳಲ್ಲಿವೆ. ಇದರ ಕಂಟೆಂಟ್ ಗಳನ್ನು ಹೈಸ್ಪೀಡ್ ನಲ್ಲಿ ಪೂರೈಸಲಾಗುವುದು ಎಂದು ಇಲಾಖೆ ಹೇಳಿದೆ. ರೈಲುಗಳು ಚಲಿಸುವ ಸ್ಥಿತಿಯಲ್ಲಿ ಇದ್ದರೂ ಸಹ ನೀವು ಈ ಕಂಟೆಂಟ್ ಅನ್ನು ಆಕ್ಸಸ್ ಮಾಡಬಹುದಾಗಿದೆ.


ಒಟ್ಟು 5573 ರೇಲ್ವೆ ಸ್ಟೇಷನ್ ಗಳ ಮೇಲೆ ಈ ಸೇವೆಯನ್ನು ಪೂರೈಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು RAILTEL ಹೇಳಿದೆ. ಇದೊಂದು 'ಫ್ರೀ'ಮಿಯಂ ಮಾಡೆಲ್ ಆಪ್ ಆಗಿದ್ದು, ಇದರ ಮೂಲಕ ಯಾತ್ರಿಗಳಿಗೆ ಫ್ರೀ ಕಂಟೆಂಟ್ ನೀಡಲಾಗುತ್ತಿದೆ. ಅಷ್ಟೇ ಅಲ್ಲ ಕಂಟೆಂಟ್ ಮಧ್ಯೆ ಯಾವುದೇ ಜಾಹಿರಾತನ್ನು ಕೂಡ ನೀಡಲಾಗುವುದಿಲ್ಲ ಎಂದು ಇಲಾಖೆ ಹೇಳಿದೆ. ಒಂದು ವೇಳೆ ಯಾತ್ರಿಗಳು ಪ್ರಿಮಿಯಮ್ ಚಂದಾದಾರರಾಗಳು ಬಯಸಿದರೆ, ಇದನ್ನು ಆನ್ಲೈನ್ ಟ್ರಾನ್ಸಾಕ್ಶನ ನಡೆಸುವ ಮೂಲಕ ಪಡೆದುಕೊಳ್ಳಬಹುದಾಗಿದೆ. ಈ ಆಪ್ ನಲ್ಲಿ ಸರ್ಚ್, ವಾಚ್, ಡೌನ್ ಲೋಡ್ ಇತ್ಯಾದಿ ಆಯ್ಕೆಗಳನ್ನು ಸಹ ನೀಡಲಾಗುತ್ತಿದೆ.