ಯಡಿಯೂರಪ್ಪನವರ ರಾಜಕೀಯ ಭವ್ಯ ಭವಿಷ್ಯಕ್ಕೆ ಮುನ್ನುಡಿ ಬರೆದಿತ್ತು ಸಿಕೆಆರ್ 454..!
ನಾಮಪತ್ರ ಸಲ್ಲಿಸುವಾಗಲೆಲ್ಲಾ ಈ ನಂಬರ್ ಶುಭಶಕುನವನ್ನೇ ನುಡಿಯುತ್ತಿತ್ತು ಯಾಕೆ ಗೊತ್ತಾ? ಬಾಸಿಡರ್ ಕಾರು ಬಳಸುತ್ತಿದ್ದ ತಂದೆ, ಪುತ್ರನ ರಾಜಕೀಯ ಭವಿಷ್ಯಕ್ಕೆ ಇದೇ ಲಕ್ಕಿ ನಂಬರ್ ಆಯ್ತಾ...ಏನಿದರ ಗುಟ್ಟು ?.
ಬೆಂಗಳೂರು: ನಾಮಪತ್ರ ಸಲ್ಲಿಸುವಾಗಲೆಲ್ಲಾ ಈ ನಂಬರ್ ಶುಭಶಕುನವನ್ನೇ ನುಡಿಯುತ್ತಿತ್ತು ಯಾಕೆ ಗೊತ್ತಾ? ಬಾಸಿಡರ್ ಕಾರು ಬಳಸುತ್ತಿದ್ದ ತಂದೆ, ಪುತ್ರನ ರಾಜಕೀಯ ಭವಿಷ್ಯಕ್ಕೆ ಇದೇ ಲಕ್ಕಿ ನಂಬರ್ ಆಯ್ತಾ...ಏನಿದರ ಗುಟ್ಟು ?.
ಇದನ್ನೂ ಓದಿ: ಪಕ್ಷದಲ್ಲಿ ಕಡೆಗಣಿಸುತ್ತಿರುವುದಕ್ಕೆ ಮಾರ್ಮಿಕ ಒಗಟಿನ ಪೋಸ್ಟ್ ಮಾಡಿದ ತೇಜಸ್ವಿನಿ ಅನಂತ್ ಕುಮಾರ್!
ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ಈ ಬಾರಿ ಹಲವು ಅಚ್ಚಿರಿಗಳಿಗೆ ಕಾರಣವಾಗಿದೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಲ್ಲದ ಈ ಚುನಾವಣೆಯನ್ನು ಕಾರ್ಯಕರ್ತರು ಅರಗಿಸಿಕೊಳ್ಳುವುದು ಕಷ್ಟವಾದರೂ, ಬಿ.ಎಸ್.ವೈ ಕ್ಷೇತ್ರವನ್ನು ಪುತ್ರ ಬಿ.ವೈ ವಿಜಯೇಂದ್ರಗೆ ಧಾರೆ ಎರೆದಿದ್ದಾರೆ. ತಂದೆ ರಾಜಕೀಯ ರಾಜರಥವನ್ನು ಮುನ್ನಡೆಸಲು ಬಿ.,ವೈ ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಬಿ.ವೈ ವಿಜಯೇಂದ್ರ ಇಂದು ನಾಮಪತ್ರ ಸಲ್ಲಿಸುವ ಮುನ್ನ ತೋಟದ ಮನೆಯಲ್ಲಿ ಕುಟುಂಬ ಪರಿವಾರ ಅವರಿಗೆ ಆರತಿ ಎತ್ತಿ ಶುಭ ಹಾರೈಸಿತು. ಕುಟುಂಬದ ಸದಸ್ಯರು ನಾಮಪತ್ರ ಸಲ್ಲಿಸಲು ಹೊರಡುವಾಗ ದುಬಾರಿ ಕಾರಿನಲ್ಲೇ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ಇದನ್ನೂ ಓದಿ: ತೇರದಾಳ ಕ್ಷೇತ್ರ : ಕಾಂಗ್ರೆಸ್,ಬಿಜೆಪಿಗೆ ಸೆಡ್ಡು ಹೊಡೆಯಲು ಅತೃಪ್ತರಿಂದ ಸ್ವಾಮೀಜಿ ಕಣಕ್ಕೆ
ಆದರೆ ಮನೆಯ ಮುಂದಿನ ವರಾಂಡದಲ್ಲಿ ಬಿಳಿ ಬಣ್ಣದ ಅಂಬಾಸಿಡರ್ ಕಾರು ಎಲ್ಲರನ್ನು ಬರಮಾಡಿಕೊಳ್ಳಲು ಕಾದಿತ್ತು, ಯಡಿಯೂರಪ್ಪ ಪುತ್ರ ವಿಜಯೇಂದ್ರ ರಾಘವೇಂದ್ರ ಹಾಗು ಅವರ ಪತ್ನಿ 30 ವರ್ಷ ಹಳೆಯ ಅಂಬಾಡಿಸರ್ ಕಾರಿನಲ್ಲಿ ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದರು. ಅಂಬಾಸಿಡರ್ ಕಾರು ಯಡಿಯೂರಪ್ಪರಿಗೆ ರಾಜಕೀಯ ಬದುಕಿಗೆ ಹೊಸ ಮುನ್ನುಡಿ ಬರೆದಿದೆ. ಚುನಾವಣೆಯಲ್ಲಿ ಗೆಲವನ್ನು ತಂದುಕೊಟ್ಟ ಕಾರು. ಆ ಕಾರಿನ ನಂಬರ್ ಸಿಕೆಆರ್ 454 ಇದು ಯಡಿಯೂರಪ್ಪನವರಿಗೆ ಲಕ್ಕಿ ನಂಬರ್. ಯಡಿಯೂರಪ್ಪನವರು ರಾಜ್ಯಧ್ಯಕ್ಷರಾದ ನಂತರ ಈ ಕಾರನ್ನು ಖರೀದಿಸಿದರು.
ಪ್ರತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಮನೆಯಿಂದ ಹೊರಡುವಾಗ ಇದೇ ಅಂಬಾಸಿಡರ್ ಕಾರಿನಲ್ಲಿ ಬಿಪಾರಂ ನೊಂದಿಗೆ ಚುನಾವಣಾ ಕಛೇರಿಗೆ ಬರುತ್ತಿದ್ದರು. ಇದೇ ಸಂಪ್ರದಾಯಕ್ಕೆ ಪುತ್ರ ಬಿ.ವೈ ವಿಜಯೇಂದ್ರ ಇಂದು ನಾಂದಿ ಹಾಡಿದರು. ತಂದೆಯಂತೆ ನಾನು ಕೂಡ ರಾಜಕೀಯ ಬದುಕಿನಲ್ಲಿ ಯಶಸ್ಸು ಕಾಣಬೇಕು ಎಂಬ ಮಹದಾಸೆ ವಿಜಯೇಂದ್ರ ಗೆ ಇದೆ ಹೀಗಾಗಿ ಇಂದು ತಂದೆಯ ಲಕ್ಕಿ ಅಂಬಾಡಿಸಿಡರ್ ಕಾರಿನಲ್ಲಿ ಪಯಣಿಸಿ ಹುಚ್ಚರಾಯ ಸ್ವಾಮಿ ದೇವರ ಆಶಿರ್ವಾದ ಪಡೆದರು. ನಂತರ ನಾಮಪತ್ರ ಸಲ್ಲಿಸಿದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.