ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಿಟರ್ನ್ಸ್ ಸಲ್ಲಿಸದ ಡೀಫಾಲ್ಟರ್‌ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜಿಎಸ್ಟಿ ಬಾಕಿಗಾರರಿಗೆ ಸಂಬಂಧಿಸಿದಂತೆ ಜಿಎಸ್ಟಿ ಅಧಿಕಾರಿಗಳಿಗೆ ಸುತ್ತೋಲೆಯನ್ನು ಹೊರಡಿಸಿರುವ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದೆ. ಈ ಜಿಎಸ್‌ಟಿ ಅಧಿಕಾರಿಗಳ ಪಟ್ಟಿಯಲ್ಲಿ ಪ್ರಧಾನ ಮುಖ್ಯ ಆಯುಕ್ತರು, ಮುಖ್ಯ ಆಯುಕ್ತರು, ಪ್ರಧಾನ ಆಯುಕ್ತರು ಮತ್ತು ಮಹಾನಿರ್ದೇಶಕರು ಶಾಮೀಲಾಗಿದ್ದಾರೆ. ಸರ್ಕಾರವು GST ಬಾಕಿ ಉಳಿಸಿಕೊಂಡವರ ಆಸ್ತಿಯನ್ನು ಲಗತ್ತಿಸುವ ಮೂಲಕ ಬಾಕಿ ಉಳಿಸಿಕೊಂಡಿರುವ ಜಿಎಸ್ಟಿಯನ್ನು ರಿಕವರ್ ಮಾಡಲು ಸುತ್ತೋಲೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದೆ.


COMMERCIAL BREAK
SCROLL TO CONTINUE READING

ಏನಿದೆ CBIC ಸುತ್ತೋಲೆಯಲ್ಲಿ?
ಹಲವಾರು ನೋಟಿಸ್ ಗಳನ್ನು ನೀಡಿದ ಬಳಿಕವೂ ಬಾಕಿದಾರರು ತಮ್ಮ ಜಿಎಸ್ಟಿ ರಿಟರ್ನ್ ಸಲ್ಲಿಸದಿದ್ದರೆ, ತಕ್ಷಣ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಜಿಎಸ್ಟಿ ರಿಟರ್ನ್ ಸಲ್ಲಿಸಲು ಗ್ರಾಹಕರಿಗೆ ಕೊನೆಯ ದಿನಾಂಕಕ್ಕೆ 3 ದಿನಗಳ ಮುಂಚಿತವಾಗಿ ಎಚ್ಚರಿಕೆಯನ್ನು ನೀಡಲಾಗುವುದು. ಬಾಕಿದಾರರು ಒಂದು ವೇಳೆ ನಿಗದಿತ ದಿನಾಂಕದ 5 ದಿನಗಳಲ್ಲಿ ಜಿಎಸ್ಟಿ ರಿಟರ್ನ್ ಸಲ್ಲಿಸದಿದ್ದರೆ, ಇ-ಮೇಲ್ ಮೂಲಕ ಅವರಿಗೆ ನೋಟಿಸ್ ನೀಡಲಾಗುವುದು. ಜಿಎಸ್ಟಿ ನೀಡಲಿರುವ ಈ ಇ-ಮೇಲ್ ನಲ್ಲಿ ಮುಂದಿನ 15 ದಿನಗಳಲ್ಲಿ ಜಿಎಸ್ಟಿ ರಿಟರ್ನ್ ಸಲ್ಲಿಸಲು ನಿರ್ದೆಶಿಸಲಾಗುವುದು. ಆ ಬಳಿಕವೂ ಕೂಡ ಬಾಕಿದಾರರು ತಮ್ಮ GST ರಿಟರ್ನ್ಸ್ ಸಲ್ಲಿಸದಿದ್ದರೆ, ತೆರಿಗೆ ಮೌಲ್ಯಮಾಪನ ಆದೇಶವನ್ನು ನೀಡಲಾಗುವುದ. ಈ ಮೌಲ್ಯಮಾಪನ ಆದೇಶ ಹೊರಡಿಸಿದ 30 ದಿನಗಳಲ್ಲಿ, ಬಾಕಿದಾರರು ಜಿಎಸ್ಟಿ ರಿಟರ್ನ್ ಅನ್ನು ಭರ್ತಿ ಮಾಡದಿದ್ದರೆ, ಅಂತಹ ಬಾಕಿದಾರರ ಆಸ್ತಿಯನ್ನು ಲಗತ್ತಿಸುವ ಮೂಲಕ ಬಾಕಿ ಇರುವ ಜಿಎಸ್ಟಿಯನ್ನು ಮರುಪಡೆಯಬಹುದು ಎಂದು CBIC ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.


GACT ಬಾಕಿದಾರ ಅಂದರೆ ಯಾರು?
ಪ್ರತಿಯೊಬ್ಬ ಗ್ರಾಹಕರು ತಿಂಗಳ 20 ರೊಳಗೆ ತಮ್ಮ ಜಿಎಸ್‌ಟಿಆರ್-3 ಎ ಸಲ್ಲಿಸಬೇಕಾಗುತ್ತದೆ. ಒಂದು ನಿರ್ದಿಷ್ಟ ಸಮಯದಲ್ಲಿ ಗ್ರಾಹಕನು ತನ್ನ ಜಿಎಸ್ಟಿ ರಿಟರ್ನ್ ಅನ್ನು ಸಲ್ಲಿಸದಿದ್ದರೆ, ಆತನು ಕಟಬಾಕಿದರರ ವರ್ಗಕ್ಕೆ ಸೇರುತ್ತಾನೆ.