ನವದೆಹಲಿ: ಯುವತಿಯೋಬಳನ್ನು ನಾಲ್ಕು ದಿನಗಳ ಕಾಲ ಬಂಧನದಲ್ಲಿಟ್ಟು ನಿರಂತರ ಅತ್ಯಾಚಾರ ಎಸಗಿದ ಘಟನೆ ದೆಹಲಿಯ ಅಮರ್ ಕಾಲೋನಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಆರೋಪಿಗಳಾದ ಇಬ್ಬರು ಸಹೋದರರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 376ಡಿ, 377 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 


ಸಂತ್ರಸ್ತ ಯುವತಿ ಉತ್ತರಪ್ರದೇಶದ ಕಾನ್ಪುರ ನಿವಾಸಿಯಾಗಿದ್ದು, ಮನೆಯವರೊಂದಿಗೆ ಜಗಾಲ್ ಮಾಡಿಕೊಂಡು ಮನೆ ಬಿಟ್ಟು ಮೇ 16ರಂದು ದೆಹಲಿಗೆ ಬಂದಿದ್ದಾಗಿಯೂ, ಬಳಿಕ ಒಂದು ದಿನ ನಿಜಾಮುದ್ದೀನ್ ಪ್ರದೇಶದಲ್ಲಿ ಉಳಿದುಕೊಂದು ಮರುದಿನ ರಿಕ್ಷಾದಲ್ಲಿ ಲಜಪತ್ ನಗರಕ್ಕೆ ತೆರಳಿದ್ದಾಗಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾಳೆ. 


ಲಜಪತ್ ನಗರಕ್ಕೆ ತಲುಪಿದ ಬಳಿಕ ಟೀ ಕುಡಿಯಲು ಅಲ್ಲಿಯೇ ಇದ್ದ ಅಂಗಡಿಗೆ ಹೋದ ಆಕೆ, ಆ ಅಂಗಡಿ ಮಾಲಿಕನಿಗೆ ತನಗೆ ಕೆಲಸ ಬೇಕಿರುವುದಾಗಿ ಕೇಳಿದ್ದಾಳೆ. ಬಳಿಕ ಆತ ಆಕೆಗೆ ಕೋಟಿಯಲ್ಲಿ ಕೆಲಸ ಇದೇ, ತಾನು ಕೊಡಿಸುವುದಾಗಿ ಭರವಸೆ ನೀಡಿ ಆ ರಾತ್ರಿ ತನ್ನ ಮನೆಯಲ್ಲೇ ಉಳಿಯಲು ಆಕೆಗೆ ಹೇಳಿದ್ದಾನೆ. ಬಳಿಕ ರಾತ್ರಿ ಮನೆಗೆ ಬಂದ ಆತನ ಇಬ್ಬರು ಮಕ್ಕಳು ಆಕೆಯ ಮೇಲೆ ನಾಲ್ಕು ದಿನ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಐದನೇ ದಿನ ಯುವತಿ ಸಮಯ ನೋಡಿ ಅಲ್ಲಿಂದ ತಪ್ಪಿಸಿಕೊಂಡು ಬಂದು ದೂರು ನೀಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 


ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.