ನವದೆಹಲಿ: 2020 ರ ದೆಹಲಿ ವಿಧಾನಸಭಾ ಚುನಾವಣೆ ಮತದಾನ ಕೊನೆಗೊಂಡಿದ್ದು, ಈಗ ಬಹುತೇಕ ಚುನಾವನೋತ್ತರ ಸಮೀಕ್ಷೆಗಳು ಆಡಳಿತ ಪಕ್ಷ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ಮತ್ತೊಮ್ಮೆ ನಿಚ್ಚಳ ಬಹುಮತದಿಂದ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿವೆ.


COMMERCIAL BREAK
SCROLL TO CONTINUE READING

ಕಳೆದ ಬಾರಿ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಆಮ್ ಆದ್ಮಿ ಪಕ್ಷ ಈ ಬಾರಿ ಸ್ವಲ್ಪ ಸಂಖ್ಯೆಯಲ್ಲಿ ವ್ಯತ್ಯಾಸವಾದರೂ ಕೂಡ ನಿಚ್ಚಳ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆ.ಇನ್ನೊಂದೆಡೆ ಈ ಬಾರಿ ಶಾಹೀನ್ ಬಾಗ್ ನ್ನೇ ಮುಖ್ಯ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿದ್ದ ಬಿಜೆಪಿಗೆ ಸ್ವಲ್ಪ ಸ್ಥಾನಗಳು ಹೆಚ್ಚಿಗೆ ಬಂದರೂ ಕೂಡ, ಈ ಹಿಂದಿನ ತಮ್ಮ ಅಭಿವೃದ್ದಿ ಕಾರ್ಯಗಳೇ ತಮಗೆ ಶ್ರೀರಕ್ಷೆ ಎಂದು ನಂಬಿದ್ದ ಆಮ್ ಆದ್ಮಿ ಪಕ್ಷವನ್ನು ಮತದಾರ ಮತ್ತೊಮ್ಮೆ ಕೈ ಹಿಡಿಯಲಿದ್ದಾನೆ ಎಂದು ಭವಿಷ್ಯ ನುಡಿದಿವೆ.


ದೆಹಲಿ ವಿಧಾನಸಭಾ ಚುನಾವಣೆ 2020 ಚುನಾವಣೋತ್ತರ ಸಮೀಕ್ಷೆ - ನ್ಯೂಸ್ಎಕ್ಸ್ - ನೇತಾ
ಎಪಿಪಿ - 53-57
ಬಿಜೆಪಿ - + 11-17
ಕಾಂಗ್ರೆಸ್ - + 0- 2
ಇತರರು - 0


ದೆಹಲಿ ವಿಧಾನಸಭಾ ಚುನಾವಣೆ 2020 ಚುನಾವಣೋತ್ತರ ಸಮೀಕ್ಷೆ: ರಿಪಬ್ಲಿಕ್ -ಜಾನ್ ಕಿ ಬಾತ್


ಎಎಪಿ - 48-61
ಬಿಜೆಪಿ - 9-21
ಕಾಂಗ್ರೆಸ್ - 0- 2
ಇತರರು - 0


ಟೈಮ್ಸ್ ನೌ ಐಪಿಎಸ್ಒಎಸ್ ಚುನಾವಣೋತ್ತರ ಸಮೀಕ್ಷೆ


ಎಎಪಿ - 44
ಬಿಜೆಪಿ - 26
ಕಾಂಗ್ರೆಸ್ - 0


ನ್ಯೂಸ್ಎಕ್ಸ್-ಪೋಲ್ಸ್ಟ್ರಾಟ್


ಎಎಪಿ-50-56
ಬಿಜೆಪಿ-10-14
ಕಾಂಗ್ರೆಸ್- 0 0
ಇತರರು - 0