ನವದೆಹಲಿ : ಈ ಜಗತ್ತಿನಲ್ಲಿ ಉದ್ಯೋಗಗಳಿಗೇನು ಕೊರತೆಯಿಲ್ಲ. ಕೆಲಸ ಮಾಡುವ ಮನಸ್ಸಿರಬೇಕು ಅಷ್ಟೇ.  ಕೆಲಸ ಹುಡುಕುವ ವೇಳೆ ಅನೇಕ ವಿಚಿತ್ರ ಉದ್ಯೋಗಗಳ ಬಗ್ಗೆ ಕೇಳಿರಬೇಕು. ಇಲ್ಲಿ ಹೆಚ್ಚಿನ ಕೆಲಸ ಇರುವುದೇ ಇಲ್ಲ. ಆದ್ರೆ ವೇತನಕ್ಕೆ ಮಾತ್ರ ಕೊರತೆಯಿರುವುದಿಲ್ಲ ಅಂದರೆ ವೇತನ (salary) ಭರ್ಜರಿಯಾಗೇ ಸಿಗುತ್ತದೆ. ಕೆಲವು ಕಂಪನಿಗಳು ಮೇಕಪ್ ಪ್ರಾಡಕ್ಟ್ ಟ್ರೈ ಮಾಡುವುದಕ್ಕೆ ವೇತನ ಕೊಟ್ಟರೆ ಇನ್ನು ಕೆಲವು ಕಂಪನಿಗಳು ನಾಯಿ ಆಡಿಸುವುದಕ್ಕೆ(Dog care taker). ಹೌದು, 9ರಿಂದ 5ರ ಜನರಲ್ ಶಿಫ್ಟ್ ನಲ್ಲಿ ಮಾಡಬಹುದಾದ ಕೆಲಸ ಇದು.  ತಿಂಗಳ ಅಂತ್ಯಕ್ಕೆ ಕೈ ತುಂಬಾ ವೇತನ. 


COMMERCIAL BREAK
SCROLL TO CONTINUE READING

ನಾಯಿಗಳ ಆರೈಕೆ ಮಾಡಿ ಲಕ್ಷ ಲಕ್ಷ ಸಂಪಾದಿಸಿ :
ಟೀಮ್‌ಡಾಗ್ಸ್‌ನ ವರದಿಯ ಪ್ರಕಾರ, ಒಂದು ಕಂಪನಿಯು ನಾಯಿಗಳನ್ನು ಆಟ ಆಡಿಸುವುದಕ್ಕೆ (Dog care taker) ತಿಂಗಳಿಗೆ  2 ಲಕ್ಷ ವೇತನ ನೀಡುತ್ತಿದೆ. ಈ ಮಾತನ್ನು ಕೇಳುವಾಗ ಆಶ್ಚರ್ಯವಾಗಬಹುದು. ಆದರೆ ಇದು ನೂರಕ್ಕೆ ನೂರರಷ್ಟು ಸತ್ಯ. Yappy.com   ಎಂಬ ಸೈಟ್ Chief Puppy Officer ಹುದ್ದೆಗೆ ಅಭ್ಯರ್ಥಿಯನ್ನು ಹುಡುಕುತ್ತಿದೆ. ಇದರ ಜಾಬ್ ಡಿಸ್ಕ್ರಿಪ್ಶನ್ ಇತರ ಉದ್ಯೋಗಗಳಿಗಿಂತ ಭಿನ್ನವಾಗಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಕೆಲಸಕ್ಕೆ ಸಿಗುವ ವೇತನ ಕೂಡ ಭರ್ಜರಿಯಾಗಿದೆ.  


ಇದನ್ನೂ ಓದಿ : CBSE 10th And 12th Exam Updates: CBSE 10ನೇ ಮತ್ತು 12ನೇ ತರಗತಿ ಪರೀಕ್ಷೆಗಳು ವರ್ಷದಲ್ಲಿ ಎರಡು ಬಾರಿ ನಡೆಯಲಿವೆ, ಶೈಕ್ಷಣಿಕ ವರ್ಷವನ್ನು ಎರಡು ಭಾಗಗಳಲ್ಲಿ ವಿಂಗಡಣೆ


ಯಾವಾಗಲೂ ನಾಯಿಮರಿಯನ್ನು ಸಂತೋಷವಾಗಿಡಬೇಕು : 
ಈ ಕೆಲಸದಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಲಾಗಿದೆ. 9ಗಂಟೆಯಿಂದ 5 ರವರೆಗೆ ರವರೆಗೆ ನಾಯಿಗಳನ್ನು ನೋಡಿಕೊಳ್ಳಬೇಕು. ನಾಯಿಮರಿಯನ್ನು 8 ಗಂಟೆಗಳ ಕಾಲ ಸಂತೋಷದಿಂದ ಇಟ್ಟುಕೊಳ್ಳಬೇಕು. ಅದಕ್ಕೆ ಬೇಕಾದ ಆಟಿಕೆಗಳನ್ನು ಕೊಟ್ಟು  ಆಟವಾಡಿಸಬೇಕು. ಇದರ ಜೊತೆಗೆ, ನಾಯಿ ಬಗ್ಗೆ ರಿಸರ್ಚ್ (Dog research) ಕೂಡ ಮಾಡಬೇಕಾಗುತ್ತದೆ.


ವಾರ್ಷಿಕ ಪ್ಯಾಕೇಜ್ ನೊಂದಿಗೆ ಕೆಲಸ : 
ಪ್ರತಿ ತಿಂಗಳು ವಾರ್ಷಿಕ 2 ಲಕ್ಷ ರೂ.ಗಳ ಪ್ಯಾಕೇಜ್ ಹೊಂದಿರುವ ಈ ಕೆಲಸಕ್ಕೆ ವಾರ್ಷಿಕ 24 ಲಕ್ಷ ರೂ. ನೀಡಲಾಗುವುದು. Manchester News ಈ ಕೆಲಸದ ಬಗ್ಗೆ ಪ್ರಕಟಿಸಲಾಗಿದೆ. ಕೈ ತುಂಬಾ ಬರುವ ವೇತನದಿಂದ (Salary) ಜೀವನವು ಸುಗಮವಾಗಿ ಸಾಗುತ್ತದೆ. ಆದರೆ ನಾಯಿಗಳನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದು ತಿಳಿದಿರಬೇಕು. 


ಇದನ್ನೂ ಓದಿ : ಕೇಂದ್ರ ಸರ್ಕಾರದ ಡಿಜಿಟಲ್ ಏಕಸ್ವಾಮ್ಯ ನಿಗ್ರಹದ ಸಮಿತಿಗೆ ಸೇರಲಿರುವ ನಂದನ್ ನಿಲೇಕಣಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.