Yuvraj Singh Lok Sabha election 2024 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಬಿಜೆಪಿಯ ಸಿಇಸಿ ಸಭೆಯ ನಂತರ, ಮತ್ತೊಮ್ಮೆ ಬಿಜೆಪಿ ಅನೇಕ ಸೆಲೆಬ್ರಿಟಿಗಳನ್ನು ಚುನಾವಣೆಯಲ್ಲಿ ಸ್ಪರ್ಧೆಗಿಳಿಸಬಹುದು ಎಂದು ಹೇಳಲಾಗ್ತಿದೆ. ಈ ಪಟ್ಟಿಯಲ್ಲಿ ಟೀಮ್‌ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‌ ಹೆಸರು ಕೂಡ ಕೇಳಿಬರುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯುವರಾಜ್‌ ಸಿಂಗ್‌ ಕಣಕ್ಕಿಳಿಯಬಹುದು ಎನ್ನಲಾಗ್ತಿದೆ. ಈ ಬಗ್ಗೆ ಯುವರಾಜ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಯುವರಾಜ್ ಸಿಂಗ್ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ್ದು, ಗುರುದಾಸ್‌ಪುರದಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಯುವಿ ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣ X ಮೂಲಕ ಹಂಚಿಕೊಂಡಿದ್ದಾರೆ.  


ಇದನ್ನೂ ಓದಿ: ಗೆಳೆಯನ ಪತ್ನಿಯನ್ನೇ ಪ್ರೀತಿಸಿ.. ಡಿವೋರ್ಸ್‌ ಬಳಿಕ ಮದುವೆಯಾದ ಟೀಮ್‌ ಇಂಡಿಯಾ ಸ್ಟಾರ್‌ ಕ್ರಿಕೆಟರ್! ‌ 


ಬಿಜೆಪಿಯ ಇತ್ತೀಚಿನ ಸಿಇಸಿ ಸಭೆಯ ನಂತರ, ಒಂದೆರಡು ದಿನಗಳಲ್ಲಿ ಬಿಜೆಪಿ 100 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಬಹುದು ಎಂಬ ಸುದ್ದಿ ಸಹ ಹರಿದಾಡುತ್ತಿದೆ. ವರದಿ ಪ್ರಕಾರ, ಬಿಜೆಪಿ ಪ್ರಬಲ ಸ್ಥಾನದಲ್ಲಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲಿ ಘೋಷಿಸಲಾಗುತ್ತದೆ. ಈ ಸ್ಥಾನಗಳಲ್ಲಿ ಒಂದು ಗುರುದಾಸ್‌ಪುರ. ಈ ಕ್ಷೇತ್ರದಿಂದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‌ಗೆ ಬಿಜೆಪಿ ಅವಕಾಶ ನೀಡಬಹುದು ಎಂಬ ಊಹಾಪೋಹಗಳಿದ್ದವು, ಆದರೆ ಯುವರಾಜ್ ಸಿಂಗ್ ಸ್ವತಃ ಇದನ್ನು ನಿರಾಕರಿಸಿದ್ದಾರೆ.


 


ಲೋಕಸಭೆ ಅಖಾಡಕ್ಕೆ ಅಕ್ಷಯ್ ಕುಮಾರ್? ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಬಾಲಿವುಡ್‌ ಸ್ಟಾರ್?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.