ನವದೆಹಲಿ: ಅಯೋಧ್ಯೆಯಲ್ಲಿ 67.7 ಎಕರೆ ಭೂಮಿಯಲ್ಲಿನ ನಿರ್ವಿವಾಧಿತ ಜಾಗದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರದಂದು ವಜಾ ಮಾಡಿದೆ.


COMMERCIAL BREAK
SCROLL TO CONTINUE READING

ಇದೇ ವೇಳೆ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಪೀಠ " ನೀವು ಎಂದಿಗೂ ಕೂಡ ಈ ದೇಶವನ್ನು ಶಾಂತಿಯಿಂದಿರಲು ಬಿಡುವುದಿಲ್ಲ, ಒಂದಿಲ್ಲ ಏನಾದರೂ ಇದ್ದೇ ಇರುತ್ತದೆ" ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದೆ. ಇದೇ ಸಂದರ್ಭದಲ್ಲಿ ಅರ್ಜಿದಾರರಿಗೆ ಐದು ಲಕ್ಷ ರೂ. ದಂಡ ವಿಧಿಸುವ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಹಿಂತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿತು.


ಈ ಹಿಂದೆ ಇದೇ ರೀತಿಯ ಅರ್ಜಿಯನ್ನು ತಿರಸ್ಕರಿಸಿ, ವಿವಾದಿತ ಜಾಗದಲ್ಲಿ ನಮಾಜ್  ಮಾಡಲು ಅನುಮತಿ ನೀಡುವುದಕ್ಕೆ ಸಲ್ಲಿಸಿದ್ದ ಅರ್ಜಿದಾರನಿಗೆ ಐದು ಲಕ್ಷ ರೂ.ದಂಡವನ್ನು ವಿಧಿಸಿತ್ತು. ಫೆಬ್ರವರಿಯಲ್ಲಿ ಹಿರಿಯ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಪ್ರತ್ಯೇಕ ಅರ್ಜಿ ವಿಚಾರಣೆ ಸಲ್ಲಿಸಿ ಪೂಜಿಸುವ ಧಾರ್ಮಿಕ ಮೂಲಭೂತ ಹಕ್ಕಿನಡಿಯಲ್ಲಿ  ವಿವಾದಿತ ರಾಮಮಂದಿರ ಜಾಗದಲ್ಲಿ ಪೂಜೆ ಮಾಡಲು ಅವಕಾಶ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು.