ಶಿಕಾರಿಪುರ: ತೀವ್ರ ಕುತೂಹಲ ಕೆರಳಿಸಿದ್ದ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರ ಗೆಲುವು ಸಾಧಿಸಿದ್ದಾರೆ. ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ರೂ ಅದು ಗೆಲುವೇ. ಆದ್ರೆ ವಿಜಯೇಂದ್ರ ಪಾಲಿಗೆ ಈ ಗೆಲುವು ಎಂಬುದು ಹತ್ತನೇ  ಸುತ್ತಿನ ಮತ ಎಣಿಕೆಯವರೆಗೂ ಒಂದು ರೀತಿಯಲ್ಲಿ ಗಜಪ್ರಸವದಂತೆ ಕಂಡು ಬಂತು, ಬಿಜೆಪಿಯ ಸ್ಟಾರ್ ಪ್ರಚಾರಕ, ಬಿಜೆಪಿ ಚುನಾವಣಾ ಚಾಣಕ್ಯ ಎಂದೇ ಬಿಂಬಿತವಾಗಿರುವ ಬಿ.ವೈ ವಿಜಯೇಂದ್ರಗೆ  ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ ಒಡ್ಡಿದ ತೀವ್ರ ಪೈಪೋಟಿಯನ್ನು ಗಮನಿಸಿದಾಗ ವಿಜಯೇಂದ್ರ ರವರು ಕ್ಷೇತ್ರದಲ್ಲಿ ತಮಗಿರುವ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸೂಚಿಸಿದಂತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Breaking: ಕರ್ನಾಟಕದ ಮುಂದಿನ ಸಿಎಂ ಕನ್ಫರ್ಮ್? ಸಿದ್ದರಾಮಯ್ಯ ಕೈಗೆ ಸಿಗಲಿದೆ ‘ಕರುನಾಡಿನ ಕಮಾಂಡ್’!


ಬಿ.ವೈ ವಿಜಯೇಂದ್ರ ಗೆಲುವಿಗೆ ಅಂತಿಮ ಸ್ಪರ್ಷ ನೀಡಿದ್ದು ಹೆಚ್.ಟಿ ಬಳಿಗಾರ್ ವೈಯಕ್ತಿಕ ವರ್ಚಸ್ಸಿನ ಮತಗಳು ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ. ಜೆಡಿಎಸ್ ಪಕ್ಷದಿಂದ ಬಿಜೆಪಿ ಸೇರಿದ ಬಳಿಗಾರ್ ವಿಜಯೇಂದ್ರಗೆ  ಸಾರಥಿಯಾಗಿಯೇ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಬಳಿಗಾರ್ ಶಿಕಾರಿಪುರ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದಾಗ ಹದಿನಾರು ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದರು. ಇದು ಜೆಡಿಎಸ್  ನೆಲೆ ಇಲ್ಲದ  ಶಿಕಾರಿಪುರ ಕ್ಷೇತ್ರದಲ್ಲಿ ಉತ್ತಮ ಮತಬೇಟೆ ಎಂದೇ ಭಾವಿಸಲಾಗಿತ್ತು. ಇವು ಬಳಿಗಾರ್ ಅಭಿಮಾನದ ವೈಯಕ್ತಿಕ ಮತಗಳೇ ಆಗಿದ್ದವು. 


ಪ್ರಸ್ತುತ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಬಿ.ವೈ ವಿಜಯೇಂದ್ರ ಸ್ಪರ್ಧಿಸಿದಾಗ, ಎದುರಾಳಿ ಪಕ್ಷೇತರ ಅಭ್ಯರ್ಥಿ ನಾಗರಾಜಗೌಡ ಅನುಕಂಪದ ಮತಬೇಟೆಯಲ್ಲಿ ಸಾಕಷ್ಟು ಮತದಾರರನ್ನು ಸೆಳೆದಿದ್ದರು. ಕ್ಷೇತ್ರದಲ್ಲಿ ಎಲ್ಲಿ ಹೋದರೂ ಅವರ ಚುನಾವಣೆ ಸ್ಪರ್ಧೆಯ ಚಿಹ್ನೆ ಟ್ರಾಕ್ಟರ್ ಓಡುತ್ತಿತ್ತು. ಬಿ.ವೈ ವಿಜಯೇಂದ್ರ ಚುನಾವಣೆಯಲ್ಲಿ ಗೆಲ್ಲಲು ಇನ್ನಿಲ್ಲದ ಕಸರತ್ತುಗಳನ್ನು ಮುಂದುವರೆಸಿದ್ರೂ, ಮತಗಳು ವಿಭಜನೆಯಾಗುವ ಸಾಧ್ಯತೆಗಳು ಹೆಚ್ಚಿತ್ತು. ಆಗ ಟ್ರಬಲ್ ಶೂಟರ್ ಆಗಿ ವಿಜಯೇಂದ್ರ ಬೆನ್ನಿಗೆ ನಿಂತವರು ಬಳಿಗಾರ್. 


ಇದನ್ನೂ ಓದಿ: Karnataka Election Result 2023: ಜಯನಗರದಲ್ಲಿ 3 ಬಾರಿ ಮತಎಣಿಕೆ: ‘ಕೈ’ಯಿಂದ ಗೆಲುವು ಕಿತ್ತ ಕಮಲ! ECಗೆ ಸೌಮ್ಯಾರೆಡ್ಡಿ ದೂರು?


ತಮ್ಮ ವೈಯಕ್ತಿಕ ಮತ ಬ್ಯಾಂಕ್ ಅನ್ನು ವಿಜಯೇಂದ್ರಗೆ ಸಾರಸಗಟಾಗಿ ಡೈವರ್ಟ್ ಮಾಡುವಲ್ಲಿ ಬಳಿಗಾರ್ ಯಶಸ್ವಿಯಾಗಿದ್ದರು. ಎಸ್ಸಿ ಎಸ್ಟಿ, ಓಬಿಸಿ ಮತಗಳು ನಾಗರಾಜ್ ಗೌಡರ ಪರ ವಾಲದಂತೆ ಮಾಡಿದ್ರು. ಇದರಲ್ಲಿ ಬಹುತೇಕ ಮತಗಳು ಬಿ.ವೈ ವಿಜಯೇಂದ್ರಗೆ ಶ್ರೀರಕ್ಷೆಯಾಗಿತ್ತು. ಒಟ್ಟು 19 ಸುತ್ತಿನ ಮತ ಎಣಿಕೆಯಲ್ಲಿ ಬಿ.ವೈ ವಿಜಯೇಂದ್ರ 11008 ಮತಗಳ ಅಂತರದಲ್ಲಿ ಪಕ್ಷೇತರ ಅಭ್ಯರ್ಥಿ ನಾಗರಾಜ ಗೌಡರ ಎದುರು ಗೆಲ್ಲುವಂತೆ ಮಾಡಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.