ದಾವಣಗೆರೆ : ಪಕ್ಷ ತೊರೆದಿರುವ ಲಕ್ಷ್ಮಣ್‌ ಸವದಿ ಒಬ್ಬ ವಿಶ್ವಾಸಘಾತುಕ, ಬೆನ್ನಿಗೆ ಚೂರಿ ಹಾಕುವವನು, ಪಕ್ಷ ಅವರಿಗೆ ಈ ಹಿಂದೆ ಏನು ಮಾಡಿದೆ ಎಂಬುವುದನ್ನು ಮರೆತು ಮಾತಾಡುತ್ತಿದ್ದಾರೆ ಎಂದು ಎಂ.ಪಿ. ರೇಣುಕಾಚಾರ್ಯ ಲಕ್ಷ್ಮಣ್‌ ಸವದಿಯನ್ನು ತರಾಟೆಗೆ ತೆಗೆದುಕೊಂಡರು.


COMMERCIAL BREAK
SCROLL TO CONTINUE READING

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಕ್ಷ್ಮಣ್‌ ಸವದಿ ಪಕ್ಷಾಂತರ ಕುರಿತು ಪ್ರತಿಕ್ರಿಯೆ ನೀಡಿದರು. ಪಕ್ಷ ತೊರೆದಿರುವ ಲಕ್ಷ್ಮಣ ಸವದಿ ವಿಶ್ವಾಸಘಾತುಕ, ಪಕ್ಷ ದ್ರೋಹಿ, ಅವರು ಹಿಂದಿನದ್ದೆಲ್ಲ ಮರೆತು ಮಾತಾಡುತ್ತಿದ್ದಾರೆ. ಅವರಿಗೆ ದೇವರು ಒಳ್ಳೆಯದನ್ನ ಮಾಡಲಿ ಎಂದು ಸವದಿಗೆ ರೇಣುಕಾಚಾರ್ಯ ಅವರು ಶುಭ ಕೋರಿದರು.


ಇದನ್ನೂ ಓದಿ: ಲಕ್ಷ್ಮಣ ಸವದಿ ಜೊತೆ ಅನೇಕರು ಕಾಂಗ್ರೆಸ್ ಸೇರಲಿದ್ದಾರೆ: ಡಿ.ಕೆ.ಶಿವಕುಮಾರ್


ಅಲ್ಲದೆ, ಸವದಿ ಉಪ ಚುನಾವಣೆಯಲ್ಲಿ ನಾಲ್ಕೈದು ಶಾಸಕರನ್ನ ಗೆಲ್ಲಿಸಿದೆ ಎಂದು ಹೇಳುತ್ತಾರೆ. ಆದ್ರೆ, ಅಥಣಿಯಲ್ಲಿ ಲಕ್ಷ್ಮಣ ಸವದಿ ಗೆಲ್ಲಲಿಲ್ಲ, ಸೋತು ಸುಣ್ಣವಾದರು. ಸೋತರು ಪಕ್ಷ ಉಪಮುಖ್ಯಮಂತ್ರಿ ಮಾಡಿ, ಸಚಿರವನ್ನಾಗಿ ಮಾಡಿತ್ತು. ನಿಜವಾಗಿಯೂ ನಮಗೆ ಅನ್ಯಾಯ ಮೋಸವಾಗಿದೆ. ಗೆದ್ದಿದ್ದ ನಮಗೆ ಸಚಿವ ಸ್ಥಾನವನ್ನು ನೀಡಲಿಲ್ಲ. ಸವದಿಗೆ ನೀಡಲಾಗಿತ್ತು ಎಂದರು.


ಸವದಿ ಕಾಂಗ್ರೆಸ್‌ಗೆ ಹೋದರೆ ಏನ್‌ ದೊಡ್ಡ ಅಂತರದಲ್ಲಿ ಗೆಲ್ಲಲ್ಲ. ಸೋತವರನ್ನ ರತ್ನಗಂಬಳಿ ಹಾಸಿ ಕಾಂಗ್ರೆಸ್ ನವರು ಸ್ವಾಗತಿಸಿದ್ದಾರೆ. ಯಾವುದೇ ಕಾರಣಕ್ಕೂ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಮುಂದೆ ಮತ್ತೆ ಬಿಜೆಪಿಯೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಬಿಜೆಪಿಗೆ ರಾಜೀನಾಮೆ ನೀಡಿ ಸವದಿ ತಪ್ಪು ನಿರ್ಧಾರ ಮಾಡಿದ್ದೀರಿ. ಈಗಲೇ ಆತ್ಮಾವಲೋಕನ ಮಾಡಿಕೊಳ್ಳಲಿ. ತಮ್ಮ ನಿರ್ಧಾರವನ್ನ ಪುನರ್ ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಲಕ್ಷ್ಮಣ್‌ ಸವದಿಗೆ ರೇಣುಕಾಚಾರ್ಯ ಸಲಹೆ ನೀಡಿದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.