ಪ್ರತಿ ಲೀಟರ್ ಪೆಟ್ರೋಲ್‌ಗೆ ₹ 10, ಡೀಸೆಲ್ಗೆ ₹ 13 ಹೆಚ್ಚಳ: ನಿಮ್ಮ ಜೇಬಿನ ಮೇಲೆ ಎಷ್ಟು ಪರಿಣಾಮ ಬೀರಲಿದೆ?
ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (Special Additional excise duty) ಮತ್ತು ರಸ್ತೆ ಸೆಸ್ ಅನ್ನು ಹೆಚ್ಚಿಸಿದೆ.
ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (Special Additional excise duty) ಮತ್ತು ರಸ್ತೆ ಸೆಸ್ ಅನ್ನು ಹೆಚ್ಚಿಸಿದೆ. ಅಬಕಾರಿ ಸುಂಕ (Excise Duty) ವನ್ನು ಪ್ರತಿ ಲೀಟರ್ ಡೀಸೆಲ್‌ಗೆ 5 ರೂಪಾಯಿ ಮತ್ತು ಪೆಟ್ರೋಲ್‌ಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಅದೇ ಸಮಯದಲ್ಲಿ ಎರಡೂ ಇಂಧನಗಳ ಮೇಲೆ ರಸ್ತೆ ಸೆಸ್ ಅನ್ನು 8-8 ರೂ.ಗಳಿಗೆ ಹೆಚ್ಚಿಸಲಾಗಿದೆ. ಹೊಸ ಆದೇಶದ ನಂತರ ಜನ ಪ್ರತಿ ಲೀಟರ್ ಪೆಟ್ರೋಲ್‌ಗೆ ₹ 10 ಮತ್ತು ಪ್ರತಿ ಲೀಟರ್ ಡೀಸೆಲ್‌ಗೆ ₹ 13 ಹೆಚ್ಚಳವಾಗಿದೆ.
ಜನಸಾಮಾನ್ಯರ ಮೇಲೆ ಯಾವುದೇ ಪರಿಣಾಮವಿಲ್ಲ:
ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್‌ಗಳ ಮಧ್ಯೆ ಅಬಕಾರಿ ಸುಂಕ ಮತ್ತು ಸೆಸ್‌ನಲ್ಲಿ ಹೆಚ್ಚಳ ಕಂಡುಬಂದಿದೆ. ಆದಾಗ್ಯೂ ಈ ಬದಲಾವಣೆಯು ಸಾಮಾನ್ಯ ಜನರ ಜೇಬಿನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಇಂಧನ ಪಂಪ್‌ನಲ್ಲಿ ಚಿಲ್ಲರೆ ಬೆಲೆಗಳು ಒಂದೇ ಆಗಿರುತ್ತವೆ. ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚಿದ ಸುಂಕವನ್ನು ಭರಿಸಲಿವೆ. ಮೇ 6ರಿಂದ ಹೊಸ ದರ ಪೆಟ್ರೋಲ್ ಮತ್ತು ಡೀಸೆಲ್ ಜಾರಿಗೆ ಬಂದಿದೆ. ಈ ಹಿಂದೆ ದೆಹಲಿ ಮತ್ತು ಪಂಜಾಬ್ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಹೆಚ್ಚಿಸಿವೆ. ಇತರ ರಾಜ್ಯಗಳು ಆದಾಯವನ್ನು ಹೆಚ್ಚಿಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಸಹ ಹೆಚ್ಚಿಸಬಹುದು.
ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 71.26 ರೂ:
ದೆಹಲಿಯಲ್ಲಿ ಪೆಟ್ರೋಲ್ 1.67 ರೂ. ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 7.10 ರೂ. ಈಗ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 69.59 ರೂ.ನಿಂದ 71.26 ರೂ.ಗೆ ಏರಿದೆ. ಅದೇ ರೀತಿ ಡೀಸೆಲ್ ಬೆಲೆ ಲೀಟರ್‌ಗೆ 62.29 ರೂ.ಗಳಿಂದ 69.39 ರೂ.ಗೆ ಏರಿದೆ.
ವ್ಯಾಟ್ ಎಷ್ಟು ಇರುತ್ತದೆ?
ಇಂಡಿಯನ್ ಆಯಿಲ್ನ ವೆಬ್‌ಸೈಟ್ ಪ್ರಕಾರ, ಈಗ ದೆಹಲಿಯಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಪ್ರತಿ ಲೀಟರ್‌ಗೆ 16.44 ರೂ.ಗೆ ಏರಿದೆ. ಅದೇ ಸಮಯದಲ್ಲಿ ಡೀಸೆಲ್ ಮೇಲಿನ ವ್ಯಾಟ್ ಅನ್ನು ಲೀಟರ್‌ಗೆ 16.26 ರೂಗಳಿಗೆ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಈಗ ಪೆಟ್ರೋಲ್ ಮೇಲೆ 27% ಬದಲು 30% ಮತ್ತು ಡೀಸೆಲ್ಗೆ 16.75% ವ್ಯಾಟ್ ವಿಧಿಸಲಾಗುತ್ತಿದೆ.
50 ದಿನಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ:
ಕರೋನಾ ವೈರಸ್‌ನಿಂದಾಗಿ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಸಹ ಲಾಕ್‌ಡೌನ್ ಮಧ್ಯೆ ಲಾಕ್ ಮಾಡಲಾಗಿದೆ. ವಿಶ್ವಾದ್ಯಂತ ಕಚ್ಚಾ ಬೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಮೇಲೆ ಇದರ ಪರಿಣಾಮವು ಗೋಚರಿಸುವುದಿಲ್ಲ. ದೇಶದಲ್ಲಿ ದೀರ್ಘಕಾಲದವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾಗಿಲ್ಲ. ರಾಜಧಾನಿ ದೆಹಲಿಯಲ್ಲೂ 50 ದಿನಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನವೂ ಬದಲಾಗುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ವಿದೇಶಿ ವಿನಿಮಯ ದರ ಮತ್ತು ಕಚ್ಚಾ ಬೆಲೆಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.