ನಿಂಬೆ ಹಣ್ಣಿಗೆ 35,000 ರೂಪಾಯಿ ಬೆಲೆ ಕಟ್ಟಲು ಕಾರಣ ಮಹಾಶಿವರಾತ್ರಿ. ಶುಕ್ರವಾರ ನಡೆದ ಮಹಾಶಿವರಾತ್ರಿಯ ವಿಶೇಷವಾಗಿ ಈ ನಿಂಬೆಹಣ್ಣು ಹರಾಜಿನ ಮೂಲಕ ಸಾವಿರಾರು ರೂಪಾಯಿ ಬೆಲೆಯಲ್ಲಿ ಮಾರಾಟವಾಗಿದೆ. ತಮಿಳುನಾಡಿನ ಈರೋಡ್ ಎಂಬಲ್ಲಿರುವ ಹಳ್ಳಿಯೊಂದರ ದೇವಾಲಯದಲ್ಲಿ ಮಹಾಶಿವರಾತ್ರಿ ಸಂದರ್ಭಕ್ಕೆ ಈ ನಿಂಬೆಹಣ್ಣನ್ನು ಪೂಜಿಸಲಾಗಿದೆ


COMMERCIAL BREAK
SCROLL TO CONTINUE READING

 ಒಂದು ಕ್ಷಣ ಇದನ್ನು ಓದಿ ನಿಮಗೂ ಶಾಕ್ ಆಗಿರಬಹುದು. ಒಂದು ನಿಂಬೆಹಣ್ಣಿಗೆ ಯಾರಪ್ಪ 35,000 ಕೊಡ್ತಾರೆ ಎಂಬ ಪ್ರಶ್ನೆ ಸಹ ಮೂಡಬಹುದು. ಆದರೆ ನೀವು ಓದುತ್ತಿರುವ ಸುದ್ದಿ ನಿಜವಾಗಿಯೂ ತಮಿಳುನಾಡಲ್ಲಿ ನಡೆದಿದೆ.. ಒಂದು ನಿಂಬೆಹಣ್ಣಿನ ಬೆಲೆ ಅಬ್ಬಬ್ಬಾ ಅಂದರೂ 5 ರೂಪಾಯಿ ಇರಬಹುದು. ಆದರೆ ಇಲ್ಲೊಂದು ಸ್ಥಳದಲ್ಲಿ ಒಂದೇ ಒಂದು ನಿಂಬೆಹಣ್ಣು ಬರೋಬ್ಬರಿ 35,000 ರೂಪಾಯಿಗೆ ಖರೀದಿಯಾಗಿದೆ.


ಒಂದು ನಿಂಬೆಹಣ್ಣು 35,000 ರೂ : ತಮಿಳುನಾಡಿನ ಈರೋಡ್ ಎಂಬಲ್ಲಿರುವ ಹಳ್ಳಿಯೊಂದರ ದೇವಾಲಯದಲ್ಲಿ ಮಹಾಶಿವರಾತ್ರಿ ಸಂದರ್ಭಕ್ಕೆ ಈ ನಿಂಬೆಹಣ್ಣನ್ನು ಪೂಜಿಸಲಾಗಿದೆ. ಶಿವರಾತ್ರಿ ದಿನದಂದು ಪೂಜಿಸಲ್ಪಟ್ಟ ನಿಂಬೆಹಣ್ಣಿಗೆ ವಿಶೇಷ ಶಕ್ತಿ ಇರುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.
 ನಿಂಬೆ ಹಣ್ಣಿಗೆ 35,000 ರೂಪಾಯಿ ಬೆಲೆ ಕಟ್ಟಲು ಕಾರಣ ಮಹಾಶಿವರಾತ್ರಿ. ಶುಕ್ರವಾರ ನಡೆದ ಮಹಾಶಿವರಾತ್ರಿಯ ವಿಶೇಷವಾಗಿ ಈ ನಿಂಬೆಹಣ್ಣು ಹರಾಜಿನ ಮೂಲಕ ಸಾವಿರಾರು ರೂಪಾಯಿ ಬೆಲೆಯಲ್ಲಿ ಮಾರಾಟವಾಗಿದೆ.


ಇದನ್ನು ಓದಿ : Good News: ಇ-ಸ್ಕೂಟರ್ ಖರೀದಿಸುವವರಿಗೆ ಸರ್ಕಾರದಿಂದ 40 ಸಾವಿರ ರೂ. ಸಹಾಯಧನ!


ನಿಂಬೆಹಣ್ಣಿನಲ್ಲಿ ದೈವ ಶಕ್ತಿ: ದೇವಾಲಯದ ಆಡಳಿತ ಮಂಡಳಿ ಏರ್ಪಡಿಸಿದ ಹರಾಜಿನ ಪ್ರಕ್ರಿಯೆಯಲ್ಲಿ ಸುಮಾರು 15 ಮಂದಿ ಭಕ್ತರು ಭಾಗಿಯಾಗಿದ್ದರು. ಈ ವೇಳೆ ದೇವರ ಮುಂದಿಟ್ಟಿದ್ದ ನಿಂಬೆಹಣ್ಣು 35,000 ರೂಪಾಯಿ ಹರಾಜಿನ ಮೂಲಕ ಈರೋಡಿನ ಭಕ್ತನೊಬ್ಬನ ಕೈ ಸೇರಿದೆ. ನಿಂಬೆಹಣ್ಣು ಹರಾಜು ಆದ ನಂತರ ದೇವಾಲಯದ ಅರ್ಚಕರು ಶಿವನ ಮುಂದೆ ಮತ್ತೆ ನಿಂಬೆಹಣ್ಣನ್ನು ಇಟ್ಟು ನೂರಾರು ಭಕ್ತರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ, ಅತಿ ಹೆಚ್ಚು ಬಿಡ್ ಮಾಡುವ ಮೂಲಕ ನಿಂಬೆಹಣ್ಣು ಪಡೆದ ವ್ಯಕ್ತಿಗೆ ನೀಡಿದ್ದಾರೆ. ಈ ರೀತಿ ನಿಂಬೆಹಣ್ಣು ಪಡೆಯಲು ಮುಖ್ಯ ಕಾರಣ, ದೇವರ ಮುಂದೆ ಪೂಜಿಸಲ್ಪಟ್ಟ ಈ ನಿಂಬೆಹಣ್ಣಿನಲ್ಲಿ ದೈವಿಕ ಶಕ್ತಿ ತುಂಬಿರುತ್ತದೆ. ನಿಂಬೆಹಣ್ಣು ಪಡೆದ ವ್ಯಕ್ತಿಯ ಜೀವನದಲ್ಲಿ ಆರೋಗ್ಯ,ಸುಖ, ನೆಮ್ಮದಿ, ಸಂಪತ್ತನ್ನು ಪಡೆಯುತ್ತಾನೆ ಎಂಬ ನಂಬಿಕೆ ಇದೆ.


ಶಿವಗಿರಿಯಲ್ಲಿ ವಿಶೇಷ ಆಚರಣೆ: ಈರೋಡ್ ನಿಂದ 35 ಕಿಲೋ ಮೀಟರ್ ದೂರದಲ್ಲಿರುವ ಶಿವಗಿರಿ ಎಂಬ ಹಳ್ಳಿಯಲ್ಲಿ ಪಜಪೂಸೈಯನ್ ದೇವಾಲಯದಲ್ಲಿ ಮಹಾಶಿವರಾತ್ರಿ ದಿನದಂದು ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಈ ವಿಶೇಷ ಪೂಜೆಯಲ್ಲಿ ನಿಂಬೆಹಣ್ಣು ಸೇರಿದಂತೆ ಹಲವು ಹಣ್ಣುಗಳನ್ನು ರಾತ್ರಿಪೂರ ದೇವರಿಗೆ ನೈವೇದ್ಯವಾಗಿ ಇಡಲಾಗುತ್ತದೆ. ಇದನ್ನೆಲ್ಲಾ ದೇವರ ಪ್ರಸಾದವಾಗಿ ಹರಾಜಿನ ಮೂಲಕ ನೀಡಲಾಗುತ್ತದೆ.


ಇದನ್ನು ಓದಿ : Job Alert: ತಿಂಗಳಿಗೆ 43 ಸಾವಿರ ಸಂಬಳ ನೀಡುವ ಈ ಕೆಲಸಕ್ಕೆ ಇಂದೇ ಅರ್ಜಿ ಸಲ್ಲಿಸಿ


ಮಹಾಶಿವರಾತ್ರಿ ಮಹತ್ವ:  ಹಿಂದೂ ಹಬ್ಬಗಳಲ್ಲಿ ಮಹಾಶಿವರಾತ್ರಿಯು ಪ್ರಮುಖವಾದ ಹಬ್ಬ. ಶಿವರಾತ್ರಿ ದಿನದಂದ ದಿನವೆಲ್ಲಾ ಉಪವಾಸ ವ್ರತ ಮಾಡಿ, ರಾತ್ರಿಯೆಲ್ಲಾ ಜಾಗರಣೆ ಇರುವುದು ವಾಡಿಕೆ. ಶಿವರಾತ್ರಿ ನಂತರ ಸೂರ್ಯೋದಯವಾದ ಮೇಲೆ ಶುದ್ದಿಯಾಗಿ, ದೇವರಿಗೆ ಪೂಜೆ, ನೈವೇದ್ಯ ಸಮರ್ಪಿಸಿ, ನಂತರ ಆಹಾರ ಸೇವಿಸಿ ಭಕ್ತರು ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಮಹಾಶಿವರಾತ್ರಿ ದಿನದಂದು ಪ್ರಪಂಚದಲ್ಲಿರುವ ಎಲ್ಲಾ ಶಿವಾಲಯಗಳಲ್ಲಿ ರುದ್ರಾಭಿಷೇಕ, ರುದ್ರಹೋಮ,ವಿಶೇಷ ಪೂಜೆ-ಪುನಸ್ಕಾರಗಳು ನೆರವೇರುತ್ತದೆ. ಕಾಶಿ ವಿಶ್ವನಾಥ, ಕೇದಾರನಾಥ, ಮಹಾಕಾಳೇಶ್ವರ, ಬೃಹದೇಶ್ವರ, ಸೋಮನಾಥ ದೇವಾಲಯ, ಓಂಕಾರೇಶ್ವರ, ಭೀಮಾಶಂಕರ ದೇವಾಲಯ, ತ್ರಯಂಬಕೇಶ್ವರ ದೇವಾಲಯ ಸೇರಿದಂತೆ ಹಲವು ಶಿವಾಲಯಗಳಲ್ಲಿ ಶಿವರಾತ್ರಿಯಂದು ವಿಶೇಷ ಪೂಜೆಗಳು ನೆರವೇರುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.