ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಗ ಪ್ರಧಾನಿ ಮೋದಿ ಮಾಡಿದ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಧಾನಿ ಮೋದಿ ಅವರು ತಮ್ಮ ಭಾಷಣವೊಂದರಲ್ಲಿ ರಾಜೀವ್ ಗಾಂಧಿಯವರ ಜೀವನ ಭ್ರಷ್ಟಾಚಾರಿ ನಂಬರ್ 1 ಆಗಿ ಕೊನೆಗೊಂಡಿತು ಎಂದು ಹೇಳಿದ್ದರು.ಈ ಹೇಳಿಕೆಗೆ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಮ್ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.



ತಮ್ಮ ತಂದೆ ರಾಜೀವ್ ಗಾಂಧಿಯವರ ಕುರಿತಾಗಿ ಪ್ರಧಾನಿ ಮೋದಿ ಹೇಳಿಕೆಗೆ ಕೊನೆಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮೂಲಕ ಮೌನ ಮುರಿದಿದ್ದಾರೆ." ಮೋದಿಜಿ, ಈಗ ಯುದ್ಧ ಮುಗಿದಿದೆ. ಕರ್ಮ ನಿಮಗೆ ಕಾದಿದೆ, ನಿಮ್ಮ ಆಂತರಿಕ ನಂಬಿಕೆಗಳನ್ನು ರಕ್ಷಿಸಲು ನಮ್ಮ ತಂದೆ ಮೇಲೆ ಆರೋಪ ಮಾಡಿದರೆ ಕಾಪಾಡಲು ಸಾಧ್ಯವಿಲ್ಲ" ನನ್ನ ಎಲ್ಲ ಪ್ರೀತಿ ಮತ್ತು ಅಪ್ಪುಗೆಗಳೊಂದಿಗೆ " ಎಂದು ರಾಹುಲ್ ಗಾಂಧಿ  ಟ್ವೀಟ್ ಮಾಡಿದ್ದಾರೆ . 



ರಾಜೀವ್ ಗಾಂಧಿ ಮೇಲೆ ಮಾಡಿರುವ ಆರೋಪದ ಕುರಿತಾಗಿ ಟ್ವೀಟ್ ಮಾಡಿರುವ ಚಿದಂಬರಂ "ಮೋದಿ ಏನಾದರೂ ಓದಿದ್ದಾರೆಯೇ? ರಾಜೀವ್ ಗಾಂಧಿ ಮೇಲಿನ ಆರೋಪವನ್ನು ಆಧಾರ ರಹಿತ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಬಿಜೆಪಿ ಸರ್ಕಾರವು ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೊರೆ ಹೋಗದಿರುವ ಕುರಿತ ನಿರ್ಣಯದ ಬಗ್ಗೆ ಮೋದಿಗೆ ಏನಾದರೂ ತಿಳಿದಿದೆಯೇ ? ಎಂದು ಸರಣಿ ಟ್ವೀಟ್ ಮಾಡಿದ್ದಾರೆ.