Zee News AI Survey: ನವದೆಹಲಿ: ಲೋಕಸಭಾ ಚುನಾವಣೆಯ ಏಳು ಹಂತಗಳ ಮತದಾನ ಮುಕ್ತಾಯಗೊಂಡ ನಂತರ ಜೂನ್ 4 ರಂದು ಚುನಾವಣೆಯ ಫಲಿತಾಂಶ ಯಾವ ರೀತಿ ಬರಬಹುದು ಎನ್ನುವುದರ ಕುರಿತಾಗಿ ಎಲ್ಲರಿಗೂ ಕುತೂಹಲ ಇತ್ತು, ಇಂತಹ ಸಂದರ್ಭದಲ್ಲಿ ಇಂದು ಪ್ರಕಟವಾಗಿರುವ ಫಲಿತಾಂಶದಲ್ಲಿ ಜೀ ನ್ಯೂಸ್ ನ AI ಸಮೀಕ್ಷೆಯನ್ನು ಹೊರತುಪಡಿಸಿ ಬಹುತೇಕ ಉಳಿದೆಲ್ಲಾ ಸಮೀಕ್ಷೆಗಳು ಸುಳ್ಳಾಗಿವೆ.ಈಗ ಜೀ ನ್ಯೂಸ್ ನ AI ಚುನಾವಣೋತ್ತರ ಸಮೀಕ್ಷೆಯು ಲೋಕಸಭಾ ಚುನಾವಣೆಯಲ್ಲಿ ಜನರ ನಾಡಿ ಮಿಡಿತವನ್ನು ಕಂಡುಕೊಳ್ಳುವುದರ ಮೂಲಕ ನಿಖರತೆಗೆ ಹತ್ತಿರದ ಫಲಿತಾಂಶದ ಭವಿಷ್ಯ ನುಡಿದಿದ್ದರಿಂದಾಗಿ ಜನರ ವಿಶ್ವಾಸಾರ್ಹತೆಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.


COMMERCIAL BREAK
SCROLL TO CONTINUE READING

ಇದೆ ಮೊದಲ ಬಾರಿಗೆ ಟಿವಿ ಮಾಧ್ಯಮದ ಇತಿಹಾಸವೊಂದರಲ್ಲಿ ಜೀ ನ್ಯೂಸ್ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದಷ್ಟೇ ಅಲ್ಲದೆ ಈ ಸಮೀಕ್ಷೆಯು ಇಂದಿನ ಫಲಿತಾಂಶಕ್ಕೆ ಹತ್ತಿರ ಇರುವುದಕ್ಕೆ ನೆಟ್ಟಿಗರು ಜೀ ನ್ಯೂಸ್ ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶ್ಲಾಘಿಸುತ್ತಿದ್ದಾರೆ.


ಚುನಾವಣೋತ್ತರ ಸಮೀಕ್ಷೆಯ ಘೋಷಣೆ ದಿನದಂದು ಜೀ ನ್ಯೂಸ್ AI ಎನ್‌ಡಿಎ ಒಕ್ಕೂಟವು 305-315 ಸ್ಥಾನಗಳನ್ನು ಮತ್ತು ಇಂಡಿಯಾ ಒಕ್ಕೂಟವು 180-195 ಸ್ಥಾನಗಳನ್ನು ಪಡೆಯಲಿದೆ ಇದರ ಜೊತೆಗೆ 45 ಸ್ಥಾನಗಳಲ್ಲಿ ಇತರ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂದು ಏಳು ಹಂತದ ಮತದಾನ ಮುಗಿದ ನಂತರ ಸಮೀಕ್ಷೆಯಲ್ಲಿ ಹೇಳಿತ್ತು. ಈ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶವನ್ನು ಜೀ ನ್ಯೂಸ್ ನ AI ಆಂಕರ್ Zeenia ನಿಷ್ಪಕ್ಷವಾಗಿ ವಿಶ್ಲೇಷಣೆ ಮಾಡುವುದರ ಜೊತೆಗೆ ನಿಖರವಾಗಿ ಹೇಳಿದ್ದರು. ಈಗ ಅಧಿಕೃತವಾದ ಫಲಿತಾಂಶ ಪ್ರಕಟವಾಗಿರುವ ಬೆನ್ನಲ್ಲೇ Zeenia ಅವರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ಸುರಿಮಳೆಗಳೇ ಬಂದಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.