ಈ ಮಸಣಕ್ಕೆ ENTRY ನೀಡಲು ನೀವು ಅಧಿಕೃತವಾಗಿ TICKET ಖರೀದಿಸಬೇಕು
ಇಂದು ನಾವು ನಿಮಗೆ ಹೇಳಲು ಹೊರಟಿರುವ ಸ್ಮಶಾನಕ್ಕೆ ಭೇಟಿ ನೀಡಲು ನೀವು ಅಧಿಕೃತವಾಗಿ ಟಿಕೆಟ್ ಪಡೆಯಬೇಕು.
ತ್ರಿಭುವನ್ ಗಂಗಾ- ಬಿಕಾನೇರ್:ಸಾಮಾನ್ಯವಾಗಿ ಸ್ಮಶಾನ ಎಂದರೆ ತುಂಬಾ ಸಾಮಾನ್ಯವಾಗಿರುತ್ತದೆ ಎಂಬುದು ನಮ್ಮ ನಿಮ್ಮೆಲ್ಲರಿಗೂ ತಿಳಿದ ವಿಷಯವಾಗಿದೆ. ಯಾರಾದರೊಬ್ಬರು ಮರಣ ಹೊಂದಿದರೆ ಜನರು ಸ್ಮಶಾನಕ್ಕೆ ಹೋಗುವುದು ಸಾಮಾನ್ಯ. ಆದರೆ, ಇಂದು ನಾವು ನಿಮಗೆ ಹೇಳಲು ಹೊರಟಿರುವ ಸ್ಮಶಾನಕ್ಕೆ ಭೇಟಿ ನೀಡಲು ನೀವು ಅಧಿಕೃತವಾಗಿ ಟಿಕೆಟ್ ಪಡೆಯಬೇಕು. ಈ ಸ್ಮಶಾನದಲ್ಲಿ ನಿರ್ಮಿಸಲಾಗಿರುವ ಕಲಾತ್ಮಕ ಆಕೃತಿಗಳು ದೇಶದ ಪ್ರವಾಸಿಗರನ್ನಷ್ಟೇ ಅಲ್ಲ ವಿದೇಶಿಗರನ್ನೂ ಕೂಡ ಆಕರ್ಷಿಸುತ್ತಿವೆ. ಈ ಸ್ಮಶಾನದಲ್ಲಿ ನಿರ್ಮಿಸಲಾಗಿರುವ ಕೊಡೆಯಿಂದ ಹಾಲು ಬರುತ್ತಿದೆ.
ರಾಜಸ್ಥಾನದ ಬಿಕಾನೆರ್ ನಲ್ಲಿರುವ ದೇವಿಕುಂಡ್ ಸಾಗರ್ ಸ್ಮಶಾನವನ್ನು ನೋಡಲು ನಿತ್ಯ ಸಾವಿರಾರು ಜನಭೇಟಿ ನೀಡುತ್ತಾರೆ. ಈ ಸ್ಥಳ ಬಿಕಾನೇರ್ ರಾಜಮನೆತನದ ಅಧಿಕೃತ ಹಾಗೂ ಅಂತಿಮ ವಿಶ್ರಾಂತಿಯ ರೂಪದಲ್ಲಿ ನೋಡಲಾಗುತ್ತದೆ. ರಾಜ ಮನೆತನದ ಸದಸ್ಯರ ಅಂತಿಮ ಸಂಸ್ಕಾರ ಇದೇ ಸ್ಥಾನದಲ್ಲಿ ನೆರವೆರಿಸಳಗುತ್ತಿತ್ತು. ಬಿಕಾನೆರ್ ಸಂಸ್ಥಾನದ ಮೊದಲ ಮೂರು-ನಾಲ್ಕು ಅರಸರನ್ನು ಬಿಟ್ಟರೆ ಉಳಿದ ಎಲ್ಲ ರಾಜರ ಅಂತ್ಯಸಂಸ್ಕಾರ ಇದೆ ಸ್ಥಾನದಲ್ಲಿ ನಡೆಸಲಾಗಿದೆ. ಇದೆ ಕಾರಣದಿಂದ ಈ ಸ್ಥಾನ ರಾಜ ಮನೆತನದ ಜೊತೆಗೆ ರಾಜಮನೆತನದ ಜೊತೆ ಸಂಪರ್ಕ ಹೊಂದಿದ ಜನರ ಹಾಗೂ ಸಾಮಾನ್ಯ ನಾಗರಿಕರ ಪಾಲಿಗೆ ನಂಬಿಕೆಯ ವಿಶೇಷ ಕೇಂದ್ರವೆಂದೇ ಪರಿಗಣಿಸಲ್ಪಡುತ್ತದೆ.
ದೇವಿ ಕುಂಡ್ ಸಾಗರ್ ನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವ ಸ್ಥಳದಲ್ಲಿ ಮಹಾರಾಜರು ಹಾಗೂ ಅವರ ಕುಟುಂಬ ಸದಸ್ಯರ ಸ್ಮರಣಾರ್ಥ ಕೊಡೆಗಳನ್ನು ನಿರ್ಮಿಸಲಾಗಿದೆ. ಇವು ನಂಬಿಕೆಯೊಂದಿಗೆ ವಿದೇಶಿ ಯಾತ್ರಿಗಳನ್ನು ತಮ್ಮತ್ತ ಆಕರ್ಷಿಸುತ್ತವೆ. ಈ ಕೊಡೆಗಳ ನಿರ್ಮಾಣಕ್ಕೆ ಎರಡು ಬಗೆಯ ಶಿಲೆಗಳನ್ನು ಬಳಸಲಾಗಿದೆ. ಮಹಾರಾಜಾ ಜನಸಿಂಗ್ ಗೂ ಮೊದಲು ಈ ಕೊಡೆಗಳನ್ನು ಕೆಂಪು ಬಣ್ಣದ ಶಿಲೆಗಳಿಂದ ನಿರ್ಮಿಸಲಾಗಿದೆ. ಅವರ ನಂತರದ ಕಾಲದಲ್ಲಿ ನಿರ್ಮಾಣಗೊಂಡ ಕೊಡೆಗಳು ಮಾರ್ಬಲ್ ನಿಂದ ತಯಾರಿಸಲಾಗಿವೆ. ಈ ಕೊಡೆಗಳ ಮೂಲಕ ರಜಪೂತ ಹಾಗೂ ಮೊಘಲರ ವಾಸ್ತುಶಿಲ್ಪ ಕಲೆಯನ್ನು ಅನಾವರಣಗೊಳಿಸಲಾಗಿದೆ. ಈ ಶಿಲಾಕೃತಿಗಳ ಮೇಲೆ ಕೆತ್ತಲಾಗಿರುವ ಶಿಲೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತವೆ.
ಈ ಕೊಡೆಗಳಲ್ಲಿ ಒಂದು ವಿಶೇಷ ಕೊಡೆ ಇದ್ದು, ಈ ಕೊಡೆಯಿಂದ ಹಾಲು ಬರುತ್ತಿತ್ತು ಎನ್ನಲಾಗುತ್ತದೆ. ಈ ಹಾಲು ಕೊಡೆಯ ಎರಡು ಕಂಬಗಳ ಮೂಲಕ ಕುಂಡಕ್ಕೆ ಹರಿದು ಹೋಗುತ್ತಿತ್ತು ಎನ್ನಲಾಗಿದೆ. ಈ ಕೊಡೆಯನ್ನು ಬಿಕಾನೇರ್ ಸಂಸ್ಥಾನದ ಜನಪ್ರೀಯ ಮಹಾರಾಜ ಗಂಗಾಸಿಂಗ್ ಅವರ ಪತ್ನಿ ಬಲಭ್ ಕುಂವರ್ ಸ್ಮರಣಾರ್ಥ ನಿರ್ಮಿಸಲಾಗಿದೆ. ಈ ಕೊಡೆಯಿಂದ ಹಾಲು ಅಥವಾ ಅದಕ್ಕೆ ಸಮಾನಾರ್ಥ ಒಂದು ಪದಾರ್ಥ ಹರಿದು ಬರುತ್ತಿತ್ತು ಎನ್ನಲಾಗಿದೆ. ಈ ಹಾಲು ಹರಿವಿಕೆಯ ಅವಶೇಷಗಳು ಇಂದಿಗೂ ಅಲ್ಲಿ ಕಾಣಸಿಗುತ್ತದೆ. ಸ್ಥಳಿಯರಿಗೆ ಇದು ನಂಬಿಕೆಯ ವಿಷಯವಾಗಿದ್ದರೆ, ವಿದೇಶಿ ಪ್ರವಾಸಿಗರಿಗೆ ಇದು ಆಕರ್ಷದ ಕೇಂದ್ರವಾಗಿ ಪರಿಣಮಿಸಿದೆ.
ಈ ಕುರಿತು ಮಾತನಾಡಿರುವ ಅಮೆರಿಕಾದ ಪ್ರವಾಸಿಗ ಶಾನ್, ಬಿಕಾನೆರ್ ಮಾಹಾರಾಜರಿಗಾಗಿ ನಿರ್ಮಿಸಲಾಗಿರುವ ಈ ಕೊಡೆಗಳು ಶಿಲ್ಪಕಲೆಯ ಅದ್ಭುತ ನಮೂನೆಗಳಾಗಿವೆ ಎನ್ನುತ್ತಾರೆ.
ಈ ಕುರಿತು ಮಾತನಾಡುವ ಇತಿಹಾಸ ತಜ್ಞ ಡಾ. ಶಿವ್ ಭಾನೋಟ್, ದೇವಿ ಕುಂಡ್ ಸಾಗರ್ ನಲ್ಲಿ ಬಿಕಾನೇರ್ ಸಂಸ್ಥಾನದ ಮೂರನೇ ರಾಜನ ಬಳಿಕ ನಿರ್ಮಾಣಗೊಂಡ ಕೊಡೆಗಳು ಶಿಲ್ಪಕಲೆಯ ಅದ್ಭುತ ನಮೂನೆಯಾಗಿವೆ. ಆದರೆ, ಹಾಲು ಹೊರಹಾಕುವ ಕೊಡೆಯ ಬಗ್ಗೆ ಯಾವುದೇ ರೀತಿಯ ಪ್ರಮಾಣಗಳು ಇದುವರೆಗೂ ದೊರೆತಿಲ್ಲ. ಅವರ ಹೇಳುವ ಪ್ರಕಾರ ಸಿಮೆಂಟ್ ಆವಿಷ್ಕಾರಕ್ಕೂ ಮುನ್ನ ಸುಣ್ಣದಿಂದ ತಯಾರಿಸಲಾದ ಪದಾರ್ಥವನ್ನು ಸಿಮೆಂಟ್ ರೂಪದಲ್ಲಿ ಮಾಡಲಾಗುತ್ತಿತ್ತು. ಬಿರುಕುಗಳ ಕಾರಣ ಈ ಹಾಲಿನಂತಹ ಪದಾರ್ಥ ಸೋರಿಕೆಯಾಗಿರಬಹುದು ಎಂಬುದು ತಮ್ಮ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ.