ನವದೆಹಲಿ: ಕೇಂದ್ರ ಸಚಿವ ಎಂಜೆ.ಅಕ್ಬರ್ ಮೇಲೆ ಮೀಟೂ ಅಭಿಯಾನದ ಭಾಗವಾಗಿ ಲೈಂಗಿಕ ಕಿರುಕುಳದ ಆರೋಪ ಮುಂದುವರೆದಿದ್ದು ಈಗ 15 ನೆ ಮಹಿಳೆ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾಳೆ.


COMMERCIAL BREAK
SCROLL TO CONTINUE READING

ಸ್ಕ್ರೋಲ್ ನಲ್ಲಿ ಬರೆದಿರುವ ಲೇಖನದಲ್ಲಿ ತುಶಿತಾ ಪಟೇಲ್ ತಾವು ಟೆಲಿಗ್ರಾಪ್ ಕಾರ್ಯ ನಿರ್ವಹಿಸುತ್ತಿದ್ದಾಗ ಸಂಪಾದಕರಾಗಿದ್ದ ಅಕ್ಬರ್ ಎರಡು ಸಾರಿ ತಮಗೆ ಒತ್ತಾಯ ಪೂರಕವಾಗಿ ಕಿಸ್ ಮಾಡಲು ಪ್ರಯತ್ನಿಸಿದ್ದರು. ಒಮ್ಮೆ ತಮಗೆ ಹೋಟೆಲ್ ರೂಮಿನಲ್ಲಿದ್ದಾಗ ಒಳ ಉಡುಗೆಯಲ್ಲೇ ತಮಗೆ ಪ್ರತ್ಯಕ್ಷರಾಗಿದ್ದರು ಎಂದು ಬರೆದುಕೊಂಡಿದ್ದಾರೆ.


1992 ರಲ್ಲಿ ಕೋಲ್ಕೊತಾದಲ್ಲಿ ಮೊದಲ ಬಾರಿಗೆ ಟ್ರೇನಿಯಾಗಿ ಸೇರಿಕೊಂಡಾಗ ತಮ್ಮ ನಂಬರ್ ನ್ನು ಪತ್ತೆ ಹಚ್ಚಿ ಅಕ್ಬರ್ ತಮ್ಮನ್ನು ಹೋಟೆಲ್ ಒಂದರಲ್ಲಿ ಭೇಟಿಯಾಗಲು ತಿಳಿಸಿದ್ದರು.ಆಗ ಅಲ್ಲಿಗೆ ಹೋದಾಗ "ನೀವು ಅಂಡರ್ ವೇರ್ ನಲ್ಲೇ ಬಾಗಿಲು ತೆರೆದಿದ್ರಿ,ನಾನು ಬಾಗಿಲ ಬಳಿ ಅಸಹ್ಯವಾಗಿ ಭಯದಿಂದ ನಿಂತಿದ್ದೆ. ನೀವು ವಿಐಪಿ ವ್ಯಕ್ತಿ ಹಾಗೆ ನಿಂತಿದ್ರಿ, ನನ್ನ ಅಂಜಿಕೆಯನ್ನು ನೋಡಿ ವ್ಯಂಗ ಮಾಡುತ್ತಾ "ಎಂದು ಆರು ಬರೆದುಕೊಂಡಿದ್ದಾರೆ. ಇನ್ನು ಮುಂದುವರೆದು "22 ವರ್ಷದ ಟ್ರೆನಿಗೆ ವಿವಸ್ತ್ರವಾಗಿ ಸ್ವಾಗತಿಸುವುದು ನಿಮ್ಮ ಮೌಲ್ಯದ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳುವುದೇ? ಎಂದು ತುಶೀತಾ ಪಟೇಲ್ ಕೇಂದ್ರ ಸಚಿವ ಅಕ್ಬರ್ ವಿರುದ್ಧ ಬರೆದುಕೊಂಡಿದ್ದಾರೆ.