ಬೆಳಗಾವಿ ಬಿಜೆಪಿಯಲ್ಲಿ ಇಂದು ಮಹಾಸ್ಫೋಟ? ಕುತೂಹಲ ಮೂಡಿಸಿದ ಲಕ್ಷ್ಮಣ ಸವದಿ ನಡೆ!
ಅಥಣಿ ಕ್ಷೇತ್ರದಿಂದ ಸ್ಪರ್ಧೆ ಬಗ್ಗೆ ಮಾಜಿ ಸಚಿವ ಲಕ್ಷ್ಮಣ ಸವದಿ ಇವತ್ತೇ ತಿರ್ಮಾನ ಮಾಡುತ್ತಾರಾ? ಅನ್ನೋ ಪ್ರಶ್ನೆ ಮೂಡಿದೆ. ಬಿಜೆಪಿ ಬಿಟ್ಟು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಾರಾ? ಅನ್ನೂ ಕುತೂಹಲ ಸಹ ಮೂಡಿದೆ.
ಚಿಕ್ಕೋಡಿ: ಬೆಳಗಾವಿ ಬಿಜೆಪಿಯಲ್ಲಿ ಇಂದು ಮಹಾಸ್ಫೋಟ ಆಗುತ್ತಾ? ಅನ್ನೋ ಪ್ರಶ್ನೆ ಮೂಡಿದೆ. ಮಾಜಿ ಸಚಿವ ಲಕ್ಷ್ಮಣ ಸವದಿ ನಡೆ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ‘ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ, ಹೀಗಾಗಿ ಇಂದು ಒಂದು ನಿರ್ಣಯಕ್ಕೆ ಬರುತ್ತೇನೆಂದು ಸವದಿ.ಘೋಷಣೆ ಮಾಡಿದ್ದರು.
ಹೌದು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾರ್ಚ್ 27ಕ್ಕೆ ಒಂದು ತೀರ್ಮಾನಕ್ಕೆ ಬರುತ್ತೇನೆ ಎಂದು ಹೇಳಿದ್ದರು. ಸವದಿ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಅಥಣಿ ಕ್ಷೇತ್ರದಿಂದ ಸ್ಪರ್ಧೆ ಬಗ್ಗೆ ಇವತ್ತೇ ತಿರ್ಮಾನ ಮಾಡುತ್ತಾರಾ? ಅನ್ನೋ ಪ್ರಶ್ನೆ ಮೂಡಿದೆ. ಬಿಜೆಪಿ ಬಿಟ್ಟು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಾರಾ? ಅನ್ನೂ ಕುತೂಹಲ ಸಹ ಮೂಡಿದೆ.
ಇದನ್ನೂ ಓದಿ: ಕೊಟ್ಟ ಹಣ ವಾಪಸ್ ಕೊಟ್ಟಿಲ್ಲ ಅಂತಾ ಮಾಜಿ ಸಿಎಂ ಬಂಗಾರಪ್ಪ ಪುತ್ರಿ ಮನೆ ಮುಂದೆ ಪ್ರೊಟೆಸ್ಟ್..!
ಕಳೆದ ಮಾರ್ಚ್ 17ರಂದು ಸವದಿ ಅಥಣಿಯಲ್ಲಿ ಮುಸ್ಲಿಂ ಸಮುದಾಯ ಸಮಾವೇಶ ನಡಸಿದ್ದರು. ಈ ಸಮಾವೇಶದಲ್ಲಿ ಮಾ.27ಕ್ಕೆ ಒಂದು ತೀರ್ಮಾನಕ್ಕೆ ಬರುತ್ತೇನೆಂದು ಘೋಷಿಸಿದ್ದರು. ಇವತ್ತು ದಿನಾಂಕ 27 ಆಗಿರುವುದರಿಂದ ಸವದಿ ಯಾವ ನಿರ್ಣಯ ತೆಗೆಳ್ಳುತ್ತಾರೆ ಅನ್ನೋ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ಅಥಣಿ ಬಿಜೆಪಿ ಟಿಕೆಟ್ ವಿಚಾರ ಗೊಂದಲಕ್ಕೆ ಕಾರಣವಾಗಿದೆ. ಒಂದು ಕಡೆ ಮಹೇಶ್ ಕುಮಠಳ್ಳಿ ಮತ್ತೊಂದು ಕಡೆ ಲಕ್ಷ್ಮಣ ಸವದಿ ಇಬ್ಬರ ನಡುವೆ ಟಿಕೆಟ್ ಫೈಟ್ ನಡೆಯುತ್ತಿದೆ.
ಇವರಿಬ್ಬರ ನಡುವೆ ಇದೀಗ ರಮೇಶ್ ಜಾರಕಿಹೊಳಿ ಎಂಟ್ರಿಯಾಗಿದೆ. ರಮೇಶ್ ಜಾರಕಿಹೊಳಿ ಎಂಟ್ರಿಯಿಂದ ಮೂಲ ಬಿಜೆಪಿಯಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ. ಭಾನುವಾರವಷ್ಟೇ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಸವದಿ ಭಾಗವಸಿದ್ದಾರೆ. ಇವತ್ತು ಅಥಣಿಗೆ ಆಗಮಿಸಿ ಒಂದು ತೀರ್ಮಾನ ಬರುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಅವರು ಯಾವ ತೀರ್ಮಾನಕ್ಕೆ ಬರುತ್ತಾರೆ ಎಂಬುವುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ರಾಜಧಾನಿಯಲ್ಲಿ "ನಮ್ಮ ಕ್ಲಿನಿಕ್" ಜೊತೆ ₹ಆಯುಷ್ಮತಿ ಕ್ಲಿನಿಕ್" ತೆರೆಯಲು ಪಾಲಿಕೆ ಸಿದ್ಧತೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.