Karnataka Election 2023: `ಕತ್ತಲಲ್ಲಿ ಬೆಳಕಾಗಿ ಹೊರಹೊಮ್ಮಿದ್ದ ಬಸವಣ್ಣನವರು ಭಾರತ ಮತ್ತು ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವದ ದಾರಿ ತೋರಿಸಿದ್ದಾರೆ`
Rahul Gandhi In Vijaypura And Bagalkot: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಚುನಾವಣಾ ಯಾತ್ರೆಯ ವೇಳೆ ಕರ್ನಾಟಕದ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ರಾಹುಲ್ ಗಾಂಧಿ ಅವರ ಈ ಚುನಾವಣಾ ಯಾತ್ರೆ ಒಂದು ಮಹತ್ವದ ಯಾತ್ರೆ ಎಂದೇ ಬಿಂಬಿಸಲಾಗುತ್ತಿದೆ.
Rahul Gandhi In Karnataka: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರು ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 'ಎಲ್ಲೆಲ್ಲಿ ಅಂಧಕಾರವಿದೆಯೋ, ಎಲ್ಲೋ ಆ ಕತ್ತಲೆಯಲ್ಲಿ ಬೆಳಕು ಕೂಡ ಹೊರಹೊಮ್ಮುತ್ತದೆ' ಎಂದರು. ' ಆ ಕಾಲದಲ್ಲಿ ಸಮಾಜದಲ್ಲಿ ಕತ್ತಲೆ ಆವರಿಸಿದ್ದರಿಂದ ಬಸವಜೀ ಕತ್ತಲಲ್ಲಿ ಬೆಳಕಾಗಿ ಹೊರಹೊಮ್ಮಿದರು. ಬಸವಜೀ ಅವರು ಭಾರತ ಮತ್ತು ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವದ ಮಾರ್ಗವನ್ನು ನೀಡಿದರು ಮತ್ತು ಇದು ಸತ್ಯ. ಅದನ್ನು ಅಳಿಸಲಾಗುವುದಿಲ್ಲ' ಎಂದು ರಾಹುಲ್ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ರಾಹುಲ್ ಯಾವುದೇ ವ್ಯಕ್ತಿ ಹಾಗೆಯೇ ಬೆಳಕಾಗಿ ಹೊರಹೊಮ್ಮಲು ಸಾಧ್ಯವಿಲ್ಲ, ಮೊದಲು ಆತ ತನಗೆ ತಾನೇ ಪ್ರಶ್ನಿಸಿಕೊಳ್ಳಬೇಕು, ಇತರರನ್ನು ಪ್ರಶ್ನಿಸುವುದು ಸುಲಭ, ತನ್ನನ್ನು ತಾನು ಪ್ರಶ್ನಿಸಿಕೊಳ್ಳುವುದು ಕಷ್ಟ ಎಂದು ರಾಹುಲ್ ಹೇಳಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ಬಂದರೆ, ಹಕ್ಕುಗಳು ಬಂದರೆ ಅದರ ಬುನಾದಿ ಹಾಕಿದ್ದು ಬಸವಜೀ ಅವರಂತಹ ಮಹಾನುಭಾವರು ಅದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ಮತ್ತೇನು ಹೇಳಿದರು?
ಸಮಾಜದ ಮುಂದೆ ಸತ್ಯವನ್ನು ಹೇಳುವುದು ಸುಲಭ ಎಂದು ಭಾವಿಸಬೇಡಿ ಎಂದು ಬಸವ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಕಾಂಗ್ರೆಸ್ ಮುಖಂಡ ಮಾತನಾಡಿದ್ದಾರೆ. ಇಂದು ಅವರಿಗೆ (ಬಸವೇಶ್ವರ) ನಾವು ಹೂವುಗಳನ್ನು ಅರ್ಪಿಸುತ್ತೇವೆ, ಆದರೆ ಅವರು ಬದುಕಿರುವಾಗ ಅವರಿಗೆ ಬೆದರಿಕೆಗಳು ಬಂದಿರಬಹುದು, ಅವರ ಮೇಲೆ ಹಲ್ಲೆ ಕೂಡ ನಡೆದಿರಬಹುದು, ಆದರೆ ಅವರು ಹಿಂದೆ ಸರಿಯಲಿಲ್ಲ, ಸತ್ಯದ ಹಾದಿಯನ್ನು ಬಿಡಲಿಲ್ಲ. ಹೀಗಾಗಿ ಇಂದು ನಾವು ಅವರ ಮುಂದೆ ಹೂಗಳನ್ನು ಅರ್ಪಿಸುತ್ತೇವೆ. ಭಯಪಡುವವನ ಮುಂದೆ ಯಾರೂ ಹೂವುಗಳನ್ನು ಇಡುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ಇದನ್ನೂ ಓದಿ-Amrit Pal Singh ಬಂಧನ, 'ಇದು ಸರೆಂಡರ್ ಅಲ್ಲ', DGP ಮಹತ್ವದ ಹೇಳಿಕೆ
ಲಿಂಗಾಯತ ಸಮುದಾಯದ ಜನರ ಓಲೈಕೆಗೆ ಯತ್ನಿಸಿದರಾ ರಾಹುಲ್?
ವಾಸ್ತವದಲ್ಲಿ , ಬಸವ ಜಯಂತಿ ಆಚರಣೆಯಲ್ಲಿ ರಾಹುಲ್ ಪಾಲ್ಗೊಳ್ಳುವಿಕೆಯು ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ (2023) ಅವರ ಲಿಂಗಾಯತ ಸಮುದಾಯವನ್ನು ಓಲೈಸಲು ಪಕ್ಷದ ಪ್ರಯತ್ನಗಳ ಒಂದು ಭಾಗ ಎಂದೇ ವಿಶ್ಲೇಶಿಸಲಾಗುತ್ತಿದೆ. ಅವರ ಎರಡು ದಿನಗಳ ಕರ್ನಾಟಕ ಪ್ರವಾಸ ಇಂದಿನಿಂದ (ಏಪ್ರಿಲ್ 23) ಆರಂಭಗೊಂಡಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.