ನವದೆಹಲಿ : ವಾಟ್ಸ್ ಅಪ್ ಮೆಸೆಂಜರ್ ಇದೀಗ ಮತ್ತೊಂದು ಹೊಸ ಫೀಚರ್ ಅನ್ನು ಪರಿಚಯಿಸಿದ್ದು, ತನ್ನ 'ಡಿಲೀಟ್ ಫಾರ್ ಎವೆರಿವನ್' ಆಪ್ಶನ್ ಅನ್ನು ಇದೀಗ ಅಪ್ಗ್ರೇಡ್ ಮಾಡಿದೆ. 


COMMERCIAL BREAK
SCROLL TO CONTINUE READING

ಈ ಮೊದಲು ವ್ಯಕ್ತಿಗೆ ಅಥವಾ ಗ್ರೂಪ್'ನಲ್ಲಿ ಕಳುಹಿಸಿದ ಮೆಸೇಜ್ ಅನ್ನು ಡಿಲೀಟ್ 7 ನಿಮಿಷದ ಒಳಗಾಗಿ ಡಿಲೀಟ್ ಮಾಡಲು ಅವಕಾಶವಿತ್ತು. ಅಷ್ಟರೊಳಗೆ ಮೆಸೇಜ್ ಡಿಲೀಟ್ ಮಾಡಿದರೆ ಕಳಿಸಿದ ಸಂದೇಶ ಶಾಶ್ವತವಾಗಿ ಅಳಿಸಿಹೋಗುತ್ತಿತ್ತು. ಅದೇ ಆ 7 ನಿಮಿಷ ಮೀರಿದರೆ ಆ ಮೆಸೇಜ್ ಅನ್ನು ಡಿಲಿಟ್ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ವಾಟ್ಸ್ ಆಪ್ ಈಗ ಡಿಲೀಟ್ ಫೀಚರ್ ಅಪ್ಡೇಟ್ ಮಾಡಲು ಮುಂದಾಗಿದ್ದು, ಇಲ್ಲಿ 7 ನಿಮಿಷಗಳಿಗೆ ಬದಲಾಗಿ 68 ನಿಮಿಷ ಅಂದರೆ ಒಟ್ಟು 4096 ಸೆಕೆಂಡ್'ಗಳೊಳಗೆ ನೀವು ವ್ಯಕ್ತಿಗತವಾಗಿ ಅಥವಾ ಗ್ರೂಪ್ನಲ್ಲಿ ಕಳಿಸಿದ ಸಂದೇಶವನ್ನು ಅಳಿಸಿಹಾಕಬಹುದು. 


ಈ ಹೊಸ ಆಯ್ಕೆ ವಾಟ್ಸಪ್'ನ 2.18.69 ಬೀಟಾ ವರ್ಷನ್'ನಲ್ಲಿ ಲಭ್ಯವಿರಲಿದೆ. ಕಳೆದ ನವೆಂಬರ್'ನಲ್ಲಿ ಮೆಸೇಜ್'ಅನ್ನು ಅಳಿಸಿ ಹಾಕುವ ಆಯ್ಕೆಯನ್ನು ಪರಿಚಯಿಸಲಾಗಿತ್ತು. ನೀವು ಕಳಿಸಿದ ಮೆಸೇಜ್'ಅನ್ನು ಒತ್ತಿ ಹಿಡಿದು ವಾಟ್ಸ'ಪ್'ನಲ್ಲಿರುವ ಡೆಲೀಟ್ ಒತ್ತಿದರೆ 'ಡೆಲೀಟ್ ಫಾರ್ ಮಿ, ಕ್ಯಾನ್ಸ್'ಲ್ ಹಾಗೂ ಡೆಲಿಟ್ ಫಾರ್ ಎವರಿಒನ್' ಆಯ್ಕೆಗಳು ಬರುತ್ತವೆ. ನಂತರ ನೀವು ಡೆಲೀಟ್ ಫಾರ್ ಎವರಿಒನ್ ಒತ್ತಿದರೆ ನೀವು ಕಳುಹಿಸಿದ ಮತ್ತು ಸ್ವಿಕರಿಸಿದ ವ್ಯಕ್ರಿಯ ಎರಡೂ ಕಡೆಗಳಲ್ಲಿನ ಸಂದೇಶಗಳು ಶಾಶ್ವತವಾಗಿ ಡಿಲೀಟ್ ಆಗುತ್ತದೆ.