ಒಂದು ಫೋನ್ ಕಾಲ್ಗೆ ಬಂಡಾಯ ಅಭ್ಯರ್ಥಿ ರುದ್ರೇಶ್ ಥಂಡಾ..! ಸೋಮಣ್ಣನ ಹಾದಿ ಸರಳ
ಟಿಕೆಟ್ ಆಕಾಂಕ್ಷಿಗಳಲ್ಲೇ ರುದ್ರೇಶ್ ಹೆಚ್ಚು ಪ್ರಬಲವಾಗಿ ಗುರುತಿಸಿಕೊಂಡಿದ್ದರು, ಬಳಿಕ ಬಂಡಾಯ ಬಾವುಟ ಹಾರಿಸಿದ್ದರು. ಸೋಮಣ್ಣ ವಿರುದ್ದ ಸಾಲುಸಾಲು ಆರೋಪ ಮಾಡಿದ್ದರಿಂದ ಗರಂಗೊಂಡ ಅರುಣ್ ಸೋಮಣ್ಣ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೂರಿದ್ದರು. ರುದ್ರೇಶ್‌ಗೆ ಬಿಎಸ್‌ವೈ ಫೋನಾಯಿಸಿ ಪಕ್ಷ ಸಂಘಟನೆಗೆ ಒಡಕು ಮೂಡಿಸಬಾರದು, ಅಭ್ಯರ್ಥಿ ವಿರುದ್ಧ ಮಾತನಾಡಬಾರದು ಎಂದು ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ.
ಚಾಮರಾಜನಗರ : ಸಚಿವ ಸೋಮಣ್ಣ ವಿರುದ್ಧ ಸಾಲುಸಾಲು ಆರೋಪ ಮಾಡಿ ಬೆಂಕಿ ಉಗುಳಿದ್ದ ವಿಜಯೇಂದ್ರ ಆಪ್ತ ಹಾಗೂ ಚಾಮರಾಜನಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ರುದ್ದೇಶ್ ಒಂದೇ ಒಂದು ಫೋನ್ ಕರೆಗೆ ಥಂಡಾ ಹೊಡೆದಿದ್ದಾರೆ. ಅಲ್ಲದೆ, ಪಕ್ಷದ ನಿರ್ಧಾರಕ್ಕೆ ಜೈ ಎಂದಿದ್ದಾರೆ.
ಹೌದು.. ಬಿಜೆಪಿ ನಾಯಕ ಯಡಿಯೂರಪ್ಪ ಫೋನ್ ಮಾಡಿ ಬಿಗಿ ಮಾಡಿದ ಹಿನ್ನೆಲೆಯಲ್ಲಿ ರುದ್ರೇಶ್ ಫುಲ್ ಥಂಡಾ ಹೊಡೆದು ಕ್ಷೇತ್ರದಿಂದ ಹೊರ ಹೋಗಿದ್ದು ಚುನಾವಣೆಯಲ್ಲಿ ನೇರವಾಗಿ ಭಾಗಿಯಾಗುವುದಿಲ್ಲ ಎಂದು ಮೂಲಗಳು ಖಚಿತ ಪಡಿಸಿವೆ. ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸೋಮಣ್ಣ ವಿರುದ್ದ ಸಾಲುಸಾಲು ಆರೋಪ ಮಾಡಿದ್ದರಿಂದ ಗರಂಗೊಂಡ ಅರುಣ್ ಸೋಮಣ್ಣ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೂರಿದ್ದರು. ರುದ್ರೇಶ್‌ಗೆ ಬಿಎಸ್‌ವೈ ಫೋನಾಯಿಸಿ ಪಕ್ಷ ಸಂಘಟನೆಗೆ ಒಡಕು ಮೂಡಿಸಬಾರದು, ಅಭ್ಯರ್ಥಿ ವಿರುದ್ಧ ಮಾತನಾಡಬಾರದು ಎಂದು ಬುದ್ಧಿ ಹೇಳಿ ಸೈಲೆಂಟ್ ಮೂಡಿಸಿ ಕ್ಷೇತ್ರ ಬಿಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಇಂದು ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ ಸಾಧ್ಯತೆ..! ಶೆಟ್ಟರ್‌ಗೆ ಸಿಗುತ್ತಾ ಟಿಕೆಟ್..?
ಸುದ್ದಿಗೋಷ್ಠಿ ನಡೆಸಿದ ಮಾರನೆಯ ದಿನವೇ ಅಂದರೇ ಗುರುವಾರವೇ ರುದ್ರೇಶ್ ಬೆಂಗಳೂರಿಗೆ ತೆರಳಿದ್ದಾರೆ. ಟಿಕೆಟ್ ಆಕಾಂಕ್ಷಿಗಳಲ್ಲೇ ರುದ್ರೇಶ್ ಹೆಚ್ಚು ಪ್ರಬಲವಾಗಿ ಗುರುತಿಸಿಕೊಂಡಿದ್ದರು, ಬಳಿಕ ಬಂಡಾಯ ಬಾವುಟ ಹಾರಿಸಿದ್ದರು. ಈಗ ಅವರೇ ಸೈಲೆಂಟಾಗಿರುವುದರಿಂದ ಚಾಮರಾಜನಗರದಲ್ಲಿ ಸೋಮಣ್ಣ ಹಾದಿ ಮತ್ತಷ್ಟು ಸಲೀಸಲಾಗಿದೆ.
ಬಂಡಾಯ ಶಮನ : ಚಾಮರಾಜನಗರ ಟಿಕೆಟ್ ಘೋಷಣೆಯಾದ ಬಳಿಕ ಸ್ಫೋಟಗೊಂಡಿದ್ದ ಬಂಡಾಯಕ್ಕೆ ಗುರುವಾರ ಬಿಜೆಪಿ ಮುಲಾಮು ಹಚ್ಚಿದ್ದು ನಾಗಶ್ರೀ ಪ್ರತಾಪ್ ಹೊರತುಪಡಿಸಿ ರಾಮಚಂದ್ರು, ನಿಜಗುಣರಾಜು, ಡಾ.ಎ.ಆರ್.ಬಾಬು ಮತ್ತಿತ್ತರ ಆಕಾಂಕ್ಷಿಗಳು ಸೋಮಣ್ಣಗೆ ಜೈ ಎಂದು ಪಕ್ಷದ ನಿರ್ಧಾರ ಒಪ್ಪಿಕೊಂಡಿದ್ದಾರೆ. ಈಗ ರುದ್ರೇಶ್ ಅವರ ವಿರೋಧವೂ ಕ್ಷೇತ್ರದಲ್ಲಿ ಇಲ್ಲದಿರುವುದರಿಂದ ಒಂದೇ ದಿನಕ್ಕೇ ಸೋಮಣ್ಣ ತಕ್ಕಮಟ್ಟಿಗೆ ಬಂಡಾಯ ಉಪಶಮನ ಮಾಡಿದ್ದು ಅವರ ಹಾದಿ ಮತ್ತಷ್ಟು ಸಲೀಸಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.