ಜನರ ಹೃದಯವನ್ನು ಗೆದ್ದಿರುವ ನೀವು ಅಧ್ಯಕ್ಷ ಹುದ್ದೆ ತ್ಯಜಿಸಬೇಡಿ - ರಾಹುಲ್ ಗೆ ಸ್ಟಾಲಿನ್ ಸಲಹೆ
ರಾಹುಲ್ ಗಾಂಧಿ ಅಧ್ಯಕ್ಷ ಹುದ್ದೆ ತ್ಯಜಿಸುವುದಕ್ಕೆ ಈಗ ಕಾಂಗ್ರೆಸ್ ಪಕ್ಷದೊಳಗೆ ಅಷ್ಟೇ ಅಲ್ಲ ಅದರಾಚೆಗೂ ಕೂಡ ವಿರೋಧ ವ್ಯಕ್ತವಾಗಿದೆ.ಆರ್ಜೆಡಿಯ ಲಾಲೂ ಪ್ರಸಾದ್ ಯಾದವ್ ರಾಹುಲ್ ಹುದ್ದೆಯನ್ನು ತ್ಯಜಿಸುವುದು ಆತ್ಮಹತ್ಯೆಗೆ ಸಮ ಎಂದು ವ್ಯಾಖ್ಯಾನಿಸಿದ ಬೆನ್ನಲ್ಲೇ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಕೂಡ ರಾಹುಲ್ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ರಾಹುಲ್ ಗಾಂಧಿ ಅಧ್ಯಕ್ಷ ಹುದ್ದೆ ತ್ಯಜಿಸುವುದಕ್ಕೆ ಈಗ ಕಾಂಗ್ರೆಸ್ ಪಕ್ಷದೊಳಗೆ ಅಷ್ಟೇ ಅಲ್ಲ ಅದರಾಚೆಗೂ ಕೂಡ ವಿರೋಧ ವ್ಯಕ್ತವಾಗಿದೆ.ಆರ್ಜೆಡಿಯ ಲಾಲೂ ಪ್ರಸಾದ್ ಯಾದವ್ ರಾಹುಲ್ ಹುದ್ದೆಯನ್ನು ತ್ಯಜಿಸುವುದು ಆತ್ಮಹತ್ಯೆಗೆ ಸಮ ಎಂದು ವ್ಯಾಖ್ಯಾನಿಸಿದ ಬೆನ್ನಲ್ಲೇ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಕೂಡ ರಾಹುಲ್ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಹುದ್ದೆ ತ್ಯಜಿಸುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನವನ್ನು ನೀಡಿದ್ದರೂ ಕೂಡ ತಾವು ಜನರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಿರಿ ಎಂದು ದೂರವಾಣಿ ಮೂಲಕ ಕರೆ ಮಾಡಿ ವಿನಂತಿಸಿಕೊಂಡಿದ್ದಾರೆ ಎನ್ನಲಾಗಿದೆ.
2019 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕೇವಲ 52 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಕಳಪೆ ಪ್ರದರ್ಶನ ನೀಡಿತ್ತು,ಇನ್ನೊಂದೆಡೆಗೆ ಬಿಜೆಪಿ 303 ಸ್ಥಾನಗಳನ್ನು ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಕಾಂಗ್ರೆಸೇತರ ಪಕ್ಷವೊಂದು ಬಹುಮತವನ್ನು ಪಡೆದ ಸಾಧನೆ ಮಾಡಿತ್ತು. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ರಾಜೀನಾಮೆಯನ್ನು ನೀಡಲು ಮುಂದಾಗಿದ್ದರು. ಆದರೆ ಹಿರಿಯ ನಾಯಕರು ಅವರ ರಾಜೀನಾಮೆಯನ್ನು ತಿರಿಸ್ಕರಿಸಿದ್ದರು.ಆದರೆ ಇದಾದ ನಂತರವು ಕೂಡ ರಾಹುಲ್ ತಮ್ಮ ನಿರ್ಧಾರಕ್ಕೆ ಕಟಿಬದ್ದರಾಗಿದ್ದರು.
ಈ ಹಿನ್ನಲೆಯಲ್ಲಿ ಈಗ ಕಾಂಗ್ರೆಸ್ ಪಕ್ಷದಾಚೆಗೂ ಕೂಡ ಅವರಿಗೆ ಅಧ್ಯಕ್ಷರಾಗಿ ಮುಂದುವರೆಯಬೇಕೆಂಬ ಒತ್ತಡ ಅಧಿಕಗೊಂಡಿದೆ.