ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಕರ್ನಾಟಕದ ಶಕುನಿ ಆಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ. ಈ ಬಗ್ಗೆ ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿರುವ ಅವರು, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

‘ಮಹಾಭಾರತದಲ್ಲಿ ಶಕುನಿಯಂತೆ, ಕರ್ನಾಟಕದಲ್ಲಿ ಬೊಮ್ಮಾಯಿ ಶಕುನಿ. ಕರ್ನಾಟಕದ ಪಾಂಡವರನ್ನು ಶಕುನಿ ಉದ್ಧಾರ ಆಗಲು ಬಿಡುವುದಿಲ್ಲ. ಯಾವುದೇ ರಾಜ್ಯ ಸರ್ಕಾರ ಮೀಸಲಾತಿ ವಿಚಾರದಲ್ಲಿ 90 ದಿನದಲ್ಲಿ ಬದಲಾವಣೆ ಮಾಡಿದ್ದನ್ನು ನಾನು ನೋಡಿಲ್ಲ. ಬೊಮ್ಮಾಯಿ‌ ಅವರದ್ದು 420 ಸರ್ಕಾರ’ ಎಂದು ಟೀಕಿಸಿದ್ದಾರೆ.


ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ರದ್ದು ಕ್ರಮ ಸಮರ್ಥಿಸಿಕೊಂಡ ಅಮಿತ್ ಶಾ 


90 ದಿನಗಳಲ್ಲಿ ಮೀಸಲಾತಿಯನ್ನು 3 ಸಾರಿ ಬದಲಾವಣೆ ಮಾಡಿದ್ದಾರೆ. ಅಲ್ಪಸಂಖ್ಯಾತರ ಮೀಸಲಾತಿ ಕಿತ್ತು ಶೇ.2ರಷ್ಟು 2 ಸಮುದಾಯಕ್ಕೆ ಕೊಟ್ಟಿದೆ. 40 ದಿನಗಳಲ್ಲಿ ಎಲೆಕ್ಷನ್ ಇದೆ, ಹೀಗಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ನಾನು ಸರ್ಕಾರಕ್ಕೆ 5 ಪ್ರಶ್ನೆಗಳನ್ನು ಕೇಳುತ್ತೇನೆ. ಶೇ.50ರಷ್ಟು ಮೀಸಲಾತಿ ಮೀರಬಾರದು ಎಂದಿದೆ‌. ಮೋದಿ ಸರ್ಕಾರ ಹೀಗಾಗಲೇ ತಿರಸ್ಕಾರ ಮಾಡಿದ್ದಾರೆ. ಶೇ.56ರಷ್ಟು ಮೀಸಲಾತಿ ಹೇಗೆ ಜಾರಿ ಮಾಡ್ತೀರಾ‌?’ ಎಂದು ಪ್ರಶ್ನಿಸಿದ್ದಾರೆ.


ಹಿಂದುಳಿದ ವರ್ಗದ ಕಮಿಟಿ ಅಂತಿಮ ವರದಿ ಬಂದಿಲ್ಲ, ಸಾಮಾಜಿಕ ಸಮೀಕ್ಷೆ ಮಾಡಿಲ್ಲ, ಹೇಗೆ ಮೀಸಲಾತಿ ಸೌಲಭ್ಯ ಸಮುದಾಯಕ್ಕೆ ಸಿಗಲಿದೆ..? ಯಾಕೆ ಸಮುದಾಯಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ಸಿಎಂ ಬೊಮ್ಮಾಯಿ‌ ಶಕುನಿ, EWSಗೆ ಮುಸ್ಲಿಂಗೆ ಸೇರಿಸಲಾಗಿದೆ. ಮುಸ್ಲಿಂ ಮೀಸಲಾತಿ ಕಿತ್ತು EWSಗೆ ಸೇರಿಸಲಾಗಿದೆ. ಇದು ಸಂವಿಧಾನದ ವಿರೋಧಿ. ಯಾಕೆಂದರೆ EWS ಆರ್ಥಿಕವಾಗಿ ಹಿಂದುಳಿದಿದೆ ಎಲ್ಲಾ ಧರ್ಮಕ್ಕೆ ಸೇರುತ್ತೆ. ಈಗ ಮುಸ್ಲಿಂಗೆ EWSನಲ್ಲಿ‌ ಮೀಸಲಾತಿ ಸಿಗುತ್ತೆ ಅಂತಾ ಏಕೆ ಸುಳ್ಳು ಹೇಳ್ತಾ ಇದ್ದೀರಾ? ಮುಸ್ಲಿಂ ಸಮುದಾಯದ ಶೇ.4ರಷ್ಟು ಮೀಸಲಾತಿ ಕಿತ್ತು ಅನ್ಯಾಯ ಮಾಡುತ್ತಿದ್ದೀರಾ?’ ಎಂದು ಸಿಎಂ ಬೊಮ್ಮಾಯಿ ವಿರುದ್ಧ ಸುರ್ಜೇವಾಲಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.


ಇದನ್ನೂ ಓದಿ: "ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ": ಡಿ.ಕೆ. ಶಿವಕುಮಾರ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.