ನವದೆಹಲಿ: ಆರ್ಥಿಕ ಕುಸಿತದ ಮಧ್ಯದಲ್ಲಿ ಮೋದಿ ನೇತೃತ್ವದ ಸರ್ಕಾರಕ್ಕೆ ನೂರು ದಿನ ತುಂಬಿದ ಆಚರಣೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆಗೆ ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ದಾರೆ 


COMMERCIAL BREAK
SCROLL TO CONTINUE READING

ಈಗ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ 'ಬಿಜೆಪಿ ಸರ್ಕಾರ ಅಧಿಕಾರದಲ್ಲಿ 100 ದಿನಗಳನ್ನು ಆಚರಿಸಲಿದೆ. ಆದರೆ ವಾಹನ ವಲಯ, ಸಾರಿಗೆ ಕ್ಷೇತ್ರ, ಗಣಿಗಾರಿಕೆ ವಲಯವು ಇದನ್ನು ಅವರ ಹಾಳಾದ ಸಂಭ್ರಮವಾಗಿ ಕಾಣುತ್ತದೆ" ಎಂದು  ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಪ್ರತಿಯೊಂದು ವಲಯದಲ್ಲಿಯೂ ಉದ್ಯೋಗ ನಷ್ಟದ ಸುದ್ದಿ ಕೇಳಿ ಬರುತ್ತಿದೆ ಎಂದು ಅವರು ಹೇಳಿದರು.



ಇತ್ತೀಚಿಗೆ ಇದೇ ಮೊದಲ ಬಾರಿಗೆ ಜಿಡಿಪಿ ಶೇಕಡಾ 5 ಕ್ಕೆ ಕುಸಿದ ನಂತರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೇಂದ್ರ ಸರ್ಕಾರದ ಜಿಎಸ್ಟಿ ಹಾಗೂ ನೋಟು ನಿಷೇಧದಂತಹ ಕ್ರಮದಿಂದಾಗಿ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ. ಆದ್ದರಿಂದ ಸರ್ಕಾರ ದ್ವೇಷದ ರಾಜಕೀಯವನ್ನು ಬಿಟ್ಟು ಚಿಂತಕರ ಸಲಹೆಯನ್ನು ಪಡೆಯುವ ಮೂಲಕ ಆರ್ಥಿಕತೆಯನ್ನು ಸರಿ ದಾರಿಗೆ ತರಲು ಮುಂದಾಗ ಬೇಕು ಎಂದು ಅವರು ತಿಳಿಸಿದರು.


ಕೇಂದ್ರ ಸರ್ಕಾರ ಇತ್ತೀಚಿಗೆ ಆರ್ಥಿಕ ಕುಸಿತವನ್ನು ಸರಿದೂಗಿಸಲು ಬ್ಯಾಂಕ್ ವೀಲಿನದಂತಹ ಕ್ರಮಗಳಿಗೆ ಮುಂದಾಗಿತ್ತು.