Digvijaya Singh : ಕಾಶ್ಮೀರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ದಿಗ್ವಿಜಯ್ ಸಿಂಗ್!
ಆರ್ಟಿಕಲ್ 370 ರದ್ದು ಹಾಗೂ ಜಮ್ಮು-ಕಾಶ್ಮೀರದ ಬಗ್ಗೆ ಕ್ಲಬ್ ಹೌಸ್ ನಲ್ಲಿ ನೀಡಿರುವ ಹೇಳಿಕೆ
ನವದೆಹಲಿ : ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆರ್ಟಿಕಲ್ 370 ರದ್ದು ಹಾಗೂ ಜಮ್ಮು-ಕಾಶ್ಮೀರದ ಬಗ್ಗೆ ಕ್ಲಬ್ ಹೌಸ್ ನಲ್ಲಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಕ್ಲಬ್ ಹೌಸ್ ಎಂಬ ಸಾಮಾಜಿಕ ಜಾಲತಾಣದಲ್ಲಿ ದಿಗ್ವಿಜಯ್ ಸಿಂಗ್(Digvijaya Singh), ಆರ್ಟಿಕಲ್ 370 ರದ್ದುಗೊಳಿಸಿರುವುದು ಹಾಗೂ ಜಮ್ಮು-ಕಾಶ್ಮೀರದ ರಾಜ್ಯದ ಸ್ಥಾನವನ್ನು ಕಸಿದು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವುದು ಅತ್ಯಂತ ಬೇಸರದ ನಿರ್ಧಾರ ಎಂದು ಹೇಳಿದ್ದಷ್ಟೇ ಅಲ್ಲದೇ ಮೋದಿ ಸರ್ಕಾರದ ಅವಧಿ ಮುಗಿದು ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ವಿಷಯವಾಗಿ ಮರುಪರಿಶೀಲನೆ ನಡೆಸುವುದಾಗಿ ಹೇಳಿರುವುದು ಬಿಜೆಪಿ, ರಾಷ್ಟ್ರೀಯತೆ ಪ್ರತಿಪಾದಿಸುವವರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ : ಕಪ್ಪು ಶೀಲಿಂದ್ರ ಔಷಧಿ ಮೇಲೆ ಯಾವುದೇ ತೆರಿಗೆ ಇಲ್ಲ ಎಂದ ಕೇಂದ್ರ ಸರ್ಕಾರ
ದಿಗ್ವಿಜಯ್ ಸಿಂಗ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ(BJP), ಈ ಹೇಳಿಕೆಯ ಮೂಲಕ ದಿಗ್ವಿಜಯ್ ಸಿಂಗ್ ಭಾರತದ ವಿರುದ್ಧ ಮಾತನಾಡುತ್ತಾರೆ ಹಾಗೂ ಪಾಕಿಸ್ತಾನದ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದೆ.
ಖಾಸಗಿ ಆಸ್ಪತ್ರೆಗಳಿಗೆ ಸಿಕ್ಕಿದ್ದು 1.29 ಕೋಟಿ ಲಸಿಕೆ, ಬಳಸಿದ್ದು 22 ಲಕ್ಷ ಮಾತ್ರ ..!
ಕ್ಲಬ್ ಹೌಸ್(Clubhouse) ನಲ್ಲಿ ದಿಗ್ವಿಜಯ ಸಿಂಗ್ ಯಾರೊಂದಿಗೆ ಚರ್ಚಿಸುತ್ತಿದ್ದರೋ ಅವರು ಪಾಕಿಸ್ತಾನಿ ಮೂಲದ ಪತ್ರಕರ್ತ ಎಂದು ಬಿಜೆಪಿ ಆರೋಪಿಸಿದ್ದು, ಸಿಂಗ್ ಅವರ ಹೇಳಿಕೆ ಬಗ್ಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆಗ್ರಹಿಸಿದ್ದಾರೆ.
ಇದನ್ನೂ ಓದಿ : PM ಕಿಸಾನ್ ಯೋಜನೆ : 2 ಕಂತುಗಳ ಲಾಭ ಪಡೆಯಲು ತಪ್ಪದೆ ಈ ಕೆಲಸ ಮಾಡಿ
ಆರ್ಟಿಕಲ್ 370(Article 370) ರದ್ದತಿ ಹಾಗೂ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವುದು ಅತ್ಯಂತ ಬೇಸರದ ಸಂಗತಿ ಕಾಂಗ್ರೆಸ್ ಪಕ್ಷ ಈ ಬಗ್ಗೆ ಖಂಡಿತವಾಗಿಯೂ ಮರುಪರಿಶೀಲನೆ ನಡೆಸಲಿದೆ ಎಂದು ದಿಗ್ವಿಜಯ್ ಸಿಂಗ್ ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ : E-Vehicles: ದ್ವಿಚಕ್ರ ವಾಹನ ಖರೀದಿದಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ Modi Government
ಬಿಜೆಪಿ(BJP) ತಮ್ಮ ವಿರುದ್ಧ ಆರೋಪ ಮಾಡಿರುವುದಕ್ಕೆ ಸಿಂಗ್, ಈ ಅನಕ್ಷರಸ್ಥ ಜನರಿಗೆ ಬಹುಶಃ ಪರಿಗಣಿಸುತ್ತೇವೆ ಹಾಗೂ ಖಂಡಿತವಾಗಿಯೂ ಮಾಡುತ್ತೇವೆ ಎಂಬುದಕ್ಕೆ ವ್ಯತ್ಯಾಸ ಗೊತ್ತಿಲ್ಲ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.