ನವದೆಹಲಿ: ಜಗತ್ತಿನಾದ್ಯಂತ ಲಕ್ಷಾಂತರ ವೀಕ್ಷಕರ ಜೀವನವನ್ನು ಮುಟ್ಟುವ ದೇಶದ ಅತಿದೊಡ್ಡ ಸುದ್ದಿ ಜಾಲವಾದ ಜೀ ನ್ಯೂಸ್ ನವೆಂಬರ್ 1 ರಂದು ರಾಷ್ಟ್ರ ರಾಜಧಾನಿಯಲ್ಲಿ #IndiaKaDNA ಕಾನ್ಕ್ಲೇವ್ ಅನ್ನು ಆಯೋಜಿಸಿದೆ.


COMMERCIAL BREAK
SCROLL TO CONTINUE READING

ಜೀ ನ್ಯೂಸ್ ಕಾನ್ಕ್ಲೇವ್ ರಾಷ್ಟ್ರೀಯತೆ, ಕಾಶ್ಮೀರದಲ್ಲಿ ಹೊಸ ಯುಗದ ಆರಂಭ, ನಿರುದ್ಯೋಗ ಮತ್ತು ದೆಹಲಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಂತಹ ವಿಷಯಗಳ ಬಗ್ಗೆ ಗಮನ ಹರಿಸಲಿದೆ.


ಇಂಡಿಯಾ ಕಾ ಡಿಎನ್‌ಎ ಸಮಾವೇಶವನ್ನು ಜೀ ನ್ಯೂಸ್ ಎಡಿಟರ್-ಇನ್-ಚೀಫ್ ಸುಧೀರ್ ಚೌಧರಿ ಮತ್ತು ಖ್ಯಾತ ನಿರೂಪಕರು ನಡೆಸಿಕೊಡಲಿದ್ದಾರೆ. ಈವೆಂಟ್ ಎಲ್ಲಾ ಮುಖ್ಯವಾಹಿನಿಯ ಜೀ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ.


#IndiaKaDNA ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಚಾರಗೊಳ್ಳುತ್ತಿರುವ ಈ ಕಾರ್ಯಕ್ರಮವು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ಜೀ ನ್ಯೂಸ್ ಕಾನ್ಕ್ಲೇವ್‌ನಲ್ಲಿ ದೇಶದಲ್ಲಿ ಪ್ರಮುಖವರಿ ಚರ್ಚೆ ಆಗುತ್ತಿರುವ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. 


ಜೀ ನ್ಯೂಸ್ ಕಾನ್ಕ್ಲೇವ್‌ನಲ್ಲಿ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ರವಿಶಂಕರ್ ಪ್ರಸಾದ್, ರಮೇಶ್ ಪೋಖರಿಯಲ್ 'ನಿಶಾಂಕ್', ಡಾ.ಮಹೇಂದ್ರ ನಾಥ್ ಪಾಂಡೆ, ಜಿತೇಂದ್ರ ಸಿಂಗ್, ವಿಕೆ ಸಿಂಗ್, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಮತ್ತು ಹರಿಯಾಣ ಕಾಂಗ್ರೆಸ್ ಮುಖಂಡ ದೀಪೇಂದ್ರ ಹೂಡಾ ಭಾಗಿಯಾಗಲಿದ್ದಾರೆ.


ಜೀ ನ್ಯೂಸ್ ಈ ವರ್ಷದ ಜೂನ್‌ನಲ್ಲಿ ಇಂಡಿಯಾ ಕಾ ಡಿಎನ್‌ಎ 2019 ಕಾನ್ಕ್ಲೇವ್ ಅನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಭಾರತೀಯ ರಾಜಕೀಯ ವರ್ಣಪಟಲ ಮತ್ತು ವ್ಯವಹಾರದ ಕೆಲವು ಉನ್ನತ ವ್ಯಕ್ತಿಗಳು ಒಗ್ಗೂಡಿ ದೇಶ ಮತ್ತು ದೇಶದ ಜನತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದರು.


ನವದೆಹಲಿಯ ಹೋಟೆಲ್ ತಾಜ್ ಪ್ಯಾಲೇಸ್‌ನಲ್ಲಿ ನಡೆದ ಸಮಾವೇಶದಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಬೆಳವಣಿಗೆಗಳಿಂದ ಹಿಡಿದು ಆರ್ಥಿಕತೆಯ ಸ್ಥಿತಿ ಮತ್ತು 2019 ರ ಲೋಕಸಭಾ ಚುನಾವಣೆ ಸೇರಿದಂತೆ ವ್ಯಾಪಕವಾದ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.


2017 ರಲ್ಲಿ ಜೀ ನ್ಯೂಸ್ 'ಗೇಮ್ ಆಫ್ ಗುಜರಾತ್' ಎಂಬ ರಾಜಕೀಯ ಸಮಾವೇಶವನ್ನು ಆಯೋಜಿಸಿತ್ತು. ಇದರಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಗುಜರಾತ್ ಸಿಎಂ ವಿಜಯ್ ರೂಪಾನಿ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಕಾಂಗ್ರೆಸ್ ಮುಖಂಡರಾದ ರಂದೀಪ್ ಸಿಂಗ್ ಸುರ್ಜೇವಾಲಾ ಮತ್ತು ಸಂಜಯ್ ನಿರುಪಮ್ ಸೇರಿದಂತೆ ಕನಿಷ್ಠ 50 ರಾಜಕೀಯ ಪ್ರಮುಖರು ಭಾಗವಹಿಸಿದ್ದರು. ವ್ಯಾಪಕ ಶ್ರೇಣಿಯ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದರು.