Zydus Cadila Vaccine Price:ಝೈಡಸ್ ಕ್ಯಾಡಿಲಾ ಕೊರೊನಾ ವ್ಯಾಕ್ಸಿನ್ ಬೆಲೆ ನಿರ್ಧಾರ, ಒಂದು ಡೋಸ್ ಬೆಲೆ ಎಷ್ಟು?
Zydus Cadila Vaccine Price: ಝೈಡಸ್ ಕ್ಯಾಡಿಲಾ ಕಂಪನಿಯ ಕೊರೊನಾ ಲಸಿಕೆ ಬೆಲೆಯನ್ನು ನಿಗದಿಪಡಿಸಲಾಗಿದೆ.
Zydus Cadila Vaccine Price: ಝೈಡಸ್ ಕ್ಯಾಡಿಲಾ ಅವರ ಕೊರೊನಾ ಲಸಿಕೆ 'ಝೈಕೋವ್-ಡಿ' ಬೆಲೆಯನ್ನು ನಿಗದಿಪಡಿಸಲಾಗಿದೆ. ಒಂದು ಡೋಸ್‌ನ ಬೆಲೆ 265 ರೂ.ಕ್ಕೆ ನಿಗದಿಪಡಿಸಲಾಗಿದೆ (Zycov-D Final Price). ಅಷ್ಟೇ ಅಲ್ಲ ಈಗಾಗಲೇ ಭಾರತ ಸರ್ಕಾರವು (Government Of India) ಒಂದು ಕೋಟಿ ಡೋಸ್‌ಗಳನ್ನು ಆದೇಶಿಸಿದೆ. ಈ ಕುರಿತು ತನ್ನ ನಿಯಂತ್ರಕ ಫೈಲಿಂಗ್‌ನಲ್ಲಿ ಹೇಳಿಕೊಂಡಿರುವ ಫಾರ್ಮಾ ಕಂಪನಿ, "ಜೈಡಸ್ ಕ್ಯಾಡಿಲಾ ಭಾರತ ಸರ್ಕಾರದಿಂದ 10 ಮಿಲಿಯನ್ ಡೋಸ್ ಝೈಕೋವ್-ಡಿ, ವಿಶ್ವದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಲಸಿಕೆಯನ್ನು (World's First Plasmide DNA Vaccine) ಪೂರೈಸಲು ಆದೇಶವನ್ನು ಸ್ವೀಕರಿಸಿದೆ. ಪ್ರತಿ ಡೋಸ್‌ಗೆ 265 ಮತ್ತು ನೀಡಲ್ ಲೆಸ್ ಅಪ್ಲಿಕೆಟರ್ (Needle Less Applicator) ಗೆ ಜಿಎಸ್‌ಟಿ ಹೊರತುಪಡಿಸಿ ಪ್ರತಿ ಡೋಸ್‌ಗೆ 93 ರೂ. ನಿಗದಿಪಡಿಸಲಾಗಿದೆ" ಎಂದು
ಕೇಂದ್ರ ಸರಕಾರದೊಂದಿಗೆ ಸಮಾಲೋಚನೆ ನಡೆಸಿ ಬೆಲೆ ನಿಗದಿ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಲಸಿಕೆಯನ್ನು ಸಾಂಪ್ರದಾಯಿಕ ಸಿರಿಂಜ್ ಬದಲಿಗೆ ನೀಡಲ್ ಲೆಸ್ ಅಪ್ಲಿಕೆಟರ್ ಮೂಲಕ ನೀಡಲಾಗುತ್ತದೆ. ಈ ಅಪ್ಲಿಕೆಟರ್ ಗೆ "ಫಾರ್ಮಾಜೆಟ್" (Farmajet) ಎಂದು ಹೆಸರಿಸಲಾಗಿದೆ.
ಈ ಕುರಿತು ಮಾತನಾಡಿರುವ Zydus Cadila ಮ್ಯಾನೇಜಿಂಗ್ ಡೈರೆಕ್ಟರ್ ಶರ್ವಿಲ್ ಪಟೇಲ್ , "Zycov-D ಯೊಂದಿಗೆ ಸರ್ಕಾರದ ಲಸಿಕೆ ಕಾರ್ಯಕ್ರಮವನ್ನು ಬೆಂಬಲಿಸಲು ನಾವು ಸಂತೋಷಪಡುತ್ತೇವೆ. ಸೂಜಿ-ಮುಕ್ತ ಲಸಿಕೆಯು ಇನ್ನೂ ಹೆಚ್ಚಿನ ಜನರಿಗೆ ಲಸಿಕೆ ಹಾಕಲು ಮತ್ತು COVID-19 ನಿಂದ ರಕ್ಷಿಸಲು ಅನುವು ಮಾಡಿಕೊಡುತ್ತದೆ ಎಂದು ನಾವು ಭರವಸೆ ಹೊಂದಿದ್ದೇವೆ, ಅದರಲ್ಲೂ ವಿಶೇಷವಾಗಿ 12 ಮತ್ತು 18 ವರ್ಷ ವಯಸ್ಸಿನ ಮಕ್ಕಳು ಮತ್ತು ಯುವಕರು ಎಂದು ಅವರು ಹೇಳಿದ್ದಾರೆ.
28 ದಿನಗಳ ಮಧ್ಯಂತರದಲ್ಲಿ 'ಝೈಕೋವ್-ಡಿ' ಯ ಮೂರು ಡೋಸ್‌ಗಳನ್ನು ನೀಡಬೇಕು. ಅಭಿವೃದ್ಧಿ ಹೊಂದಿದ ವಿಶ್ವದ ಮೊದಲ ಡಿಎನ್‌ಎ ಆಧಾರಿತ ಕೋವಿಡ್ -19 ಲಸಿಕೆಯನ್ನು ದೇಶದ ಲಸಿಕೆ ಕಾರ್ಯಕ್ರಮದಲ್ಲಿ ಸೇರಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಆರಂಭಿಕ ಹಂತಗಳನ್ನು ನಡೆಸಲು ಹಸಿರು ನಿಶಾನೆ ತೋರಿಸಿದೆ ಎಂದು ಮೂಲಗಳು ಭಾನುವಾರ ತಿಳಿಸಿವೆ.
ಇದನ್ನೂ ಓದಿ-Corona Vaccine: ಮೂರನೇ ತರಂಗಕ್ಕೆ ಮುಂಚಿತವಾಗಿ ಭಾರತಕ್ಕೆ ಮತ್ತೊಂದು ಲಸಿಕೆ
Zycov-D ಆಗಸ್ಟ್ 20 ರಂದು ಔಷಧ ನಿಯಂತ್ರಕದಿಂದ ತುರ್ತು ಬಳಕೆಗಾಗಿ ಅನುಮೋದನೆಯನ್ನು ಪಡೆದುಕೊಂಡಿದೆ. Zycov-D 12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ಪ್ರತಿರಕ್ಷಣೆಗಾಗಿ ಭಾರತದ ಔಷಧ ನಿಯಂತ್ರಕದಿಂದ ಅನುಮೋದಿಸಲಾದ ಮೊದಲ ಲಸಿಕೆಯಾಗಿದೆ. ಆರಂಭದಲ್ಲಿ, ವಯಸ್ಕರಲ್ಲಿ ಅದನ್ನು ನೀಡಲು ಆದ್ಯತೆ ನೀಡಲಾಗುವುದು ಎಂದೂ ಕೂಡ ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ-ಸೆಪ್ಟೆಂಬರ್ ನಿಂದ ಆರಂಭವಾಗಲಿದೆ ಮಕ್ಕಳ Covid Vaccination, ಏಮ್ಸ್ ಮುಖ್ಯಸ್ಥರ ಮಹತ್ವದ ಮಾಹಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ