Zee Digital TV: ದೇಶದಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ಭಾಷೆಗಳಲ್ಲಿ ಬರುತ್ತಿದೆ ಡಿಜಿಟಲ್ ಟಿವಿ
Zee Digital TV: ದೇಶದ ಮೊದಲ ಖಾಸಗಿ ಉಪಗ್ರಹ ವಾಹಿನಿಯಾಗಿ ಆರಂಭವಾದ ಜೀ ಮೀಡಿಯಾ ಅಂದಿನಿಂದ ಇಂದಿನವರೆಗೂ ಬೆಳೆಯುತ್ತಲೇ ಇದೆ. ಜೀ ಮೀಡಿಯಾ ಖಾಸಗಿ ಉಪಗ್ರಹ ಚಾನೆಲ್ ಹೊಂದಿರುವ ದೇಶದ ಮೊದಲ ಖಾಸಗಿ ದೂರದರ್ಶನ ಚಾನೆಲ್ ಮತ್ತು ದೇಶದ ಅತಿದೊಡ್ಡ ಸುದ್ದಿ ಜಾಲವಾಗಿದೆ.
Zee Digital TV: ದೇಶದ ಅತಿದೊಡ್ಡ ಮಾಧ್ಯಮ ಸಮೂಹವಾಗಿರುವ ಜೀ ಮೀಡಿಯಾ ಮತ್ತೊಂದು ವಿನೂತನ ಉಪಕ್ರಮವನ್ನು ಆರಂಭಿಸಿದೆ. ದೇಶದಲ್ಲಿ ಮೊದಲ ಬಾರಿಗೆ 24 ಗಂಟೆಗಳ ಲೈವ್ ಡಿಜಿಟಲ್ ಟಿವಿಯನ್ನು ಪರಿಚಯಿಸಲು ಜೀ ಮಾಧ್ಯಮ ಸಿದ್ಧವಾಗಿದೆ. ದಕ್ಷಿಣ ಭಾರತದ ನಾಲ್ಕು ಮುಖ್ಯ ಭಾಷೆಗಳಾದ ಕನ್ನಡ (Kannada), ತಮಿಳು (Tamil), ತೆಲುಗು (Telugu) ಹಾಗೂ ಮಲೆಯಾಳಂ (Malayalam) ಭಾಷೆಗಳಲ್ಲಿ ಜೀ ಡಿಜಿಟಲ್ ನ್ಯೂಸ್ (Zee Digital News) ಇಂದಿನಿಂದ ಆರಂಭವಾಗಲಿದೆ.
[[{"fid":"227918","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ದೇಶದ ಮೊದಲ ಖಾಸಗಿ ಉಪಗ್ರಹ ವಾಹಿನಿಯಾಗಿ ಆರಂಭವಾದ ಜೀ ಮೀಡಿಯಾ (Zee Media) ಅಂದಿನಿಂದ ಇಂದಿನವರೆಗೂ ಬೆಳೆಯುತ್ತಲೇ ಇದೆ. ಜೀ ಮೀಡಿಯಾ ಖಾಸಗಿ ಉಪಗ್ರಹ ಚಾನೆಲ್ ಹೊಂದಿರುವ ದೇಶದ ಮೊದಲ ಖಾಸಗಿ ದೂರದರ್ಶನ ಚಾನೆಲ್ ಮತ್ತು ದೇಶದ ಅತಿದೊಡ್ಡ ಸುದ್ದಿ ಜಾಲವಾಗಿದೆ. ಸಾಮಾಜಿಕ ಮಾಧ್ಯಮಗಳ ಜೊತೆಗೆ, ಇದು 15.4 ಕೋಟಿ ಅನುಯಾಯಿಗಳನ್ನು ಹೊಂದಿರುವ ಅತಿದೊಡ್ಡ ನೆಟ್‌ವರ್ಕ್ ಆಗಿದೆ.
ಆ ಸಾಲಿನಲ್ಲಿ ಇದೀಗ ಮತ್ತೊಂದು ವಿನೂತನ ಪ್ರಯತ್ನಕ್ಕೆ ಜೀ ಸಮೂಹ ಕೈ ಹಾಕಿದ್ದು, Zee Media ಮೊದಲ ಬಾರಿಗೆ ಡಿಜಿಟಲ್ ಟಿವಿಯನ್ನು ಪರಿಚಯಿಸಿದೆ. ಡಿಜಿಟಲ್ ನ್ಯೂಸ್ ಚಾನೆಲ್ ಇಂದಿನಿಂದ (ಜನವರಿ 25) ಬೆಳಿಗ್ಗೆ 10 ಗಂಟೆಗೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಾದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಏಕಕಾಲದಲ್ಲಿ ಪ್ರಾರಂಭವಾಗಲಿದೆ.
[[{"fid":"227920","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"3":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"3"}}]]
'ಬದಲಾವಣೆ ಜಗದ ನಿಯಮ' ಎಂಬುದನ್ನು ಜೀ ಮೀಡಿಯಾ ನೆಟ್ ವರ್ಕ್ (Zee Media Network) ಒಪ್ಪಿಕೊಂಡಿದೆ. ಕಾಲಕ್ಕೆ ತಕ್ಕಂತೆ ಹಲವು ಆಯಾಮಗಳಲ್ಲಿ ಬದಲಾಗಿದೆ. ಜೀ ಮೀಡಿಯಾ ಸದಾ ಪ್ರಯೋಗಶೀಲವಾಗಿದೆ. ಹೀಗೆ ಎಷ್ಟೇ ಬದಲಾವಣೆಗಳನ್ನು ಕಂಡರೂ, ವೇಗದಲ್ಲಿ ಸಾಗುತ್ತಿದ್ದರೂ 'ಸತ್ಯವೇ ಸುದ್ದಿಯ ಜೀವಾಳ' (Satyave Suddiya Jeevala) ಎಂಬ ಮಾಧ್ಯಮದ ಮೌಲ್ಯವನ್ನು ಎಂದೂ ಬಿಟ್ಟುಕೊಟ್ಟಿಲ್ಲ. ಈಗ ಅದೇ ಬದ್ದತೆಯೊಂದಿಗೆ ಜೀ ಕನ್ನಡ ನ್ಯೂಸ್ (Zee Kannada News) ನಿಮ್ಮ ಮುಂದೆ ಬರುತ್ತಿದೆ.
[[{"fid":"227919","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]
ಕನ್ನಡಿಗರಿಗಾಗಿ ಜೀ ಕನ್ನಡ ನ್ಯೂಸ್ ಡಿಜಿಟಲ್ ಟಿವಿ ಕಾರ್ಯನಿರ್ವಹಿಸಲಿದೆ. ನಮ್ಮ ಚಾನಲ್‌ನಲ್ಲಿ ನಿಮ್ಮ ನಿಮ್ಮ ಊರಿನ ಸುದ್ದಿಗಳಿಂದ ಹಿಡಿದು ಅಂತಾರಾಷ್ಟ್ರೀಯ ಬೆಳವಣಿಗೆಗಳವರೆಗೆ, ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಿಂದ ಹಿಡಿದು ನಮ್ಮ ಸುತ್ತಲಿನ ನೂರಾರು ಸಂಗತಿಗಳವರೆಗೆ, ಕ್ರೀಡೆ, ಕ್ರಿಕೆಟ್, ಸಿನಿಮಾ, ಸೀರಿಯಲ್ ಕ್ಷೇತ್ರಗಳಿಂದ ಹಿಡಿದು ಸಾಮಾಜಿಕ ಜಾಲತಾಣದ ಹತ್ತು-ಹಲವು ವಿಷಯಗಳವರೆಗೆ, ಸಂಸ್ಕೃತಿ, ಪರಂಪರೆಯಿಂದ ಹಿಡಿದು ಇಂದಿನ ಲೈಫ್ ಸ್ಟೈಲ್ ವರೆಗೆ ವಿವಿಧ ಸುದ್ದಿಗಳನ್ನು ಸಂಪೂರ್ಣವಾಗಿ ಡಿಜಿಟಲ್ ಚಾನೆಲ್‌ನಂತೆ YouTube ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
ZEE ಕನ್ನಡ ನ್ಯೂಸ್ ಡಿಜಿಟಲ್ ಟಿವಿ:
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.