ಬೆಂಗಳೂರು : ಕಾಂಗ್ರೆಸ್‌ನವರು ಬಿಜೆಪಿಯವರನ್ನು ಕರೆದುಕೊಂಡಿರಬಹುದು. ಆದರೆ ಬಿಜೆಪಿಯ ಮತ ಬ್ಯಾಂಕ್ ಬಿಟ್ಟು ಹೋಗೋಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.


COMMERCIAL BREAK
SCROLL TO CONTINUE READING

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಕಾಂಗ್ರೆಸ್‌ನವರು ಬಿಜೆಪಿಯವರನ್ನು ಕರೆದುಕೊಂಡಿರಬಹುದು. ಆದರೆ ಬಿಜೆಪಿಯ ಮತ ಬ್ಯಾಂಕ್ ಬಿಟ್ಟು ಹೋಗೋಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಲಕ್ಷ್ಮಣ ಸವದಿ ಮತ್ತು ಜಗದೀಶ್‌ ಶೆಟ್ಟರ್‌ ಪಕ್ಷ ತೊರೆದಿದ್ದು ಬಿಜೆಪಿ ಮತಗಳ ಮೇಲೆ ಪರಿಣಾಮ ಬೀರಲ್ಲ ಎನ್ನುವ ಸಂದೇಶ ನೀಡಿದರು.


ಇದನ್ನೂ ಓದಿ: Karnataka election 2023: ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ವಿರುದ್ದ ಬಿಸಿ ಪಾಟೀಲ್ ವಾಗ್ದಾಳಿ!


ಶೆಟ್ಟರ್ ಅವರು ಮಾಡಿರುವ ಆರೋಪದ ಬಗ್ಗೆ ಮಾತನಾಡಿ, ಯಾರಾದರೂ ಪಕ್ಷ ಬಿಟ್ಟು ಹೋದಾಗ ಏನಾದರೂ ಒಂದು ಕಾರಣ ಕೊಡಬೇಕು. ಕಳೆದ 25 ವರ್ಷದ ಅವರ ರಾಜಕೀಯ ಜೀವನದಲ್ಲಿ ಬಿಜೆಪಿ ಶೆಟ್ಟರ್‌ಗೆ ಎಲ್ಲವನ್ನೂ ಕೊಟ್ಟಿದೆ. ಅವರನ್ನ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಹೋಗಿದ್ದಾರೆ ಅದಕ್ಕೊಂದು ನೆಪ ಅಷ್ಟೇ ಎಂದರು. ಅಲ್ಲದೆ, ಜಗದೀಶ್ ಶೆಟ್ಟರ್ ಅವರು ವಾಪಸ್ಸು ಬರುವ ಬಗ್ಗೆ ಮಾತನಾಡಿ, ಅವರು ಹಿಂದುರಿಗಿ ಪಕ್ಷಕ್ಕೆ ಬರುವ ನಿರೀಕ್ಷೆ ಮಾಡೋಲ್ಲ ಎಂದು ಹೇಳಿದರು.


ಚುನಾವಣಾ ಬಳಿಕ ಅವಮಾನ : ವೀರೇಂದ್ರ ಪಾಟೀಲ್, ಬಂಗಾರಪ್ಪ, ದೇವರಾಜ ಅರಸರನ್ನ ಹೊರಹಾಕಿದನಂಥ ಪಕ್ಷಕ್ಕೆ ಶೆಟ್ಟರ್ ಹೋಗಿದ್ದಾರೆ. ಮೊದಲು ಸನ್ಮಾನ ಮಾಡಿ ಚುನಾವಣಾ ಬಳಿಕ ಅವಮಾನ ಮಾಡ್ತಾರೆ. ಜಗದೀಶ ಶೆಟ್ಟರ್ ಅವರನ್ನ ಬಳಸಿಕೊಂಡು ಹೊರಗೆ ಹಾಕುತ್ತಾರೆ. ಬಿಎಸ್‌ವೈ ಇರೋತನಕ ಲಿಂಗಾಯತರು ನಮ್ಮ ಜೊತೆ ಇರುತ್ತಾರೆ ಎಂದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ