Zydus Cadila: ಕರೋನಾ (Codronavirus) ವ್ಯಾಕ್ಸಿನೇಷನ್ (Corona Vaccination) ಸಂಖ್ಯೆ ಪ್ರಸ್ತುತ 100 ಕೋಟಿ ಗಡಿ ದಾಟಿದ ನಂತರ, ಈ ಅಭಿಯಾನದಲ್ಲಿ ಹೊಸ ಉತ್ಸಾಹವನ್ನು ತುಂಬಲು ಝೈಡಸ್ ಕ್ಯಾಡಿಲಾದಿಂದ (Zydus Cadila) ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂಬರುವ ದಿನಗಳಲ್ಲಿ ಕಂಪನಿಯ ನೀಡಲ್‌ಲೆಸ್ ಕರೋನಾ ಲಸಿಕೆ ರೂ. 265 ಕ್ಕೆ ನೀಡುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಅಂತಿಮ ಡೀಲ್ ಬಾಕಿ ಇದೆ 
ಸುದ್ದಿ ಸಂಸ್ಥೆ PTI ಮೂಲಗಳು, ಝೈಡಸ್ ಕ್ಯಾಡಿಲಾ ತನ್ನ ಕೋವಿಡ್ -19 ಲಸಿಕೆಗಾಗಿ ಸರ್ಕಾರದೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದು,  ಪ್ರತಿ ಡೋಸ್‌ಗೆ 265 ರೂ.ಗೆ ಬೆಲೆಯನ್ನು ನೀಡಲು ಒಪ್ಪಿಕೊಂಡಿದೆ ಎನ್ನಲಾಗಿದೆ. ಆದರೂ ಅದರ ಬಗ್ಗೆ ಅಂತಿಮ ಒಪ್ಪಂದ ಬಾಕಿ ಉಳಿದಿದೆ ಎನ್ನಲಾಗಿದೆ. Zydus Cadila ಅವರ ZyCov-D 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ಪ್ರತಿರಕ್ಷಣೆಗಾಗಿ ಭಾರತದ ಔಷಧ ನಿಯಂತ್ರಕದಿಂದ ಅನುಮೋದಿಸಲಾದ ಮೊದಲ ಲಸಿಕೆಯಾಗಿದೆ.


ಇದನ್ನೂ ಓದಿ-Vaccination Fear In Village: ವ್ಯಾಕ್ಸಿನ್ ಭಯದಿಂದ ನದಿಗೆ ಹಾರಿದ ಗ್ರಾಮೀಣ ಜನ, ಲಸಿಕೆ ಹಾಕಿಸಿಕೊಂಡಿದ್ದು ಕೇವಲ 14 ಜನ ಮಾತ್ರ


ಜೆಟ್ ಸೇರಿದಂತೆ ಬೆಲೆ ಎಷ್ಟು?
ಸೂಜಿ ರಹಿತ ಲಸಿಕೆಯನ್ನು ಚುಚ್ಚುಮದ್ದು ನೀಡಲು, ಪ್ರತಿ ಡೋಸ್‌ಗೆ ರೂ 93 ವೆಚ್ಚದಲ್ಲಿ ಒಂದು ಡಿಸ್ಪೋಸೆಬಲ್ ಜೆಟ್ ಆಪ್ಲಿಕೆಟರ್ ಅಗತ್ಯ ಬೀಳಲಿದೆ, ಇದರಿಂದ ಪ್ರತಿ ಡೋಸ್‌ ವ್ಯಾಕ್ಸಿನ್ ವೆಚ್ಚ ರೂ. 358 ತಲುಪಲಿದೆ. ಮೂಲಗಳ ಪ್ರಕಾರ, ಅಹಮದಾಬಾದ್ ಮೂಲದ ಫಾರ್ಮಾ ಕಂಪನಿಯು ಈ ಹಿಂದೆ ತನ್ನ ಮೂರು ಡೋಸ್ ವ್ಯಾಕ್ಸಿನ್ ಬೆಲೆಯನ್ನು 1,900 ರೂ. ನಿಗದಿಪಡಿಸಲು ಪ್ರಸ್ತಾವನೆ ನೀಡಿತ್ತು.


ಇದನ್ನೂ ಓದಿ-Alert! ನಕಲಿ CoWin Appಗಳ ಬಗ್ಗೆ ಎಚ್ಚರ ಎಂದ ಸರ್ಕಾರ, ಈ 5 ಫೈಲ್ಸ್ ಡೌನ್ ಲೋಡ್ ಮಾಡಬೇಡಿ


ಲಸಿಕೆಯ ಬೆಳವಣಿಗೆಯ ಮೇಲೆ ಗಮನ ಕೆಂದ್ರೀಕರಿಸಿರುವ ಮೂಲಗಳು PTIಗೆ ನೀಡಿರುವ ಮಾಹಿತಿ ಪ್ರಕಾರ, "ಕಂಪನಿಯ ಪರವಾಗಿ ಸರ್ಕಾರದೊಂದಿಗೆ ಪುನರಾವರ್ತಿತ ಮಾತುಕತೆಗಳ ನಂತರ, ಪ್ರತಿ ಡೋಸ್ ಬೆಲೆಯನ್ನು ರೂ 358 ಕ್ಕೆ ಇಳಿಸಲಾಗಿದೆ, ಇದು ಬಿಸಾಡಬಹುದಾದ ಜೆಟ್ ಅಪ್ಲಿಕೇಶನ್‌ನ ವೆಚ್ಚ ಸೇರಿದಂತೆ ರೂ 93 ವೆಚ್ಚ ಒಳಗೊಂಡಿದೆ. ಈ ವಾರ ಲಸಿಕೆಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಪ್ರತಿ ಡೋಸ್ ಅನ್ನು 28 ದಿನಗಳ ಅಂತರದಲ್ಲಿ  ಮೂರು ಪ್ರಮಾಣಗಳನ್ನು ಎರಡೂ ಕೈಗಳಿಗೆ ನೀಡುವ ಸಾಧ್ಯತೆ ಇದೆ.


ಇದನ್ನೂ ಓದಿ-Vaccination In India: ನಿಮ್ಮ ನೆಚ್ಚಿನ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕೇ?ಕೊವಿನ್ ನಲ್ಲಿ ಸಿಗಲಿದೆ ನಿಮಗೆ ಆದ್ಯತೆಯ ಆಯ್ಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ