ನವದೆಹಲಿ: ರಾಷ್ಟ್ರವ್ಯಾಪಿ ಘೋಷಿಸಲಾಗಿರುವ ಲಾಕ್ ಡೌನ್ ಹಿನ್ನೆಲೆ ದೇಶದ ಆರ್ಥಿಕತೆ ಸಂಪೂರ್ಣ ಸ್ಥಗಿತಗೊಂಡಿತ್ತು.  ಹೀಗಾಗಿ ಸಾರ್ವಜನಿಕರು ಮಾರ್ಚ್ 31 ರವರೆಗೆ ಮುಗಿಸಬೇಕಿದ್ದ ಕೆಲಸಗಳ ಗಡುವನ್ನು ಕೇಂದ್ರ ಸರ್ಕಾರ ಜೂನ್ 30ರವರೆಗೆ ವಿಸ್ತರಿಸಿದೆ. ಹೀಗಾಗಿ ಒಂದು ವೇಳೆ ನೀವೂ ಕೂಡ ಈ ಎಲ್ಲ ಕೆಲಸಗಳನ್ನು ಇದುವರೆಗೆ ಮಾಡಿಲ್ಲ ಎಂದಾದರೆ, ಅವುಗಳನ್ನು ತಕ್ಷಣ ಇತ್ಯರ್ಥಪಡಿಸಿಕೊಳ್ಳಿ. ಏಕೆಂದರೆ ಇದೀಗ ನಿಮ್ಮ ಬಳಿ 8 ದಿನಗಳು ಮಾತ್ರ ಬಾಕಿ ಉಳಿದಿವೆ.ಸಮಯ ಇರುವಂತೆ ನೀವು ಈ ಕೆಲಸಗಳನ್ನು ಪೂರ್ಣಗೊಳಿಸದೆ ಹೋದಲ್ಲಿ ನೀವು ದಂಡವನ್ನು ಸಹ ಪಾವತಿಸಬೇಕಾಗಬಹುದು ... ಇದರಲ್ಲಿ ಆಧಾರ್ ಪ್ಯಾನ್ ಲಿಂಕ್ ಮಾಡುವುದು, ತೆರಿಗೆ ವಿನಾಯಿತಿ ಪಡೆಯಲು ಹೂಡಿಕೆ, ಕನಿಷ್ಠ ಬ್ಯಾಲೆನ್ಸ್ ಮನ್ನಾ ಮುಂತಾದ ಹಲವು ಕಾರ್ಯಗಳು ಒಳಗೊಂಡಿವೆ.


COMMERCIAL BREAK
SCROLL TO CONTINUE READING

ಪ್ಯಾನ್-ಆಧಾರ್ ಜೋಡಣೆ
ಪ್ಯಾನ್-ಆಧಾರ್ ಜೋದನೆಗಾಗಿ ಈ ಮೊದಲು ಇದ್ದ ಗಡುವನ್ನು ಸರ್ಕಾರ ಮಾರ್ಚ್ 31 ರಿಂದ ಜೂನ್ 30ರವರೆಗೆ ವಿಸ್ತರಿಸಿದೆ. ಒಂದು ವೇಳೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ಜೊತೆಗೆ ಜೋಡಣೆ ಮಾಡಿಲ್ಲ ಎಂದಾದರೆ ಈ ಕಳಸವನ್ನು ಇಂದೇ ಪೂರ್ಣಗೊಳಿಸಿ. ಇಲ್ಲದೆ ಹೋದರೆ ಜೂನ್ 30 ರ ಬಳಿಕ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಲಿದೆ.


ತೆರಿಗೆ ವಿನಾಯ್ತಿ ಪಡೆಯಲು ಹೂಡಿಕೆ
ವರ್ಷ 2019-20 ರ ಅವಧಿಯ ಆದಾಯ ತೆರಿಗೆ ರಿಟರ್ನ್ಸ್ ದಾಖಲಿಸಲು ಆದಾಯ ತೆರಿಗೆ ಇಲಾಖೆ ಕೊನೆಯ ದಿನಾಂಕವನ್ನು 31 ಜುಲೈನಿಂದ 30 ನವೆಂಬರ್ ವರೆಗೆ ವಿಸ್ತರಿಸಿದೆ. ಇದೆ ವೇಳೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ, 80ಡಿ, 80ಇ ಅಡಿ ಹೂಡಿಕೆಗಾಗಿ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿದೆ.


ಪಿಪಿಎಫ್ ಹಾಗೂ SSYಗಳಲ್ಲಿ ಮಿನಿಮಮ್ ಬ್ಯಾಲೆನ್ಸ್
ಮಾರ್ಚ್ 31, 2020ಕ್ಕೆ ಮ್ಯಾಚ್ಯೂರ್ ಆಗಿರುವ PPF ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಒಂದು ವೇಳೆ ನೀವು ಮುಂದುವರೆಸಲು ಬಯಸುತ್ತಿದ್ದು, ಲಾಕ್ ಡೌನ್ ಕಾರಣ ನೀವು ಅದನ್ನು ಮಾಡದೆ ಹೋಗಿದ್ದರೆ, ನೀವು ಈ ಕೆಲಸವನ್ನು ಮೂನ್ 30ರವರೆಗೆ ಪೂರ್ಣಗೊಳಿಸಬಹುದು. ಭಾರತೀಯ ಅಂಚೆ ವಿಭಾಗ ಏಪ್ರಿಲ್ 11ರಂದು ಈ ಕುರಿತು ಸುತ್ತೋಲೆಯೊಂದನ್ನು ಜಾರಿಗೊಳಿಸಿ, PPF/SSY ಖಾತೆಗಳನ್ನು ಮುಂದುವರೆಸಲು ಫಾರ್ಮ್ ಸಲ್ಲಿಸುವ ಅಂತಿಮ ಗಡುವನ್ನು ಜೂನ್ 30 ರವರೆಗೆ ವಿಸ್ತರಿಸಿದೆ.


ಕೂಡಲೇ ಫಾರ್ಮ್ 15G/15H ಸಲ್ಲಿಸಿ
ಆದಾಯದ ಮೇಲೆ ಟಿಡಿಎಸ್ (ಮೂಲದಲ್ಲಿ ತೆರಿಗೆ ಕಡಿತ) ತಪ್ಪಿಸಲು, ಜನರು ಫಾರ್ಮ್ 15 ಜಿ / 15 ಹೆಚ್ ಅನ್ನು ಭರ್ತಿ ಮಾಡುತ್ತಾರೆ. ಕರೋನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆ ಘೋಷಿಸಲಾಗಿರುವ ಲಾಕ್‌ಡೌನ್ ಕಾರಣ ಸರ್ಕಾರವು ಫಾರ್ಮ್ 15 ಜಿ ಮತ್ತು ಫಾರ್ಮ್ 15 ಹೆಚ್‌ನ ಸಿಂಧುತ್ವವನ್ನು ವಿಸ್ತರಿಸಿದೆ. ಇದನ್ನು 2020 ರ ಜೂನ್ 30 ಕ್ಕೆ ಹೆಚ್ಚಿಸಲಾಗಿದೆ. ಆದ್ದರಿಂದ ನೀವು ಈ ಫಾರ್ಮ್ ಅನ್ನು ಜೂನ್ 30 ರ ಮೊದಲು ಭರ್ತಿ ಮಾಡಬೇಕಾಗಿದೆ.


ಫಾರ್ಮ್ 16 ಕೂಡಲೇ ಸಲ್ಲಿಸಿ
ಸಾಮಾನ್ಯವಾಗಿ ನೌಕರರಿಗೆ ಮೇ ತಿಂಗಳಿನಲ್ಲಿ ಅವರ ಕಂಪನಿಯಿಂದ ಫಾರ್ಮ್ 16 ಅನ್ನು ಸಲ್ಲಿಸಲು ಹೇಳಲಾಗುತ್ತದೆ  ಆದರೆ ಈ ಬಾರಿ ಸರ್ಕಾರವು ಸುಗ್ರೀವಾಜ್ಞೆಯೊಂದನ್ನು ಹೊರಡಿಸುವ ಮೂಲಕ ಈ ಅವಧಿಯನ್ನು  ಜೂನ್ 15 ರಿಂದ ಜೂನ್ 30 ರ ವರೆಗೆ ವಿಸ್ತರಿಸಿದೆ. ಫಾರ್ಮ್ 16 ಒಂದು ರೀತಿಯ ಟಿಡಿಎಸ್ ಪ್ರಮಾಣಪತ್ರವಾಗಿದೆ, ಇದು ಐಟಿಆರ್ ಸಲ್ಲಿಸುವಾಗ ಬೇಕಾಗುತ್ತದೆ.


ಬ್ಯಾಂಕ್ ATMಗಳಿಂದ ಹಣ ಹಿಂಪಡೆಯುವ ಮಿತಿ
ಯಾವುದೇ ಎಟಿಎಂನಿಂದ ಹಣವನ್ನು ಹಿಂಪಡೆಯಲು ಸರ್ಕಾರ ಸಾಮಾನ್ಯರಿಗೆ ಅವಕಾಶ ನೀಡಿತ್ತು. ಈ ರಿಯಾಯಿತಿ ಜೂನ್ 30 ಕ್ಕೆ ಕೊನೆಗೊಳ್ಳುತ್ತಿದೆ. ಇಲ್ಲಿಯವರೆಗೆ, ಇತರ ಬ್ಯಾಂಕಿನ ಎಟಿಎಂಗಳು ನಿರ್ದಿಷ್ಟ ಮಿತಿಯವರೆಗೆ ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಿದ್ದವು. ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆದಲ್ಲಿ ನಿಮಗೆ ಶುಲ್ಕ ವಿಧಿಸಲಾಗುತ್ತದೆ.


ಮಿನಿಮಮ್ ಬ್ಯಾಲೆನ್ಸ್ ಹೊಂದುವಿಕೆ
ಇದಲ್ಲದೆ, ಜೂನ್ 30 ರವರೆಗೆ ಉಳಿತಾಯ ಖಾತೆಯಲ್ಲಿ ಕನಿಷ್ಠ ಮಾಸಿಕ ಬಾಕಿ ಉಳಿಸಿಕೊಳ್ಳುವುದರಿಂದ ಸರ್ಕಾರ ವಿನಾಯಿತಿ ನೀಡಿತ್ತು. ಜೂನ್ 30 ರ ನಂತರ, ನಿಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ ಬಾಕಿ ಇಲ್ಲದಿದ್ದರೆ, ನೀವು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ, ಈಗ ನೀವು ಕನಿಷ್ಟ ಮಾಸಿಕ ಸಮತೋಲನವನ್ನು ಕಾಯ್ದುಕೊಳ್ಳಬೇಕು.