ಬೆಂಗಳೂರು :  ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ಘೋಷಿಸಿದ್ದಾರೆ. ಗೋವಾದಲ್ಲಿರುವ ತಮ್ಮ ಐಷಾರಾಮಿ ಮನೆಯನ್ನು ಯುವಿ ಬಾಡಿಗೆ ನೀಡುವುದಾಗಿ ತಿಳಿದ್ದಾರೆ.  


COMMERCIAL BREAK
SCROLL TO CONTINUE READING

ಅದ್ಭುತ ಈಜುಕೊಳ ಮತ್ತು ಸುಂದರವಾದ ನೋಟದೊಂದಿಗೆ ದೊಡ್ಡ ಟೆರೇಸ್‌ನಂತಹ ಅನೇಕ ಸೌಲಭ್ಯಗಳನ್ನು ಈ ಮನೆ ಹೊಂದಿದೆ. ಈ ಕುರಿತು ಯುವರಾಜ್‌ ಸಿಂಗ್‌ ತಮ್ಮ ಟ್ಟಿಟರ್‌ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮನೆಯ ಫೋಟೋಸ್‌ ಹಾಗೂ ಮಾಹಿತಿಯನ್ನು ಪೋಸ್ಟ್ ಮಾಡಿ ಮನೆ ಬಾಡಿಗೆಗೆ ಇದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ಸಿಎಂ ಬೊಮ್ಮಾಯಿ


Airbnb ನಲ್ಲಿ ನನ್ನ ಮನೆಯನ್ನು ಬಾಡಿಗೆ ಪಡೆಯಬಹುದು, ಆರು ಜನರು ಮಾತ್ರ ವಾಸ್ತವ್ಯ ಹೂಡಬಹುದು. ನಾನು ಇದೆ ಮನೆಯಲ್ಲಿ ನನ್ನ ಪ್ರೀತಿಪಾತ್ರರ ಜೊತೆಗೆ ಸಮಯ ಕಳೆದಿದ್ದೇನೆ. ಇಲ್ಲಿ ನನ್ನ ಅತ್ಯಮೂಲ್ಯ ಸಮಯಗಳ ನೆನಪು ತುಂಬಿದೆ ಎಂದು ಬಾವುಕರಾಗಿ ಬರೆದುಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.