ಹಾವೇರಿ : ನಾನು ಮುಖ್ಯಮಂತ್ರಿಯಾಗಿ ಪ್ರತಿ ಕ್ಷೇತ್ರಕ್ಕೆ ಕನಿಷ್ಟ ಒಂದು ಸಾವಿರ ಕೋಟಿ ಅನುದಾನ ನೀಡಿದ್ದೇನೆ‌. ನನ್ನ ಕ್ಷೇತ್ರದಲ್ಲಿ ಕನಿಷ್ಟ 2000 ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಜೀವನ ಪರ್ಯಂತ ನಿಮ್ಮ ಸೇವಕನಾಗಿ ಕೆಲಸ ಮಾಡುವ ಅವಕಾಶ ಕಲ್ಪಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತದಾರರಲ್ಲಿ ಮನವಿ ಮಾಡಿಕೊಂಡರು.


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಶಿಗ್ಗಾಂವಿ ಕ್ಷೇತ್ರದ ಕುಣಿಮೆಳ್ಳಿ ಹಳ್ಳಿ, ತೆವರಮೆಳ್ಳಿ, ಕುಂದೂರ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕರಲ್ಲಿ ಮತ ಯಾಚನೆ ಮಾಡಿದರು. ಕಳೆದ 5 ವರ್ಷದ ಅಭಿವೃದ್ಧಿ ಮತ್ತು ಸಮಸ್ಯೆ ವಿಚಾರದಲ್ಲಿ ಚುನಾವಣೆ ಆಗಬೇಕು. ಆದರೆ ವಿರೋಧ ಪಕ್ಷದವರು ಜನರನ್ನು ಕೆರಳಿಸಿ, ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. 2018 ರಲ್ಲಿ ನೀವೆಲ್ಲರೂ ಬಿಜೆಪಿಗೆ ಮತ ಹಾಕಿದ್ದರೂ ಪೂರ್ಣ ಪ್ರಮಾಣದ ಬಹುಮತ ಬಂದಿರಲಿಲ್ಲ. ಒಬ್ಬರಿಗೊಬ್ಬರು ಬೈದಾಡಿಕೊಂಡಿದ್ದ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಮೂಲಕ ಸರ್ಕಾರ ರಚನೆ ಮಾಡಿದರು. ಆದರೆ ಆಡಳಿತದಲ್ಲಿದ್ದ ನಾಯಕರೇ ಸರ್ಕಾರಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದು ಮರು ಆಯ್ಕೆ ಆದರು. ಅದೇ ಸಮಯದಲ್ಲಿ ಕೋವಿಡ್ ಬಂತು. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೋವಿಡ್ ಅನ್ನು ಯಶಸ್ವಿಯಾಗಿ ನಿರ್ವಹಿಸಿ ಪ್ರಶಸ್ತಿ ಕೂಡ ನಮ್ಮ ಸರ್ಕಾರಕ್ಕೆ ಬಂತು. ಪ್ರಧಾನಿ ಮೋದಿ ಕೊಟ್ಟ ಲಸಿಕೆಯಿಂದ ಭಾರತ ಈಗ ಕೋವಿಡ್ ಮುಕ್ತವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.


ಇದನ್ನೂ ಓದಿ: ʼಭಜರಂಗಿʼಯನ್ನ ಕೆಣಕಿ ಯಾರೂ ಉಳಿದಿಲ್ಲ, ಲಂಕೆಯಂತೆ ʼಕಾಂಗ್ರೆಸ್‌ ನಾಶʼವಾಗುತ್ತೆ..!


ಜನಕಲ್ಯಾಣ ಕೆಲಸವನ್ನು ಮಾಡುತ್ತಿದ್ದೇವೆ : ಡಬಲ್ ಎಂಜಿನ್ ಸರ್ಕಾರ ಏನು ಮಾಡಿದೆ ಎಂದು ಕೇಳುವವರಿಗೆ, ಪ್ರಧಾನಿ ಅವರು ಉಚಿತ ಲಸಿಕೆ ಕೊಡುವ ಮೂಲಕ ನಮ್ಮ ಪ್ರಾಣ ಉಳಿಸದರು ಎಂದು ಹೆಮ್ಮೆಯಿಂದ ಹೇಳಬಹುದು. ಒಂದು ವೇಳೆ ಆ ಕೆಲಸ ಆಗಿರದಿದ್ದರೆ ಇಂದಿಗೂ ನಾವು ಮಾಸ್ಕ್ ಹಾಕಿಕೊಂಡೇ ಬದುಕಬೇಕಿತ್ತು. ಒಂದು ವೇಳೆ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಜನರೆಲ್ಲರೂ ಪರದಾಡಬೇಕಿತ್ತು. ರಾಜ್ಯದಲ್ಲಿ ಪ್ರವಾಹ ಬಂತು ಮನೆ ಬಿದ್ದಾಗ, ಪಕ್ಷ ಬೇಧ ಇಲ್ಲದೇ ನನ್ನ ಕ್ಷೇತ್ರದಲ್ಲಿ ಸುಮಾರು 6 ಸಾವಿರ ಮನೆಗಳನ್ನು ನೀಡಿದ್ದೇನೆ‌. ಮರು ಸಮೀಕ್ಷೆ ಮಾಡಿಸಿ ಇನ್ನು ಕೆಲವರಿಗೆ ಪರಿಹಾರ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.


ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ : ನನ್ನ ಕ್ಷೇತ್ರದ ಎಲ್ಲ ಮನೆಗಳಿಗೆ ದೂರದ ತುಂಗಭದ್ರ ನದಿಯಿಂದ 438 ಕೋಟಿ ರೂ ವೆಚ್ಚದಲ್ಲಿ ನೀರು ತಂದು ಮನೆ ಮನೆಗೂ ನಲ್ಲಿ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಶಿಗ್ಗಾಂವ್ ಸವಣೂರ ತಾಲ್ಲೂಕಿನ 32 ಸಾವಿರ ರೈತರಿಗೆ ಡಿಬಿಟಿ ಮೂಲಕ ಸಹಾಯಧನ ತಲುಪಿದೆ. ನಾನು ಸಿಎಂ ಆದ ತಕ್ಷಣ ಜಾರಿ ತಂದ ರೈತ ವಿದ್ಯಾನಿಧಿ ಯೋಜನೆಯಿಂದ ಸುಮಾರು 11 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ‌. ದುಡಿಯುವ ವರ್ಗದ ಎಲ್ಲ ಸಮುದಾಯಗಳಿಗೆ ವಿದ್ಯಾನಿಧಿ ಕೊಡುತ್ತಿದ್ದೇವೆ. ಸ್ವಯಂ ಉದ್ಯೋಗದ ಸ್ತ್ರೀ ಸಾಮರ್ಥ್ಯ ಯೋಜನೆ, ಯುವ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ. 54 ಲಕ್ಷ ರೈತರಿಗೆ ವಿಮೆ ಯೋಜನೆಗಾಗಿ 180 ಕೋಟಿ ರೂ‌ ಹಣ ಮೀಸಲಿಟ್ಟಿದ್ದೇನೆ. ಶಿಗ್ಗಾಂವ್ ನಲ್ಲಿ ಟೆಕ್ಸ್ ಟೈಲ್ ಪಾರ್ಕ್ ಮೂಲಕ 10 ಸಾವಿರ ಯುವಕರಿಗೆ ಕೆಲಸ ಸಿಗುತ್ತದೆ. ಇದರ ಜೊತೆ ಇನ್ನೂ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.


ಇದನ್ನೂ ಓದಿ: Photos: ವರುಣಾ ರೋಡ್ ಶೋದಲ್ಲಿ ಶಿವರಾಜಕುಮಾರ್, ಸಿದ್ದರಾಮಯ್ಯ ಮಿಂಚಿನ ಸಂಚಾರ


ನಮ್ಮಿಂದಲೇ ಸಾಮಾಜಿಕ ನ್ಯಾಯ : 30 ವರ್ಷಗಳಿಂದ ಬೇಡಿಕೆಯಿದ್ದ ದೀನ ದಲಿತರಿಗೆ ಮೀಸಲಾತಿ ಹೆಚ್ಚಳ, ಆಂತರಿಕ ಮೀಸಲಾತಿ ನೀಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ನಾನು ಮಿಸಲಾತಿ ಹೆಚ್ಚಳ ಮಾಡಿರುವುದಕ್ಕೆ ಜೇನು ಗೂಡಿಗೆ ಕೈ ಹಾಕಬೇಡಿ ಅಂತ ಹೇಳಿದರು. ಆದರೆ, ನಾನು ಉತ್ತರ ಕರ್ನಾಟಕದ ಮಗ ಇದ್ದೇನೆ. ಒಂದು ಕೈ ನೋಡಿಯೇ ಬಿಡುತ್ತೇನೆ ಎಂದು ಮಿಸಲಾತಿ ಹೆಚ್ಚಳ ಮಾಡಿದ್ದೇನೆ. ಒಂದೆಡೆ ಮೂಲ ಸೌಕರ್ಯ ಇನ್ನೊಂದೆಡೆ ಸಾಮಾಜಿಕ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇವೆ. ನಾನು ರಾಜ್ಯ ಪ್ರವಾಸ ಮಾಡಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಸುನಾಮಿ ಇದೆ. ನನ್ನ ಕ್ಷೇತ್ರದಲ್ಲಿ ಸುಮಾರು 25000 ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸ ಇದೆ. ಸದಾ ಕಾಲ ನನಗೆ ಬೆಂಬಲ ಕೊಟ್ಟು ಪ್ರೀತಿ ವಿಶ್ವಾಸದಿಂದ ಬೆಳೆಸಿದ್ದೀರಿ. ಅಭಿವೃದ್ಧಿ ಕಾರ್ಯಗಳನ್ನು ಎಲ್ಲರಿಗೂ ನ್ಯಾಯ ಸಮ್ಮತವಾಗ ಸೇರಲು, ಈಗಾಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲು ನಿಮ್ಮ ಆಶೀರ್ವಾದ ಬೇಕೆಂದು ಸಿಎಂ ಬೊಮ್ಮಾಯಿ ಹೇಳಿದರು.


ಮರು ಸಮೀಕ್ಷೆ : ಕುಂದೂರುನಲ್ಲಿ ರೋಡ್ ಶೊ ನಡೆಸಿ ಮಾತನಾಡಿದ ಸಿಎಂ ಪ್ರವಾಹದಲ್ಲಿ ಮನೆ ಕಳೆದುಕೊಂಡು ಪರಿಹಾರ ದೊರೆಯದವರಿಗೆ ಮರು ಸಮೀಕ್ಷೆ ಮಾಡಿಸಿ ಮನೆ ಕೊಡುವ ಕೆಲಸ ಮಾಡಲಾಗುವುದು. ಮನೆ ಬೀಳದೆ ಇದ್ದರೂ ಪರಿಹಾರ ಪಡೆದವರು, ಒಬ್ಬೊಬ್ಬರು ಎರಡೆರಡು ಬಾರಿ ಪರಿಹಾರ ಪಡೆದವರ ಬಗ್ಗೆ ತನಿಖೆ ನಡೆಸಿ ವಾಪಸ್ ಪಡೆಯಲಾಗುವುದು. ಮನೆ ಕಳೆದುಕೊಂಡ ಬಡವರಿಗೆ ಪರಿಹಾರ ಕೊಡಿಸುವುದು ನನ್ನ ಮೊದಲ ಕರ್ತವ್ಯ ಎಂದು ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.