Zee AI Exit Poll: ಲೋಕಸಭಾ ಚುನಾವಣೆಯ ಏಳು ಹಂತಗಳ ಮತದಾನ ಮುಕ್ತಾಯಗೊಂಡಿದ್ದು, ಜೂನ್ 4ರ ಫಲಿತಾಂಶಕ್ಕಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಯಾರಿಗೆ ಬಹುಮತ ಒಲಿಯಲಿದೆ ಎಂಬ ಕುತೂಹಲ ಗರಿಗೆದರಿದೆ. ಇದರ ಬನ್ನಲ್ಲೇ ಮತಗಟ್ಟೆ ಸಮೀಕ್ಷೆ ವರದಿಗಳು ಪ್ರಕಟಗೊಂಡಿವೆ. ಈ ಎಕ್ಸಿಟ್‌ ಪೋಲ್‌ ಭವಿಷ್ಯ ನಿಜವಾಗಲಿದೆಯೇ ಅನ್ನೋದರ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. 


COMMERCIAL BREAK
SCROLL TO CONTINUE READING

ಈ ನಡುವೆ ಇದೇ ಮೊದಲ ಬಾರಿಗೆ ಭಾನುವಾರ ZEE NEWS AI ಎಕ್ಸಿಟ್ ಪೋಲ್‌ ಪ್ರಕಟವಾಗಿದೆ. ಈ ಎಕ್ಸಿಟ್‌ ಪೋಲ್‌ನ ಡೇಟಾ ಸಂಗ್ರಹಣೆಗೆ AI ತಂತ್ರಜ್ಞಾನವನ್ನು ಬಳಸಲಾಗಿದೆ. ಕೃತಕ ಬುದ್ಧಿಮತ್ತೆ ಬಳಸುವ ಮೂಲಕ ನಡೆಸಲಾದ ಈ ZEE NEWS ಎಕ್ಸಿಟ್ ಪೋಲ್‌ಗೆ 10 ಕೋಟಿ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಈ ಫಲಿತಾಂಶವು ಕೇವಲ AI ಎಕ್ಸಿಟ್ ಪೋಲ್ ಮುನ್ಸೂಚನೆಯಾಗಿದ್ದು, ನಿಜವಾದ ಫಲಿತಾಂಶವಲ್ಲ. ZEE NEWS AI ಎಕ್ಸಿಟ್ ಪೋಲ್‌ ಪ್ರಕಾರ, ಒಟ್ಟು 543 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ NDA ಬರೋಬ್ಬರಿ 310 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಅದೇ ರೀತಿ ಕಾಂಗ್ರೆಸ್‌ ನೇತೃತ್ವದ INDIA 188 ಮತ್ತು45 ಸ್ಥಾನಗಳಲ್ಲಿ ಇತರರು ಗೆಲುವು ಸಾಧಿಸಲಿದ್ದಾರೆಂದು ಭವಿಷ್ಯ ನುಡಿಯಲಾಗಿದೆ.


ಇದನ್ನೂ ಓದಿ: Lok Sabha Election 2024:  ಕಾಂಗ್ರೆಸ್ ಪಕ್ಷ 100 ಸೀಟು ಗೆದ್ದಲ್ಲಿ ಬಿಜೆಪಿಗೆ ಎದುರಾಗಲಿದೆ ಕಂಟಕ...!


ಇಂಡಿಯಾ ಒಕ್ಕೂಟ ಅಧಿಕಾರಕ್ಕೇರಿದ್ರೆ ರಾಹುಲ್‌ ಗಾಂಧಿ ಪ್ರಧಾನಿ


ಪಶ್ಚಿಮ ಬಂಗಾಳ: ZEE NEWS AI ಎಕ್ಸಿಟ್ ಪೋಲ್‌ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ NDA ಮೈತ್ರಿಕೂಟ 20-24 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಟಿಎಂಸಿ 16-22 ಸ್ಥಾನಗಳನ್ನು ಪಡೆಯಬಹುದು. ಇಂಡಿಯಾ ಮೈತ್ರಿಕೂಟವು 0-1 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.