Hyderabad: ಹೈದರಾಬಾದ್‌ನಲ್ಲಿ ಇಂಧನ ಕೊರತೆಯ ಕಾರಣ ಝೊಮಾಟೋ ಡೆಲಿವರಿ ಏಜೆಂಟ್ ಒಬ್ಬ ಕುದುರೆ ಹತ್ತಿ ಫುಡ್‌ ಡೆಲಿವರಿ ಮಾಡಲು ಹೋಗಿದ್ದಾನೆ. ಡೆಲಿವರಿ ಬಾಯ್‌ನ ಕರ್ತವ್ಯ ನಿಷ್ಟೆಯನ್ನ ಸೋಷಿಯ್‌ ಮೀಡಿಯಾದಲ್ಲಿ ಜನ ಕೊಂಡಾಡಿದ್ದಾರೆ.


COMMERCIAL BREAK
SCROLL TO CONTINUE READING

ಹೈದರಾಬಾದ್‌ನಲ್ಲಿ‌ ಟ್ರಕ್‌ ಡ್ರೈವರ್‌ಗಳ ಮುಷ್ಕರದಿಂದಾಗಿ ಪೆಟ್ರೊಲ್‌ ಬಂಕ್‌ಗಳಲ್ಲಿ "ನೋ ಸ್ಟಾಕ್‌ " ಬೋರ್ಡ್‌ಗಳನ್ನ ಹಾಕಲಾಗಿದೆ, ಪೆಟ್ರೋಲ್‌ ಸ್ಟಾಕ್‌ ಇಲ್ಲದೆ ಇಲ್ಲಿನ ಜನ ಪೆಟ್ರೊಲ್‌ ಬಂಕ್‌ಗಳ ಮುಂದೆ ಪೆಟ್ರೋಲ್‌ಗಾಗಿ ಕ್ಯೂ ನಿಲ್ಲುವಂತಾಗಿದೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿಯೂ ಝೊಮಾಟೋ ಡೆಲಿವರಿ ಬಾಯ್‌ ತನ್ನ ಕರ್ತವ್ಯ ನಿಷ್ಟೆಯಿಂದ ಒಂದು ಉಪಾಯ ಹುಡುಕಿಕೊಂಡಿದ್ದಾನೆ. ಫುಡ್‌ ಡೆಲಿವರಿ ಮಾಡಲು ಕುದುರೆ ಹತ್ತಿ ಹೊರಟೇ ಬಿಟ್ಟಿದ್ದಾನೆ.


ಇದನ್ನೂ ಓದಿ: ಮುಂದಿನ 7 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಅಕಾಲಿಕ ವರುಣಾರ್ಭಟಕ್ಕೆ ಜಲಪ್ರಳಯದ ಮುನ್ಸೂಚನೆ!


ಡೆಲವರಿ ಏಜೆಂಟ್‌ನ ಕುದುರೆ ಸವಾರಿ ನೋಡಲು ಜನರು ಮುಗಿಬಿದಿದ್ದರು. ಇದು ಸ್ವಲ್ಪ ಸಮಯದ ಮಟ್ಟಿಗೆ ಟ್ರಾಫಿಕ್‌ ಜಾಮ್‌ಗೂ ಕಾರಣವಾಯಿತು. ಇನ್ನೂ ಈ ವಿಡಿಯೋವನ್ನ @revathitweets ಎಂಬ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದ್ದು ಪೋಸ್ಟ್‌ ಮಾಡಲಾದ ಕೆಲವೇ ನಿಮಿಷಗಳಲ್ಲಿ ಈ ವಿಡಿಯೋ 500ರಕ್ಕೂ ಹೆಚ್ಚು ವೀವ್ಸ್‌ ಪಡೆದಿದೆ. ಇನ್ನೂ ಈ ವಿಡಿಯೋಗೆ ನೆಟ್ಟಿಗರು ಕಮೆಂಟ್‌ಗಳ ಸುರಿಮಳೆಯನ್ನೆ ಹರಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.